ಅಥಣಿಯಲ್ಲಿ ರಾಜು ಅಲಬಾಳ ಮಾಲಿಕತ್ವದಲ್ಲಿ ವಾಶ್ ಕಿಯಾ ಫ್ರ್ಯಾಂಚೈಸ್ ಉದ್ಘಾಟನೆ
Wash Kia franchise inaugurated in Athani under the ownership of Raju Alaba
ಅಥಣಿ 13: ಇದೇ ಪ್ರಥಮ ಬಾರಿಗೆ ಅಥಣಿಯ ಐನಾಪುರ ರಸ್ತೆಯಲ್ಲಿರುವ ಆರ್.ಕೆ.ಬಿಲ್ಡಿಂಗನಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ರಾಜು ಅಲಬಾಳ ಮತ್ತು ಆರ್.ಕೆ.ಮೋಟರ್ಸ ಮಾಲಿಕ ಆಕಾಶ ಅಲಬಾಳ ಮಾಲಿಕತ್ವದಲ್ಲಿ ನೂತನವಾಗಿ ವಾಶ್ ಕಿಯಾ ಲಾಂಡ್ರಿ ಪ್ರಾರಂಭಗೊಂಡಿತು.ವಾಶ್ ಕಿಯಾ ಲಾಂಡ್ರಿ ಫ್ರ್ಯಾಂಚೈಸ್ ನ್ನು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಉದ್ಘಾಟಿಸಿ ಲಾಂಡ್ರಿ, ಡ್ರೈ ಕ್ಲೀನರ್ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡು ಪ್ರಾತ್ಯಕ್ಷಿಕತೆಯನ್ನು ಗಮನಿಸಿದರು. ಫ್ರೈಂಚೈಸ್ ಮಾಲಿಕ ರಾಜು ಆಲಬಾಳ ಶಾಸಕ ಲಕ್ಷ್ಮಣ ಸವದಿ ಮತ್ತು ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿಯವರನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಲಕ್ಷ್ಮಣ ಸವದಿ ರಾಜು ಆಲಬಾಳ ಇವರನ್ನು ಸತ್ಕರಿಸಿ ಶುಭ ಕೋರಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೈಬಣ್ಣಾ ಕಮತಗಿ, ಶಿವರುದ್ರ ಘೂಳಪ್ಪನವರ, ರಾಜು ಮರಡಿ, ಗೀರೀಶ ಸಜ್ಜನ, ನಾನಾಸಾಹೇಬ ಅವತಾಡೆ, ಅರುಣ ಯಲಗುದ್ರಿ, ರಾಜಶೇಖರ ಗುಡೋಡಗಿ, ಮಲ್ಲೇಶ ಹುದ್ದಾರ, ಅರ್ಜುನ ನಾಯಿಕ, ರಾಮ ಧರಿಗೌಡ, ಅರುಣ ಭಾಸಿಂಗಿ, ವಿನಾಯಕ ಬಾಗಡಿ, ಐ.ಜಿ.ಬಿರಾದಾರ, ಶಿವು ಸಂಕ್ರಟ್ಟಿ, ಶ್ರೀಶೈಲ ನಾಯಿಕ ಸೇರಿದಂತೆ ಅನೇಕರು ಪಾಲ್ಗೊಂಡು ಶುಭ ಹಾರೈಸಿದರು. ವಾಶ ಕಿಯಾ ಘಟಕದಲ್ಲಿ ಪ್ರಮುಖವಾಗಿ ಅತ್ಯಂತ ಕಡಿಮೆ ಮತ್ತು ಸ್ಪರ್ಧಾತ್ಮಕ ದರದಲ್ಲಿ ಲಾಂಡ್ರಿ, ಡ್ರೈ ಕ್ಲಿನರ್, ಕರ್ಟನ ವಾಶ, ಶೂ ವಾಶ್, ಸೋಫಾ ಮತ್ತು ಕಾರ್ೆಟ್ ವಾಶ್, ಕಾರ್ ವಾಶ್ ಸೇರಿದಂತೆ ಅನೇಕ ಸೇವೆಗಳನ್ನು ಮನೆಯವರೆಗೂ ನಮ್ಮ ಸಿಬ್ಬಂದಿ ಬಂದು ಕೊಡುತ್ತಾರೆ ಎಂದು ವಾಶ್ ಕಿಯಾ ಘಟಕದ ಮಾಲಿಕ ರಾಜು ಅಲಬಾಳ ತಿಳಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 