ವಾಕ್‌ಥಾನ್ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ: ತಾರಿಣಿ ಚರಣ ಸಾಹು

ವಾಕ್‌ಥಾನ್ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ: ತಾರಿಣಿ ಚರಣ ಸಾಹು Walkathon is creating health awareness among people: Tarini Charana Sahu

ವಾಕ್‌ಥಾನ್ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ: ತಾರಿಣಿ ಚರಣ ಸಾಹು 

ಬೆಳಗಾವಿ 11: ಬ್ಯಾಂಕ್ ಆಫ್ ಇಂಡಿಯಾ - ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಸಹಯೋಗದೊಂದಿಗೆ ‘ಬೆಳಗಾವಿ ವಾಕಥಾನ್ 2025’ ನೊಂದಿಗೆ 120ನೇ ಸಂಸ್ಥಾಪನಾ ದಿನವನ್ನು ಆಚರಿಸಿದರು  ಸಾವಿರಾರು ಬೆಳಗಾವಿ ನಾಗರಿಕರು ವಾಕಥಾನ್‌ನಲ್ಲಿ ಭಾಗವಹಿಸಿದರು “ಘಚಿಟಞ ಣಠಜಣಜಡಿ, ತಿಟಿ ಣಠಜಣಜಡಿ, ಐಜಣ ಈರಣ ಘಠಜಟಿ ಅಚಿಟಿಛಿಜಡಿ” ಎಂಬ ಜಾಗೃತಿ ಸಂದೇಶವೇ ವಾಕ್‌ಥಾನ್‌ನ ಮುಖ್ಯ ವಿಷಯವಾಗಿತ್ತು.  ಬೆಳಗಾವಿಯ ಗೋವಾವೇಸ್  ಮ್ಯುನಿಸಿಪಲ್ ಸ್ವಿಮ್ಮಿಂಗ್ ಪೂಲ್‌ನಿಂದ ಆರಂಭವಾದ ವಾಕ್‌ಥಾನ್‌ಗೆ, ಮೇಯರ್ ಮಂಗೇಶ್ ಪವಾರ್, ರೋಟರಿ ಜಿಲ್ಲಾ ಗವರ್ನರ್ ಅಶೋಕ್ ನಾಯಿಕ, ಬ್ಯಾಂಕ್ ಆಫ್ ಇಂಡಿಯಾ ಸಿಎಂ ಸತೀಶ ತಳಬಾವಡಿ, ರೋಟರಿ ಅಧ್ಯಕ್ಷ ಡಾ. ನಾಗಭೂಷಣ ಚೌಗುಲೆ, ಕಾರ್ಯದರ್ಶಿ ಪ್ರಸನ್ನ ದೊಡ್ಡಮಣಿ, ಈವೆಂಟ್ ಅಧ್ಯಕ್ಷ ರೋಟರಿ. ರಾಜೇಂದ್ರ ದೇಸಾಯಿ ಸೇರಿದಂತೆ ಅನೇಕ ಗಣ್ಯರು ಚಾಲನೆ ನೀಡಿದರು.  ರೋಟರಿ ಜಿಲ್ಲಾ ಗವರ್ನರ್ ನಾಮನಿರ್ದೇಶಿತ ಅಶೋಕ ನಾಯಿಕ ಅವರು ಮಾತನಾಡಿ ಬ್ಯಾಂಕ್ ಆಫ್ ಇಂಡಿಯಾ ಮತ್ತು ರೋಟರಿ ಕ್ಲಬ್ ಆಫ್ ಬೆಳಗಾವಿ ಸೆಂಟ್ರಲ್ ಸಂಯುಕ್ತವಾಗಿ ಆರೋಗ್ಯಕರ ಜೀವನದ ಸಂದೇಶ ಹರಡುವುದಕ್ಕೂ ಜನರನ್ನು ಒಗ್ಗೂಡಿಸಲು ಈ ವಾಕ್‌ಥಾನ್ ಆಯೋಜಿಸಲಾಗಿದೆ. ಉತ್ಸಾಹದಿಂದ ಭಾಗವಹಿಸಿದ ಎಲ್ಲರಿಗೂ ಧನ್ಯವಾದ ಹೇಳಿದರು.  ಬ್ಯಾಂಕ್ ಆಫ್ ಇಂಡಿಯಾ ಝೇನಲ್ ಮ್ಯಾನೇಜರ್ ತಾರಿಣಿ ಚರಣ ಸಾಹು ಅವರು, ಈ ವಾಕ್‌ಥಾನ್ ಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದೆ ಹಾಗೂ ಬೆಳಗಾವಿ ಜನತೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬ್ಯಾಂಕ್ ಆಫ್ ಇಂಡಿಯಾ 120 ವರ್ಷಗಳಿಂದ ಜನಸೇವೆ ಮಾಡುತ್ತಿದ್ದು, ಹಲವಾರು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.  ಡಾ. ಭಾವನಾ ಚೌಗುಲೆ ಅವರು ದಿನನಿತ್ಯದ ವ್ಯಾಯಾಮವೇ ಆರೋಗ್ಯಕರ ಜೀವನಕ್ಕೆ ಅತ್ಯಂತ ಅಗತ್ಯ ಎಂದು ತಿಳಿಸಿದರು. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ವಾಕ್‌ಥಾನ್ ಆಯೋಜಿಸಲಾಗಿದೆ ಎಂದು ಹೇಳಿದರು.  ಗೋವವೇಸ್  ಮ್ಯುನಿಸಿಪಲ್ ಸ್ವಿಮ್ಮಿಂಗ್ ಪೂಲ್‌ನಿಂದ ಆರಂಭವಾದ ಈ ವಾಕ್‌ಥಾನ್, ಫಸ್ಟ್‌ ಗೇಟ್, ಆರಿ​‍್ಪಡಿ ಸರ್ಕಲ್, ಗೊಮಟೇಶ ಕಾಲೇಜು, ಸುಭಾಷ್ ಮಾರ್ಕೆಟ್ ಮೂಲಕ ಸಾಗಿದು, ಮರುಳಾಗಿ  ಗೋವವೇಸ್ ನಲ್ಲಿ  ಸಂಪನ್ನವಾಯಿತು. ಸಾವಿರಾರು ಜನರು ಉತ್ಸಾಹದಿಂದ ಪಾಲ್ಗೊಂಡರು.  ಈವೆಂಟ್ ಅಧ್ಯಕ್ಷ ರೋಟರಿ. ರಾಜೇಂದ್ರ ದೇಸಾಯಿ ಅವರು ಎಲ್ಲಾ ಪ್ರಾಯೋಜಕರು, ಪಾಲುದಾರರು, ಸ್ವಯಂಸೇವಕರು ಹಾಗೂ ಭಾಗವಹಿಸಿದವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ​‍್ಿಸಿದರು. ಇಂತಹ ಸಂಯುಕ್ತ ಪ್ರಯತ್ನಗಳು ಆರೋಗ್ಯ, ಏಕತೆ ಹಾಗೂ ಪ್ರಮುಖ ಸಾಮಾಜಿಕ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತವೆ ಎಂದು ಹೇಳಿದರು.