ಪ್ರಯತ್ನ ಸಂಘಟನೆಯಿಂದ ವೃದ್ಧಾಶ್ರಮ ಭೇಟಿ: ವಿವಿಧ ವಸ್ತು ದೇಣಿಗೆ
Visit to old age home by the effort organization: Donation of various items
ಬೆಳಗಾವಿ 08: ಹುಕ್ಕೇರಿ ತಾಲೂಕಿನ ಹಿಡಕಲ್ ಅಣೆಕಟ್ಟಿನ ಬಳಿ ಇರುವ ಆಸರೆ ವೃದ್ಧಾಶ್ರಮ ಹಾಗೂ ಶಕ್ತಿ ಸದನ ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಪ್ರಯತ್ನ ಸಂಘಟನೆ ಬೆಳಗಾವಿಯಿಂದ ಭೇಟಿ ನೀಡಿ, ಆಶ್ರಯದಲ್ಲಿರುವ ವೃದ್ಧರು ಮತ್ತು ಮಹಿಳೆಯರ ಚಟುವಟಿಕೆಗಳನ್ನು ವೀಕ್ಷಿಸಿ ಫಲಾನುಭವಿಗಳಿಗೆ ಹಣ್ಣು-ಹಂಪಲು ಹಾಗೂ ದವಸ-ಧಾನ್ಯಗಳನ್ನು ದೇಣಿಗೆಯ ರೂಪದಲ್ಲಿ ಹಸ್ತಾಂತರಿಸಲಾಯಿತು.
ಪ್ರಯತ್ನ ಸಂಘಟನೆಯ ಸಂಸ್ಥಾಪಕಿ ಶಾಂತಾ ಆಚಾರ ಅವರು ಮಾತನಾಡಿ ಜೀವನದ ಕಷ್ಟಗಳನ್ನು ಕಲಿಕೆಯ ಹಂತವಾಗಿ ನೋಡಿದರೆ ಪ್ರತಿಯೊಬ್ಬರೂ ಬೆಳೆಯಬಹುದು. ಎಲ್ಲರಿಗೂ ಸವಾಲುಗಳಿರುತ್ತವೆ, ಆದರೆ ಅವನ್ನು ಜಯಿಸುವುದೇ ನಿಜವಾದ ಬೆಳವಣಿಗೆ. ಮಹಿಳಾ ಕಲ್ಯಾಣ ಸಂಸ್ಥೆಯಂತಿರುವ ಬೆಂಬಲಕಾರಿ ಸಂಘಟನೆಗಳು ನಮ್ಮ ಜೊತೆಗೆ ಇದ್ದಾಗ ಹೆದರಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಮುಂದಾಗಿ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ ಮಾತನಾಡಿ, ಸಂಸ್ಥೆ 50 ವರ್ಷಗಳಿಂದ ನಿರಂತರವಾಗಿ ಸಮಾಜಸೇವೆಯಲ್ಲಿ ತೊಡಗಿದೆ. ಪ್ರಯತ್ನ ಸಂಘಟನೆಯಂತಹ ಅನೇಕರ ಸಹಕಾರದಿಂದ ಫಲಾನುಭವಿಗಳಿಗೆ ಉತ್ತಮ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸುವುದು ಸಾಧ್ಯವಾಗಿದೆ. ಇದೇ ರೀತಿಯಾಗಿ ನಿಮ್ಮ ಬೆಂಬಲ ಮುಂದುವರಿಯಲಿ ಪ್ರಯತ್ನ ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.
ಪ್ರಯತ್ನ ಸಂಘಟನೆಯ ಸದಸ್ಯರಾದ ಶಾಂತಾ ಆಚಾರ, ವೀಣಾ ಕುಲಕರ್ಣಿ, ಪದ್ಮಾ ವೆರ್ಣೇಕರ, ಆರತಿ ಭಟ್, ಶರಾವತಿ ಕುಲಕರ್ಣಿ, ಆರತಿ ಕುಲಕರ್ಣಿ, ಬೀನಾ ರಾವ್, ಗೌರಿ ಸರ್ನೋಬಟ್, ಶ್ವೇತಾ ಬಿಜಾಪುರೇ, ವರದಾ ಭಟ್, ಮೇಧಾ, ವೈಜಯಂತಿ ಚೌಗಲಾ, ನಮ್ಮೂರ ಬಾನುಲಿ ರೇಡಿಯೋ ಕೇಂದ್ರದ ಆರ್‌ಜೆ ಚೇತನ, ಶಕ್ತಿ ಸದನದ ಸಿಬ್ಬಂದಿ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು. ಸುಗಂಧ ಮುಕಾಶಿ ನಿರೂಪಿಸಿದರು. ಶಾಹಿನ್ ಹೊಂಬಾಳ ಅವರು ವಂದನಾರೆ್ಣ ಸಲ್ಲಿಸಿದರು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 