ಸುಕುಮಾರ ಬನ್ನೂರೆ, ಕಾಗವಾಡ:
ಲೋಕಸಭಾ ಚುನಾವಣೆ ಪೂರ್ವದಲ್ಲಿ ಕೃಷ್ಣಾ ನದಿಗೆ ನೀರು ಹರಿಸುವದಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯದ ಹಿರಿಯ ರಾಜಕೀಯ ಮುಖಂಡರು ಬಹಿರಂಗವಾಗಿ ಜನರಿಗೆ ಭರವಸೆ ನೀಡಿದ್ದರು. ಆದರೆ ಚುನಾವಣೆ ಕೊನೆಗೊಂಡರು ನದಿಗೆ ನೀರು ಹರಿಸಲಿಲ್ಲಾ. ಕಾಗವಾಡ ಮತ್ತು ಅಥಣಿ ತಾಲೂಕಿನ ಜನತೆ ನೀರಿಗಾಗಿ ಪರದಾಡುತ್ತಿದ್ದು ಸಮಸ್ಯೆ ಇನ್ನಷ್ಟು ಗಂಭೀರಗೊಂಡಿದೆ.
ಕಾಗವಾಡ ಮತ್ತು ಅಥಣಿ ತಾಲೂಕಿನ 6 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ನದಿ ಸಂಪೂರ್ಣವಾಗಿ ಬತ್ತಿಹೋಗಿದ್ದರಿಂದ 78 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಬಹುಗ್ರಾಮ ನೀರಿನ ಯೋಜನೆ ಸ್ಥಗಿತಗೊಂಡಿದೆ. ಇದರಿಂದ ಆ ಗ್ರಾಮಗಳಿಗೆ ನೀರು ಪೂರೈಸಲು ಕಷ್ಟಕರವಾಗಿದೆ. ಈ ಮುಂದಿನ ದಿನಗಳಲ್ಲಿ ಜನರಿಗೆ ಎಲ್ಲಿಂದೂ ನೀರು ಪೂರೈಸುವುದು ಎಂಬ ಚಿಂತೆ ಕಾಡುತ್ತಿದೆಯೆಂದು ಅಥಣಿ ತಾಲೂಕಾ ಪಂಚಾಯತಿ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ ಇವರು ತಾಲೂಕಿನ ನೀರಿನ ಸಮಸ್ಯೆ ಬಗ್ಗೆ ವಿಚಾರಿಸಿದಾಗ ಮಾಹಿತಿ ನೀಡಿದರು.
ತುಟಿ ಬಿಚ್ಚಿ, ಪಿಟಿಕ ಅನ್ನದೇ ಉಭಯ ಪಕ್ಷಗಳ ಮುಖಂಡರು:
ಲೋಕಸಭಾ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ರಾಜಕೀಯ ಮುಖಂಡರು ನದಿಗೆ ನೀರು ಹರಿಸುವದಾಗಿ ಸ್ಪಧರ್ೆಯಲ್ಲಿ ಭಾಗವಹಿಸಿದಂತೆ ಮಾತನಾಡುತ್ತಿದ್ದರು. ಆದರೆ ಚುನಾವಣೆ ಪ್ರಾರಂಭವಾದ ನಂತರ ಕೊನೆವರೆಗೆ ಉಭಯ ಪಕ್ಷಗಳ ರಾಜಕೀಯ ಮುಖಂಡರು, ಅವರ ಕಾರ್ಯಕರ್ತರು ನದಿಗೆ ನೀರು ಏಕೆ ಹರಿಸಲಿಲ್ಲಾ ಎಂದು ಯಾರೋಬ್ಬರು ಬಹಿರಂಗವಾಗಿ ಕೇಳದೆ ನೀರಿನ ವಿಷಯದಲ್ಲಿ ತುಟಿ ಬಿಚ್ಚಿ, ಪಿಟಿಕ ಅನ್ನಲಿಲ್ಲಾ. ಇದು ಮತದಾರರು ಸಹಿಸಿದ್ದಾರೆ. ಈಗಾದರೆ ಮುಖಂಡರು ನೀರು ಹರಿಸಲು ಪ್ರಯತ್ನಿಸಬೇಕೆಂದು ಅನೇಕ ಸಾಮಾನ್ಯ ನಾಗರಿಕರು ಪತ್ರೀಕೆ ವರದಿಗಾರರೊಂದಿಗೆ ಮಾತನಾಡುವಾಗ ತಮ್ಮ ಅಳಲು ತೋಡಿಕೊಂಡರು.
