ಸಾಮಥ್ರ್ಯಕ್ಕಿಂತ ಹೆಚ್ಚಿನ ಕಬ್ಬು ಹೇರಿ ಎತ್ತುಗಳಿಗೆ ಹಿಂಸೆ: ಕರಳು ಚುರುಕ್


 ಸುಕುಮಾರ ಬನ್ನೂರೆ, 

ಕಾಗವಾಡ 06: ಸಮಾಜದಲ್ಲಿ ಎಲ್ಲೆಡೆ ಪ್ರತಿಯೊಂದು ಕ್ಷೇತ್ರದಲ್ಲಿ ಗೇಣು ಹೊಟ್ಟೆಗಾಗಿ ಚೋಟಿ ಬಟ್ಟೆಗಾಗಿ ಸ್ಪಧರ್ೆ, ದ್ರೋಹ ನಡೆಯುತ್ತಿದೆ. ಅದರಲ್ಲಿ ಮೂಕ ಪ್ರಾಣಿ(ಎತ್ತುಗಳಿಗೆ) ಅದರ ಸಾಮಥ್ರ್ಯಕ್ಕಿಂತ ಹೆಚ್ಚಿನ ತೂಕದ ಕಬ್ಬು ಚಕಡಿಯಲ್ಲಿ ಹಾಕಿಕೊಂಡು ಅವುಗಳನ್ನು ಹೊಡೆದು ಹಿಂಸೆ ನೀಡಿ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಸಾಗಾಟ ಮಾಡಿ ಅದರಿಂದ ಬರುವ ಆದಾಯದಲ್ಲಿ ಎತ್ತಿನ ಮಾಲಿಕ ತನ್ನ ಕುಟುಂಬ ಪೋಷಿಸುತ್ತಿದ್ದಾನೆ. ಎತ್ತುಗಳಿಗೆ ನೀಡುತ್ತಿರುವ ಹಿಂಸೆ ಕಂಡರೆ ಅನೇಕರ ಕರಳು ಚುರುಕ್ ಎನುತ್ತಿವೆ. 

ನೂರಾರು ವರ್ಷಗಳಿಂದ ಅನ್ನದಾತ ರೈತನ ಆಸ್ತಿ ಅಂದರೆ ದನಕರಗಳು. ಅದರಲ್ಲಿ ಅವನ ಹೊಲ, ಗದ್ದೆಗಳ ಬೇಸಾಯ ಮಾಡಲು ಎತ್ತುಗಳು ಮೂಲ ಆಸ್ತಿಗಳು. ಮನೆತನದ ಪ್ರತಿಷ್ಟೆಯ ಪ್ರತೀಕವಾಗಿದ್ದವು ಎತ್ತುಗಳು. ಎರಡೆತ್ತಿನ ಕಮತ, ನಾಲ್ಕೆತ್ತಿನ ಕಮತ ಎಂದು ರೈತನ ಶ್ರೀಮಂತಿಕೆಯ ಪ್ರದರ್ಶನವು ಆಗಿದ್ದವು. ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಅವುಗಳನ್ನು ಸಾಕಿ ಸಲುಹುತ್ತಿದ್ದನು. ಎತ್ತು ಎಂದರೆ ಬಸವಣ್ಣ, ಮನೆ ಮಗ ಎಂದು ಹೇಳಿ ಅವುಗಳಿಗೆ ತಮ್ಮ ಮಕ್ಕಳಂತೆ ರಾಮ, ಲಕ್ಷ್ಮಣ, ಹನುಮ, ಭೀಮ ಎಂದು ಹೆಸರಿಟ್ಟು ಅದೇ ರೀತಿ ಅವುಗಳನ್ನು ಕರೆದರೆ ರೈತನಿಗೆ ಸಾಥ ನೀಡುತ್ತಿದ್ದವು. 

ಆದರೆ ಇಂದು ಸಕಾಲದಲ್ಲಿ ಮಳೆ ಬೆಳೆ ಬಾರದೆ ಇದ್ದಿದ್ದರಿಂದ ಭೂಮಿಯಲ್ಲಿ ಬೆಳೆ ಎಲ್ಲರಿಗೂ ಪೂರೈಸುವಷ್ಟು ಬೆಳೆಯದೆ ಇದ್ದಿದ್ದರಿಂದ ಮತ್ತು ಅಲ್ಪ ಸಮಯದಲ್ಲಿ ಭೂಮಿಯ ಉಳುಮೆ ಮಾಡಲು ಟ್ರ್ಯಾಕ್ಟರ್ ಇನ್ನಿತರ ವಾಹನಗಳು ಮುಂದೆ ಬಂದವು. ಎತ್ತುಗಳು ಸಾಕುವಷ್ಟು ರೈತನಿಗೆ ಮೇವು, ಪೌಷ್ಠಿಕ ಆಹಾರ ನೀಡುವುದು ಕಷ್ಟವಾಗುತ್ತಿದ್ದುದರಿಂದ ಎತ್ತುಗಳು ಸಾಕುವದರಲ್ಲಿ ಈ ಭಾಗದ ರೈತ ಹಿಂದೇಟು ಹಾಕುತ್ತಿದ್ದಾನೆ. ಈ ಮೊದಲು ಪ್ರತಿಯೊಂದು ಮನೆಯಲ್ಲಿ ದನಕರಗಳು ಕಾಣುತ್ತಿದ್ದವು. ಇವು ಮರೆಯಾಗಿವೆ. ಎತ್ತುಗಳ ಸ್ಥಾನ ಈಗ ಜಾನಡೀಯರ್, ಹಿಂದುಸ್ತಾನ, ನ್ಯೂ ಹೊಲಾಂಡ್ ತೆಗೆದುಕೊಂಡಿವೆ. 

