ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ರಮ
Watering program for saplings through tanker
ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ರಮ
ದೇವರಹಿಪ್ಪರಗಿ, 31 : ತಾಲೂಕಿನ ಕೋರವಾರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಸಸಿಗಳಿಗೆ ಟ್ಯಾಂಕರ್ ಮೂಲಕ ನೀರು ಹಾಕುವ ಕಾರ್ಯಕ್ರಮವು ಜಯ ಕರ್ನಾಟಕ ಸಂಘಟನೆ ಹಾಗೂ ಗ್ರಾಮದ ಪ್ರಮುಖರ ಸಹಕಾರ, ಸಹಾಯಂದಿಂದ ಶುಕ್ರವಾರದಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಮುಖಂಡರಾದ ಅಪ್ಪುಗೌಡ ಬಾ,ಪೋಲಿಸ್ ಪಾಟೀಲ, ವಹಿಸಿದರು, ನೇತೃತ್ವವನ್ನು ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರರಾದ ಚನ್ನಪ್ಪಗೌಡ ಎಸ್, ಬಿರಾದಾರ, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ರಸ್ತೆಯ ಬದಿ ಮತ್ತು ಶಾಲೆಯ ಆವರಣಗಳಲ್ಲಿ ಸಸಿಗಳನ್ನು ನೆಟ್ಟು ಹೋಗಿದ್ದಾರೆ ಇದುವರೆಗೂ ಸಹ ಸಸಿಗಳಿಗೆ ನೀರು ಹಾಕದ ಕಾರಣ ಸಸಿಗಳು ಒಣಗಿ ಹೋಗುತ್ತಿವೆ "ಕಾಡು ಬೆಳಸಿ ನಾಡು ಉಳಿಸಿ" ಎಂದು ಹೇಳುತ್ತಾರೆ ಅದು ಇನ್ನೂವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಹೇಳಿದರು ಸಿದ್ರಾಮಪ್ಪ ಎಸ್, ಅವಟಿ, ತಾಲೂಕಾಧ್ಯಕ್ಷರು, ದೇವರ ಹಿಪ್ಪರಗಿ, "ಹಸಿರು ರೈತರ ಉಸಿರು" ಎಂದು ಹೇಳಿ ಅರಣ್ಯ ಅಧಿಕಾರಿಗಳು ಕಳಪೆ ಮಟ್ಟದ ಕಾಮಗಾರಿಯನ್ನು ನಿರ್ಮಿಸಿದ್ದಾರೆ ಎಂದು ಖಂಡಿಸಿದರು.
ಇದೇ ಸಂದರ್ಭದಲ್ಲಿ ಮಾಂತೇಶ ಮಠ, ಕೋರವಾರೇಶ್ವರ ಜನಸ್ನೇಹಿ ಸೇವಾ ಸಂಘದ ಉಪಾಧ್ಯಕ್ಷರು, ಅಶೋಕ ಹುಣಸಗಿ, ಕೋರವಾರೇಶ್ವರ ಟ್ರೇಡರ್ಸ, ಹಾಗೂ ಮಾಂತೇಶ ಕಮತಗಿ, ನಿಯಂತ್ರಣ ಅಧಿಕಾರಿಗಳು, ಕೋರವಾರ, ಶಾಂತಪ್ಪ ಕೆಮಶೆಟ್ಟಿ, ಬಸಲಿಂಗಪ್ಪಗೌಡ ಬಿರಾದಾರ, ಶಿವನಗೌಡ ಬಿರಾದಾರ, ಅನೀಲಗೌಡ ಬಿರಾದಾರ, ಸಂಗನಗೌಡ ಬಿರಾದಾರ, ಸುನೀಲ ಹೂಗಾರ, ಸಂದೀಪ ಬಿರಾದಾರ, ನಜೀರ ಕಕ್ಕಳಮೇಳಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 