ಗುಡಿಯಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಒ ವಿರುದ್ಧ ಸಾರ್ವಜನಿಕರ ಆಕ್ರೋಶ

ಗುಡಿಯಲ್ಲಿ ಕುಳಿತು ಮತದಾರರ ಪಟ್ಟಿ ಪರಿಷ್ಕರಣೆ: ಬಿಎಲ್‌ಒ ವಿರುದ್ಧ ಸಾರ್ವಜನಿಕರ ಆಕ್ರೋಶ  Voter list revision conducted inside a temple: Public outrage against BLO

ಇಂಡಿ, ಜು. 4: ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ್ಕ್ಪೂಹ್ಕಿ್ಪೂಷ್ಪ ಭೇಟಿ ನೀಡಿ ಅರ್ಹ ಮತದಾರರ ವಿವರ ಸಂಗ್ರಹಿಸುವ ಜವಾಬ್ದಾರಿಯನ್ನು ಹೊಂದಿರುವ ಬೂತ್ ಲೆವೆಲ್ ಅಧಿಕಾರಿ (ಬಿಎಲ್‌ಒ) ತಮ್ಮ ಕರ್ತವ್ಯವನ್ನು ಸಮರ​‍್ಕವಾಗಿ ನಿರ್ವಹಿಸದೇ, ದೇವಸ್ಥಾನದಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದಲ್ಲಿ ಕೇಳಿಬಂದಿದೆ. 

ತಾಲ್ಲೂಕಿನ ತಡವಲಗಾ ಗ್ರಾಮದ ವಾರ್ಡ್‌ ಬಿಎಲ್‌ಒ ಲಕ್ಷ್ಮಣ ವಿಠೋಬಾ ಕೋಂಕಣಿ ಅವರು ಗ್ರಾಮದ ಕಕ್ಕಯ್ಯ ಓಣಿಯಲ್ಲಿರುವ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ ಕುಳಿತು ಮತದಾರರ ಪಟ್ಟಿ ಸಂಬಂಧಿತ ಕಾರ್ಯ ನಡೆಸುತ್ತಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ್ಕ್ಪೂಹ್ಕಿ್ಪೂಷ್ಪ ತೆರಳಿ ಮತದಾರರ ವಿವರಗಳನ್ನು ಪರೀಶೀಲಿಸಿ, ಹೊಸ ಮತದಾರರ ಹೆಸರು ಸೇರೆ​‍್ಡ, ಹೆಸರು ತೆಗೆದುಹಾಕುವುದು, ತಿದ್ದುಪಡಿ ಹಾಗೂ ಆಧಾರ್ ಜೋಡಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ಸ್ಥಳದಲ್ಲೇ ನಿರ್ವಹಿಸಬೇಕಾಗಿದೆ. ಆದರೆ ಅದನ್ನು ಪಾಲಿಸಲಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.  

ಬಿಎಲ್‌ಒಗಳ ಕರ್ತವ್ಯಗಳಲ್ಲಿ 18 ವರ್ಷ ಪೂರ್ಣಗೊಳಿಸಿದ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸುವುದು , ಮೃತರು ಅಥವಾ ಸ್ಥಳಾಂತರಗೊಂಡವರ ಹೆಸರುಗಳನ್ನು ತೆಗೆದುಹಾಕುವುದು  ಹೆಸರು ಹಾಗೂ ವಿಳಾಸ ತಿದ್ದುಪಡಿ  ಆಧಾರ್ ಜೋಡಣೆ ಮತ್ತು ಸಮೀಕ್ಷೆ ನಡೆಸುವುದು ಪ್ರಮುಖವಾಗಿದೆ.  ಆದರೆ ತಡವಲಗಾ ಗ್ರಾಮದಲ್ಲಿ ಮತದಾರರೇ ದೇವಸ್ಥಾನಕ್ಕೆ ಬಂದು ಅರ್ಜಿ ಸಲ್ಲಿಸುವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ಚುನಾವಣಾ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.  ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರೀಶೀಲನೆ ನಡೆಸಿ, ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.