ತೋಟಗಳಲ್ಲಿಯ ರೈತರ ಭಾವಿ, ಕೊಳವೆಭಾವಿಗಳಿಂದ ನೀರು ಸಂಗ್ರಹ:
ಕೃಷ್ಣಾ ನದಿ ಬತ್ತಿಹೋಗಿದ್ದರಿಂದ ನೀರಿನ ಸಮಸ್ಯೆ ತೀರಾ ಗಂಭೀರಗೊಂಡಿದೆ. ಜನರಿಗೆ ನೀರು ಪೂರೈಸುವ ಎಲ್ಲ ವ್ಯವಸ್ಥೆಗಳು ನಿಂತು ಹೋಗಿವೆ. ಇದರಿಂದ ತಾಲೂಕಾ ದಂಡಾಧಿಕಾರಿಗಳ ನೇತೃತ್ವವದಲ್ಲಿ ಅಧಿಕಾರಿಗಳ ಸಮೀತಿ ರಚನೆ ಮಾಡಿದ್ದು, ಗ್ರಾಮಗಳ ಬಳಿಯಿರುವ ಯಾವುದೇ ರೈತರ ಭಾವಿ, ಕೋಳವೆಭಾವಿಗಳು ಗುರುತಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು, ಅಲ್ಲಿಯ ನೀರು ಗ್ರಾಮದ ಜನರಿಗೆ ಪೂರೈಸುವ ಬಗ್ಗೆ ನಿಧರ್ಾರ ಕೈಗೊಳ್ಳಲಾಗಿದೆಯೆಂದು ತಾಲೂಕಾ ಪಂಚಾಯತಿಯ ಕಾರ್ಯನಿವರ್ಾಹಕ ಅಧಿಕಾರಿ ರವಿ ಬಂಗಾರಪನ್ನವರ ಹೇಳಿದರು.
ಲೋಕಸಭಾ ಚುನಾವಣೆ ಪೂರ್ವದಲ್ಲಿ ಕೃಷ್ಣಾ ನದಿಗೆ ನೀರು ಹರಿಸುವದಾಗಿ ಬಿಜೆಪಿ, ಕಾಂಗ್ರೆಸ್ ಪಕ್ಷದ ರಾಜ್ಯದ ಹಿರಿಯ ನಾಯಕರು ಭರವಸೆ ನೀಡಿದ್ದರು. ಆದರೂ ನದಿಗೆ ನೀರು ಬರಬಹುದು. ಈ ಆಸೆಯಿಟ್ಟುಕೊಂಡು ಮತದಾರರು ಚುನಾವಣೆಯಲ್ಲಿ ಯಾವುದೇ ಪ್ರತಿಕ್ರೀಯೆ ನೀಡದೆ, ಮತಚಲಾಯಿಸಿದರು. ಎರಡು ಪಕ್ಷಗಳ ಹಿರಿಯರು ಮಾನವೀಯತೆ ದೃಷ್ಠಿಯಿಂದ ಜನಜಾನುವಾರಗಳಿಗಾಗಿ ಕೃಷ್ಣೆಯಲ್ಲಿ ಬೇಗನೆ ನೀರು ಹರಿಸದೆ ಹೋದರೆ ನೀರಿಗಾಗಿ ಇನ್ನಷ್ಟು ಹಾಹಾಕಾರ ಉಂಟಾಗುವುದು ಖಚಿತ.
ಕೃಷ್ಣಾ ನದಿ ಸಂಪೂರ್ಣವಾಗಿ ನೀರಿಲ್ಲದೇ ಬತ್ತಿಹೋಗಿದ ಘಟಣೆ ಸನ್ 2003ರಲ್ಲಿ ಸಂಭವಿಸಿತ್ತು. ಆಗ ನೀರಿಗಾಗಿ ರೈತರು ಹೋರಾಟಕ್ಕೆ ಇಳಿದಿದ್ದರೂ. ರೈತರ ಹೋರಾಟದಿಂದ ಅನೇಕ ವಾಹನಗಳು ಜಖಮಗೊಂಡಿದ್ದವು. ಈ ಹಳೆ ಘಟಣೆಯನ್ನು ನೆನಪಿಸಿ, ಈ ವರ್ಷದ ಸ್ಥಿತಿ ಆಗೀಣಕ್ಕಿಂತ ಗಂಭೀರಗೊಳ್ಳುತ್ತಿದೆ. ಎಲ್ಲ ರಾಜಕೀಯ ಪಕ್ಷದವರು ನೀರಿನಲ್ಲಿ ರಾಜಕೀಯ ಮಾಡದೆ ತಮ್ಮ ಪ್ರತಿಷ್ಠೆ ಬದಿಗಿಟ್ಟು, ಮಹಾರಾಷ್ಟ್ರ ರಾಜ್ಯದ ಅಧಿಕಾರಿಗಳೊಂದಿಗೆ ಚಚರ್ಿಸಿ ಯಾವುದೇ ಕಾಲಕ್ಕೆ ನೀರು ಹರಿಸಲು ಪ್ರಯತ್ನಿಸಬೇಕು.
