ಉಮ್ಮೀದ್ ಪೋಟ್ರ್ಲ್ನಲ್ಲಿ ವಕ್ಫ್ ಆಸ್ತಿ ನೊಂದಣಿ : ಅಧಿಕಾರಿಗಳಿಗೆ ಸನ್ಮಾನ
Waqf property registration on Umaid portal: Officials felicitated
ವಿಜಯಪುರ.ಡಿ.14 : ವಕ್ಫ್ ಆಸ್ತಿಗಳ ಸಂರಕ್ಷಣೆ-ರಕ್ಷಣೆಗಾಗಿ ಕೇಂದ್ರ ಸರ್ಕಾರ ರಚನೆ ಮಾಡಿರುವ ಉಮ್ಮೀದ ಪೋರ್ಟಲ್ನಲ್ಲಿ ಜಿಲ್ಲೆಯ ವಕ್ಫ್ ಆಸ್ತಿಗಳ ನೊಂದಣಿ ಕಾರ್ಯವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ನಿಗದಿತ ಅವಧಿಯಲ್ಲಿ ನಿರ್ವಹಿಸಿರುವುದಕ್ಕೆ ಜಿಲ್ಲೆಯ ಅಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಜಿಲ್ಲೆಯ ವಿವಿಧ ಮುಖಂಡರು ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಉಮ್ಮೀದ್ ಪೋಟ್ರ್ಲ್ನಲ್ಲಿ ವಕ್ಫ್ ಆಸ್ತಿಗಳ ನೊಂದಣಿ ಕಾರ್ಯವನ್ನು ನಿರ್ವಹಿಸಿದ ಜಿಲ್ಲಾ ವಕ್ಫ್ ಬೋರ್ಡ್ ಅಧಿಕಾರಿಗಳಾದ ತಬಸ್ಸುಮ್ ಎಂ., ನಜ್ಮಾ ಮೊಕಾಶಿ, ಮೊಹ್ಮದ ಜುಬೇರ ಇನಾಂದಾರ, ರಾಜ್‌ಅಹಮದ್ ಸಂಗಾಪುರ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಅಲ್ತಾಫ್ ಲಕ್ಕುಂಡಿ, ಸದಸ್ಯರುಗಳಾದ ಸೈಯ್ಯದ ಇಮ್ರಾನ್ ಜಾಗೀರದಾರ, ಅಬ್ದುಲ್ ಸಮದ್ ಸುತಾರ, ಸಾಮಾಜಿಕ ಕಾರ್ಯಕರ್ತ ನಿಜಾಮುದ್ದೀನ್ ಹಿರಿಯಾಳ, ಅಬ್ದುಲರಜಾಕ ಮೇಟಿ, ಉಮರ್ ಫಾರೂಖ ಬಾಂಗಿ, ತೌಸೀಫ್ ಇನಾಮದಾರ, ಸಿಕಂದರ್ಸಾಬ ಸಾವಳಗಿ, ಮುರ್ತೂಜಸಾಬ್ ನದಾಫ್, ಮೊಹ್ಮದ ಸಮಿ ಗುನುವನ, ರಾಜಅಹ್ಮದ್ ಬಗಲಿ ಸೇರಿದಂತೆ ಇತರರು ಉಪಸ್ತಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 