ಉತ್ತಮ ರಾಷ್ಟ್ರ ಕಟ್ಟಲು ಪ್ರಜೆಯ ಆಯ್ಕೆ ಜವಾಬ್ದಾರಿ ಮತದಾರರ ಮೇಲಿದೆ

Voters are responsible for choosing citizens to build a better nation

 ಉತ್ತಮ ರಾಷ್ಟ್ರ ಕಟ್ಟಲು ಪ್ರಜೆಯ ಆಯ್ಕೆ ಜವಾಬ್ದಾರಿ ಮತದಾರರ ಮೇಲಿದೆ  

ರಾಯಬಾಗ 25: ಮತದಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಮತ್ತು ಜಾಗೃತಿಗೊಳಿಸಲು ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಜಗದೀಶ ಬಿಸೇರೊಟ್ಟಿ ಹೇಳಿದರು.  

ಶನಿವಾರ ಪಟ್ಟಣದ ಮಹಾವೀರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 15ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಮತ್ತು ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರವನ್ನು ಕಟ್ಟಲು ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವ ಜವಾಬ್ದಾರಿ ಪ್ರತಿಯೊಬ್ಬ ಮತದಾರರ ಮೇಲೆ ಇರುವುದರಿಂದ ಕಡ್ಡಾಯವಾಗಿ 18 ವರ್ಷ ಮೇಲ್ಪಟ್ಟ ಮತದಾನ ಹಕ್ಕು ಪಡೆದವರು ಚುನಾವಣೆಯ ಮತದಾನದಲ್ಲಿ ಭಾಗವಹಿಸಬೇಕೆಂದರು.  

ತಹಶೀಲ್ದಾರ ಸುರೇಶ ಮುಂಜೆ ಪ್ರಸ್ತಾವಿಕವಾಗಿ ಮಾತನಾಡಿ, ಭಾರತದ ಸಂವಿಧಾನ ಜಾರಿಕ್ಕಿಂತ ಮುಂಚೆ ಕೇವಲ ಶ್ರೀಮಂತರಿಗೆ, ಪದವಿಧರರಿಗೆ ಮತ್ತು ಜಮೀನ್ದಾರರಿಗೆ ಮಾತ್ರ ಮತದಾನದ ಹಕ್ಕು ಇತ್ತು. ಆದರೆ ಸಂವಿಧಾನ ಜಾರಿಯಾದ ನಂತರ ಭಾರತ ಎಲ್ಲ ವಯಸ್ಕರಿಗೆ ಮತದಾನ ಹಕ್ಕು ಲಭಿಸಿದೆ. ಭಾರತದಲ್ಲಿ ಇಷ್ಟು ವರ್ಷ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆವೂರಲು ನಮಗೆಲ್ಲರಿಗೆ ದೊರೆತ ಮತದಾನದ ಹಕ್ಕು ಅದಕ್ಕೆ ಕಾರಣ. ಭಾರತದಲ್ಲಿ ಬಲಿಷ್ಠ ಚುನಾವಣೆ ವ್ಯವಸ್ಥೇ ಇದ್ದು, ಚುನಾವಣೆಯಲ್ಲಿನ ಅಕ್ರಮಗಳನ್ನು ಹಾಗೂ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ಇನ್ನು ಹೆಚ್ಚಿನ ಜಾಗೃತಿ ಮೂಡಿಸಲು 2011 ರಿಂದ ಮತದಾನ ದಿನವನ್ನು ಆಚರಿಸಲಾಗುತ್ತಿದೆ ಎಂದರು.  

ಕಾರ್ಯಕ್ರಮದಲ್ಲಿ ಪ್ರಧಾನ ದಿವಾಣಿ ನ್ಯಾಯಾಧೀಶೆ ಪ್ರಿಯಾ ಭಟ್ಟಡ, ವಕೀರಲ ಸಂಘದ ಅಧ್ಯಕ್ಷ ಪಿ.ಎಮ್‌.ದರೂರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಶಾನೂರ ಐಹೊಳೆ, ಎಪಿಪಿ ಹನಮಂತ ಅಚಮಟ್ಟಿ, ತಾ.ಪಂ.ಇಒ ಅರುಣ ಮಾಚಕನೂರ, ಬಿಇಒ ಬಸವರಾಜಪ್ಪ ಆರ್‌.,. ಸಿಡಿಪಿಒ ಭಾರತಿ ಕಾಂಬಳೆ, ಪಿಡಬ್ಲ್ಯೂಡಿ ಎಇಇ ಆರ್‌.ಬಿ.ಮನವಡ್ಡರ, ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆ ಅಧ್ಯಕ್ಷ ದಶರಥ ಶೆಟ್ಟಿ, ಪ್ರಾಚಾರ್ಯ ಆಶಾರಣಿ ಪಟ್ಟಣಕೋಡಿ, ಡಾ.ಎಮ್‌.ಬಿ.ಪಾಟೀಲ, ಕಲ್ಪನಾ ಕಾಂಬಳೆ, ಟಿ.ಎಸ್‌.ಕುರಬೆಟ್ಟ, ಸೋಮಶೇಖರ ಜೋರೆ, ಹನಮಂತ ದಶವಂತ, ರಾಜು ದಾನೋಳೆ, ರಾಜು ಕುರಾಡೆ, ಅನೀಲ ಸುತಾರ ಹಾಗೂ ಬಿ.ಎಲ್‌.ಓ ಗಳು ಮತ್ತು ವಿದ್ಯಾರ್ಥಿಗಳು ಇದ್ದರು.  ತಹಶೀಲ್ದಾರ ಸುರೇಶ ಮುಂಜೆಯವರು ಪ್ರತಿಜ್ಞಾ ವಿಧ ಬೋಧಿಸಿದರು. ಉತ್ತಮ ಕಾರ್ಯನಿರ್ವಹಿಸಿದ ಬಿ.ಎಲ್‌.ಓ ಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು. ಶಿಕ್ಷಕ ಅಮೋಘ ನಾಯಿಕ ಸ್ವಾಗತಿಸಿ, ನಿರೂಪಿಸಿದರು.