ಶಾಸಕ ಲಕ್ಷ್ನಣ ಸವದಿ ಸಿಎಂ ಆಗಲೆಂದು ಬಸವಣ್ಣನಿಗೆ ಪೂಜೆ, ದಾಸೋಹ ನೆರವೇರಿಸಿದ ವಿಶಾಲ ನಿಂಬಾಳ
Vishal Nimbala worshipped and performed austerities to Basavanna so that MLA Lakshnana Savadi could
ಶಾಸಕ ಲಕ್ಷ್ನಣ ಸವದಿ ಸಿಎಂ ಆಗಲೆಂದು ಬಸವಣ್ಣನಿಗೆ ಪೂಜೆ, ದಾಸೋಹ ನೆರವೇರಿಸಿದ ವಿಶಾಲ ನಿಂಬಾಳ.
ಅಥಣಿ 04: ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿಯವರ ಮುಂದಿನ ರಾಜಕೀಯ ಭವಿಷ್ಯ ಮತ್ತಷ್ಟು ಉಜ್ವಲವಾಗಲಿ ಮತ್ತು ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲೆಂದು ಶುಭ ಹಾರೈಸಿ ಸವದಿಯವರ ಅಭಿಮಾನಿ ಖಿಳೇಗಾಂವ ಗ್ರಾಮದ ಕಾಂಗ್ರೆಸ್ ಪಕ್ಷದ ಯುವ ಧುರೀಣರಾದ ವಿಶಾಲ ಅಣ್ಣಪ್ಪಾ ನಿಂಬಾಳ ಶ್ರಾವಣ ಮಾಸದ ಅಂಗವಾಗಿ ಬಸವಣ್ಣ ದೇವರಿಗೆ ವಿಶೇಷ ಅರ್ಚನೆ, ಪೂಜೆ, ಲಕ್ಷಾಂತರ ಭಕ್ತಾದಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಿದ್ದರು. ಅಭಿಮಾನಿ ಆಯೋಜಿಸಿದ್ದ ವಿಶೇಷ ಪೂಜೆ, ರುದ್ರಾಭಿಷೇಕದಲ್ಲಿ ಶಾಸಕ ಲಕ್ಷ್ಮಣ ಸವದಿಯವರು ನೆರವೇರಿಸಿದರು. ನಂತರ ಲಕ್ಷ್ಮಣ ಸವದಿ ದಾಸೋಹ ಭವನದಲ್ಲಿ ಭಕ್ತಾದಿಗಳಿಗೆ ಮೃಷ್ಠಾನ್ನ ಭೋಜನ ಉಣ ಬಡಿಸಿ ತಾವೂ ಎಲ್ಲರೊಂದಿಗೆ ಅನ್ನ ಪ್ರಸಾದ ಸ್ವೀಕರಿಸಿ ಎಲ್ಲರೊಳಗೊಂದಾದರು. ನಿಂಬಾಳ ಪರಿವಾರ ಆಯೋಜಿಸಿದ್ದ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, ಶ್ರಾವಣ ಮಾಸ ಹಿಂದುಗಳಿಗೆ ಪವಿತ್ರ ಮಾಸ ಈ ಮಾಸದಲ್ಲಿ ಎಲ್ಲರೂ ದೇವರ ಪೂಜೆ, ಅರ್ಚನೆ, ಧ್ಯಾನದಲ್ಲಿ ತೊಡಗಿರುತ್ತಾರೆ. ನಾನೂ ಈ ಭಾಗದ ಜಾಗೃತ ದೇವಸ್ಥಾನ ಖಿಳೇಗಾಂವ ಬಸವಣ್ಣ ದೇವರಿಗೆ ಅಭಿಮಾನಿಗಳ ಆಶಯದಂತೆ ಆಗಮಿಸಿ ವಿಶೇಷ ಪೂಜೆ, ರುದ್ರಾಭಿಷೇಕ ನೆರವೇರಿಸಿರುವೆ ಎಂದರು.
