ದಿನಾಚರಣೆಗೆ ಅನುದಾನ ನೀಡುವಂತೆ ವಿಶ್ವಕರ್ಮ ಸಮಾಜ ಕಾರ್ಯದರ್ಶಿ ಡಿ.ಮೌನೇಶ ಆಗ್ರಹ
Vishwakarma Samaj Secretary D. Maunesh demands funding for the day's celebrations
ಕಂಪ್ಲಿ 01: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಗುರುವಾರ ಆಚರಿಸಿದರು. ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ನಾಡಿಗೆ ಅಮರಶಿಲ್ಪಿ ಜಕಣಾಚಾರಿ ಅವರ ಕೊಡುಗೆ ಅಪಾರವಾಗಿದೆ. ಅವರ ಆದರ್ಶ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಬದುಕು ಕೊಟ್ಟಿಕೊಳ್ಳಬೇಕು ಎಂದರು.ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಪ್ರತಿ ವರ್ಷ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ, ತಾಲೂಕು ಆಡಳಿತದಿಂದ ಇಲ್ಲಿವರೆಗೂ ಯಾವುದೇ ಸಹಾಯಧನ ಬಂದಿಲ್ಲ. ಇಲ್ಲಿನ ಜಕಣಾಚಾರಿ ದಿನಾಚರಣೆಯಲ್ಲಿ ಶಿಲ್ಪಿಗಳಿಗೆ ಸನ್ಮಾನಿಸುವ ಸೋಜಿಗೆ ತಾಲೂಕು ಆಡಳಿತ ಹೋಗದೇ ಇರುವುದು ಅಸಮಾಧಾನವಾಗಿದೆ.
ದಿನಾಚರಣೆಗಳನ್ನು ತಾಲೂಕು ಆಡಳಿತವು ಬೇಕಾಬಿಟ್ಟಿಯಲ್ಲಿ ಆಚರಣೆ ಮಾಡುತ್ತಿದೆ. ಒತ್ತಡದಲ್ಲಿ ದಿನಾಚರಣೆ ಮಾಡಿದಂತಾಗಿತ್ತು. ಇದರಿಂದ ವಿಶ್ವಕರ್ಮ ಸಮಾಜಕ್ಕೆ ಬೇಸರ ತರಿಸಿದೆ. ದಿನಾಚರಣೆಗೆ ಅನುದಾನ ನೀಡುವಂತೆ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಆಗ್ರಹಿಸಿದೆ. ಸಮಾಜದಿಂದ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಮುಂದಿನ ದಿನದಲ್ಲಿ ರಾಜ್ಯ ಮಟ್ಟದ ವಿಶ್ವಕರ್ಮ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸಲಾಗುವುದು ಎಂದರು. ಇಲ್ಲಿನ ವಿಶ್ವಕರ್ಮ ಸಮಾಜದಿಂದ ಪಟ್ಟಣದ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ದಿನಾಚರಣೆ ಅಂಗವಾಗಿ ವಿಶೇಷ ಪೂಜಾ, ಪುನಸ್ಕಾರ ಸಲ್ಲಿಸಿದರು.
ತನಂತರ ಇಲ್ಲಿನ ಅಮರಶಿಲ್ಪಿ ಜಕಣಾಚಾರಿ ವೃತ್ತದ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದಿನಾಚರಣೆ ಆಚರಿಸಿದರು. ವಿಶ್ವಕರ್ಮ ಸಮಾಜದಿಂದ ಶಿಲ್ಪಿ ವಿಶ್ವನಾಥ ಇವರಿಗೆ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿರಸ್ತೇದಾರ ರಮೇಶ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ಎ.ರುದ್ರ್ಪ ಆಚಾರಿ, ಉಪಾಧ್ಯಕ್ಷರಾದ ಡಿ.ಕಾಳಾಚಾರಿ, ಎ.ಚಂದ್ರಶೇಖರ, ಖಜಾಂಚಿ ರಾಮಚಂದ್ರ, ಮಹಿಳಾ ಮಂಡಳಿ ಅಧ್ಯಕ್ಷೆ ಡಿ.ವೀಣಾ, ಕಾರ್ಯದರ್ಶಿ ಸವಿತಾ, ಮುಖಂಡರಾದ ಎ.ರಾಘವೇಂದ್ರ, ಎ.ಮೌನೇಶ, ನಾರಾಯಣಿ, ವೀರಭದ್ರ, ವಿಜಯಕುಮಾರ, ಆನಂದ, ವಿಜಯ, ರತ್ನಮ್ಮ, ಜ್ಯೋತಿ, ವಾಣಿ ಸೇರಿದಂತೆ ಸಮಾಜದವರು ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 