ರವೀಂದ್ರ ಗಾಣಿಗೇರ, ಐನಾಪೂರ ರೈತ ಹೀತರಕ್ಷಣಾ ಸಮೀತಿ ಆಧ್ಯಕ್ಷರು.
32 ಟ್ಯಾಂಕರ್ಗಳಿಂದ ನೀರು ಪೂರೈಕೆ:
ಕಾಗವಾಡ ಮತ್ತು ಅಥಣಿ ತಾಲೂಕಿನ ಗ್ರಾಮಗಳ ಜನತೆಗೆ ತಾಲೂಕಾ ಆಡಳಿತ ಇಲಾಖೆಯಿಂದ 32 ಗ್ರಾಮಗಳಿಗೆ ಟ್ಯಾಂಕರ್ಗಳ ಮುಖಾಂತರ ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕರ್ಗಳಿಗೆ ನೀರು ಪೂರೈಸಲು ಯಾವುದೇ ವ್ಯವಸ್ಥೆವಿಲ್ಲದಿದ್ದರಿಂದ ಟ್ಯಾಂಕರ್ಗಳ ಮಾಲಿಕರು ನೀರು ಪೂರೈಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ನೀರು ಎಲ್ಲಿಂದ ಸಾಗಿಸುವುದು ಎಂಬ ಚಿಂತೆ ಅಧಿಕಾರಿಗಳಿಗೆ ಕಾಡುತ್ತಿದೆ.ಈಗಲೂ ನದಿಯಲ್ಲಿ ನೀರು ಬರುವ ಲಕ್ಷಣಗಳು ಕಾಣುತ್ತಿಲ್ಲಾ.ಇದರಿಂದ ಜನಜಾನುವಾರಗಳಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಳ್ಳಲಿದೆ.
ಬೀರು-ಬಿಸಿಲಿನ ತಾಪ ಜನರಿಗೆ ಸಹಿಸುವುದು ಸಾಧ್ಯವಾಗುತ್ತಿಲ್ಲಾ. ಕುಡಿಯಲು ಜನ-ಜಾನುವಾರಗಳಿಗೆ ನೀರಿನ ಸಮಸ್ಯೆ ಎಷ್ಟುಮಟ್ಟಿಗೆ ಗಂಭೀರಗೊಳ್ಳುತ್ತೆ ಎಂದರೆ, ನದಿ ತೀರದ ಉಗಾರ, ಐನಾಪೂರ, ಕೃಷ್ಣಾ-ಕಿತ್ತೂರ, ಮೋಳೆ,ಸೇರಿದಂತೆಅನೇಕ ಗ್ರಾಮಗಳಲ್ಲಿ ಟ್ಯಾಂಕರ್ಗಳ ಮುಖಾಂತರ ನೀರು ಪೂರೈಕೆ ಮಾಡುತ್ತಿದ್ದಾರೆ. ಈ ನೀರು ಗ್ರಾಮ ಬಳಿಯಿರುವ ಭಾವಿ, ಕೋಳವೆಭಾವಿಗಳಿಂದ ನೀರು ಸಾಗಿಸುತ್ತಿದ್ದಾರೆ. ಮೊದಲು ಈ ನೀರು ವಿಶಕಾರಿವೆಂದು ಬಳಿಸುತಿರಲಿಲ್ಲಾ. ಆದರೆ ಇದೇ ನೀರು ಈಗ ಬಳಿಸುವ ಸ್ಥಿತಿ ಅನಿವಾರ್ಯವಾಗಿ ಬಂದಿದೆಯೆಂದು ಗ್ರಾಮದ ಹಿರಿಯರು ನೊಂದ ಹೇಳಿದರು.