ಖಿಳೇಗಾಂವ ಬಸವೇಶ್ವರ ದೇವಸ್ಥಾನದ ಆವರದಲ್ಲಿ ಅಂದಾಜು ಏಳೆಂಟು ಕೋಟಿ ವೆಚ್ಚದಲ್ಲಿ ನಿರ್ಮಾಗೊಳ್ಳುತ್ತಿರುವ ಬಸವ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ ಅನುದಾನ ಕೊಡಿಸುವ ನಿಟ್ಟಿನಲ್ಲಿ ಈ ಭಾಗದ ಶಾಸಕರಾದ ರಾಜು ಕಾಗೆ ಮತ್ತು ನಾನು ಪ್ರಯತ್ನಿಸುವುದಾಗಿ ಹೇಳಿದ ಅವರು ತಾವು ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಲೆಂದು ಅಭಿಮಾನಿ ವಿಶಾಲ ನಿಂಬಾಳ ವಿಶೇಷ ಪೂಜೆ, ದಾಸೋಹ ನೆರವೇರಿಸಿದ್ದರ ಸಂಬಂಧ ಕೇಳಿದ ಪ್ರಶ್ನೆಗೆ ಅಭಿಮಾನಿಗಳ ಆಶಯ ಮತ್ತು ದೇವರ ಇಚ್ಛೆ ಅದೇ ನನಗೆ ಪ್ರಸಾದ ಎಂದು ಉತ್ತರಿಸಿದರು. ಕಾಂಗ್ರೆಸ್ ಪಕ್ಷದ ಯುವ ಧುರೀಣ ವಿಶಾಲ ನಿಂಬಾಳ ಮಾತನಾಡಿ, ಶಾಸಕರಾದ ಲಕ್ಷ್ಮಣ ಸವದಿಯವರು ಮುಂದಿನ ಮುಖ್ಯಮಂತ್ರಿಗಳಾಗಬೇಕು ಎನ್ನುವ ಆಶಯ ಅವರ ಅಭಿಮಾನಿಗಳಾದ ನಮ್ಮಲ್ಲಿದ್ದು,
ಇದಕ್ಕಾಗಿ ನಾನು ಶ್ರಾವಣ ಮಾಸದ ಅಂಗವಾಗಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅವರ ಹೆಸರಿನಿಂದ ಪೂಜೆ, ರುದ್ರಾಭಿಷೇಕ ಮತ್ತು ಲಕ್ಷಾಂತರ ಭಕ್ತಾದಿಗಳಿಗೆ ದಾಸೋಹ ಆಯೋಜಿಸಿರುವೆ ಎಂದ ಅವರು ಇಂದಿನ ಕಾರ್ಯಕ್ರಮಕ್ಕೆ ಕಾಗವಾಡ ಶಾಸಕ ರಾಜು ಕಾಗೆಯವರನ್ನೂ ಕೂಡ ಆವ್ಹಾನಿಸಿದ್ದೆ ಆದರೆ ಅನಿವಾರ್ಯ ಕಾರಣಗಳಿಂದ ಅವರು ಆಗಮಿಸಿಲ್ಲ ಅವರ ರಾಜಕೀಯ ಭವಿಷ್ಯವೂ ಉಜ್ವಲವಾಗಲೆಂದು ಬಸವಣ್ಣನಲ್ಲಿ ಪ್ರಾರ್ಥಿಸಿರುವೆ ಎಂದರು. ಖಿಳೇಗಾಂವ ಗ್ರಾಮದ ವಿನಾಯಕ ಪಾಟೀಲ ಪಿ.ಎಸ್.ಐ ನೇಮಕಗೊಂಡು ತರಬೇತಿ ಪಡೆಯುತ್ತಿರುವ ಇವರನ್ನು ಶಾಸಕ ಲಕ್ಷ್ಮಣ ಸವದಿ ಹಾಗೂ ವಿಶಾಲ ನಿಂಬಾಳ ಸತ್ಕರಿಸಿದರು. ಈ ಸಂದರ್ಭದಲ್ಲಿ ಧುರೀಣರಾದ ಸದಾಶಿವ ದೇವಾನಗೋಳ, ಚೇತನ ಪಾಟೀಲ, ಹೊನ್ನಪ್ಪ ಬಗಲಿ, ಬಸಪ್ಪ ಅಳ್ಳಿಟ್ಟಿ, ಸುಭಾಶ ಬಗಲಿ, ಅಣ್ಣಪ್ಪಾ ನಾಗ್ಗೋಳ, ಅನೀಲಕುಮಾರ ರುದ್ರಗೌಡ, ರಾಚಪ್ಪಾ ಅಳ್ಳಿಕಟ್ಟಿ, ಸಂಜಯ ಉಮರೆ, ರಾಯಗೊಂಡ ಅಳ್ಳಿಕಟ್ಟಿ, ಹನಮಂತ ಅಳ್ಳಿಕಟ್ಟಿ, ಮಹಾಂತೇಶ ಪಾಟೀಲ, ಈಶ್ವರ ಅಳ್ಳಿಕಟ್ಟಿ, ಸಚೀನ ಬಗಲಿ, ಶಶಿಕಾಂತ ಜಾಧವ, ರಾಜು ನಾಗ್ಗೋಳ, ಮಲ್ಲು ಕುಳ್ಳೊಳ್ಳಿ, ಬಸು ತೆರದಾಳ, ಭರತ ಕಲಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 