ಸಾಧನೆಗಿಂತ ಮಿಗಿಲು ಸದ್ಗುಣ - ಮಲ್ಲಪ್ಪಗಣಿ
Virtue is greater than achievement - Mallappagani
ರಬಕವಿ-ಬನಹಟ್ಟಿ 20 : ವಿದ್ಯಾರ್ಥಿಗಳಿಗೆ ಶಾಲಾ ಜೀವನವು ವ್ಯಕ್ತಿತ್ವರೂಪಿಸುವ ಪ್ರಮುಖ ಹಂತವಾಗಿದ್ದು, ಶಿಸ್ತು, ಸಂಸ್ಕಾರ, ಮತ್ತುಜ್ಞಾನವು ಜೀವನಪೂರ್ತಿ ಮಾರ್ಗದರ್ಶಕವಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಪ್ಪಗಣಿ ಹೇಳಿದರು.
ಅವರುತಾಲೂಕಿನ ನಾವಲಗಿ ಗ್ರಾಮದ ನೀಲಕಂಠೇಶ್ವರ ಸಮುದಾಯ ಭವನದಲ್ಲಿಜರುಗಿದಜೈ ಹನುಮಾನ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪಾರಿತೋಷಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅಂಕಗಳು ಮತ್ತು ಪ್ರಶಸ್ತಿಗಳು ತಾತ್ಕಾಲಿಕಆದರೆ ಸದ್ಗುಣಗಳು ಶಾಶ್ವತ, ವಿದ್ಯಾರ್ಥಿಗಳು ಸತ್ಯನಿಷ್ಠೆ,ವಿನಯ ಹಾಗೂ ಪರಿಶ್ರಮವನ್ನು ಜೀವನದ ಅಂಗವನ್ನಾಗಿ ಅಳವಡಿಸಿಕೊಂಡಾಗ ಮಾತ್ರಯಶಸ್ಸು ಹುಡುಕಿಕೊಂಡು ಬರುತ್ತದೆ. ವಿಫಲತೆಗಳನ್ನು ಪಾಠವಾಗಿ ಪರಿಗಣಿಸಿ ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಶಾಲೆ ಮತ್ತು ಕುಟುಂಬಕ್ಕೆ ಕೀರ್ತಿತರುವಂತವರಾಗಬೇಕು. ಪೋಷಕರತ್ಯಾಗ ಮತ್ತು ಶಿಕ್ಷಕರ ಮಾರ್ಗದರ್ಶನದ ಅರಿವೂ ಹೊಂದಿ, ವಿಶ್ವಾಸವನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಸಮಾಜದಲಿ ್ಲಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕೆಂದು ಹೇಳಿದದು.
ಮುಖ್ಯಗುರು ಎಚ್.ಎಸ್. ಅಡವಿಹಳ್ಳಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪರಿಪೂರ್ಣ ಜ್ಞಾನವನ್ನು ಹೊಂದಿದಾಗ ಮಾತ್ರ ಸಾಧಿಸಲು ಸುಲಭವಾಗುವುದು ಎಂದರು.
ವೇದಿಕೆಯಲ್ಲಿ ಬಸಯ್ಯ ಹಿರೇಮಠ ಸ್ವಾಮಿಜಿ, ಆಡಳಿತ ಮಂಡಳಿಯ ಸದಸ್ಯರಾದ ದಾನಪ್ಪ ಆಸಂಗಿ, ಬಾಲಚಂದ್ರ ಪಟ್ಟಣಶೆಟ್ಟಿ,ಜಿ.ಎಸ್.ವಾಲಿ, ಕೆ.ಪಿ. ಯಡಪ್ಪನವರ, ಹಣಮಂತ ಬರಗಾಲ, ನಿಂಗಪ್ಪಕಾಂತಿ,ದಾನೇಶಕಾಂತಿ, ಶ್ರೀಶೈಲ ಶಿವಾಪೂರ, ಎಸ್.ಬಿ.ಎಂಟೇತ್ತಿನವರ, ಎನ್.ಎಸ್.ತುಪ್ಪದ,ಶೋಭಾ ವಾರದ, ಜೆ.ಆರ್.ಬಜೆನ್ಪವರ, ಪಿ.ಟಿ.ನವಲಿ,ಆರ್.ಆರ್.ಬಣಗೆ,ಸಂಜು ಹಳ್ಳಿ,ಬಿ.ಬಿ. ಮಡಿವಾಳ, ಶೃತಿ ಕೆಂಬಾವಿ,ಎಂ. ಎಂ.ಸಜ್ಜಾಗೋಳ,ಡಿ. ಜಿ.ಕದಂ ಸೇರಿದಂತೆ ಅನೇಕರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 