ಕನರ್ಾಟಕದಲ್ಲಿ ಎತ್ತಿನ ಸಂಖ್ಯೆ ಇಳಿಮುಖ:

ಕನರ್ಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ, ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಎತ್ತುಗಳ ಸಂಖ್ಯೆ ಅಪಾರ ಕಡಿಮೆವಾಗಿದೆ. ಅದರಲ್ಲಿ ಕಬ್ಬು ಸಾಗಾಟಕ್ಕಾಗಿ ಎತ್ತುಗಳನ್ನು ಬಳಿಸುತ್ತಿಲ್ಲಾ. 

ಮಹಾರಾಷ್ಟ್ರದ ಕೊಂಕನ ಭಾಗದಲ್ಲಿ ಈಗಲೂ ಎತ್ತುಗಳೆ ಅವರ ಆಸ್ತಿ:

ಪ್ರತಿವರ್ಷ ಕನರ್ಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಪ್ರಾರಂಭಗೊಂಡ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಸಾಗಾಟ ಮಾಡಲು ಎತ್ತಿನಗಾಡಿ ಬಳಿಸುತ್ತಾರೆ. ಮಹಾರಾಷ್ಟ್ರದ ಬೀಡ್, ಲಾತೂರ, ಉಸ್ಮಾನಾಬಾದ, ಪರಭನಿ, ನಾಂದೇಡ, ಪಂಢರಪುರ, ಸೇರಿದಂತೆ ಅನೇಕ ಜಿಲ್ಲೆಗಳಿಂದ ಸಾವಿರಾರು ಕುಟುಂಬಗಳು ಎತ್ತುಗಾಡಿ ಸಮೇತ ಸಕ್ಕರೆ ಕಾಖರ್ಾನೆಗಳಿಗೆ ಕಬ್ಬು ಸಾಗಾಟ ಮಾಡಲು ಕಾಖರ್ಾನೆಗಳಿಂದ ಕರಾರ ಮಾಡಿ ಸುಮಾರು 5 ತಿಂಗಳು ಕಬ್ಬು ಸಾಗಾಟ ಮಾಡುತ್ತಾರೆ. 

ಪ್ರತಿಯೊಂದು ಕುಟುಂಬದವರು ಎತ್ತಿನಗಾಡಿ ತೆಗೆದುಕೊಂಡು ಕಬ್ಬು ಸಾಗಾಟ ಮಾಡುವಾಗ ಎತ್ತುಗಳ ಶಕ್ತಿ ಸಾಮಥ್ರ್ಯ ಕಂಡು ಕಾಣದಂತೆ ಮಾಡುತ್ತಾ, ಹೆಚ್ಚಿನ ಭಾರವನ್ನು ಹಾಕಿ ಅವುಗಳನ್ನು ಹೊಡೆದು ಬಡೆದು ಹಿಂಸೆ ನೀಡಿ, ಚಾಟಿ ಏಟ ಹೊಡೆದು ಎತ್ತರದಲ್ಲಿರುವ ಕಾಖರ್ಾನೆ ಕಬ್ಬು ತೆಗೆದುಕೊಂಡು ಹೋಗುತ್ತಾರೆ. ಆಗ ಕಾಲು ಜಾರಿ ಬೀಳುತ್ತಿರುವ ಎತ್ತಿಗೆ ಮತ್ತಷ್ಟು ಹೊಡೆದು ಗಾಯಪಡಿಸುತ್ತಾರೆ. ಇದಕ್ಕೆ ಕಾರಣವಿಷ್ಟೆ ಎಂದರೆ ಹೆಚ್ಚಿನ ಭಾರ ತೆಗೆದುಕೊಂಡ ಹೋದರೆ ಹೆಚ್ಚಿನ ಹಣ ಸಿಗುತ್ತದೆ. ಆದರೆ, ಎತ್ತಿಗೆ ಅಗುವ ನೋವು ಆ ಮೂಕ ಪ್ರಾಣಿ ಸಹಿಸುತ್ತಾ, ಮುಂದೆ ಹೋಗಲು ಪ್ರಯತ್ನಿಸುತ್ತದೆ. ಈ ಕೃತ್ಯ ಸಧ್ಯಕ್ಕೆ ಕಾಗವಾಡದ ಶಿರಗುಪ್ಪಿ ಶುಗರ್ ವಕ್ಸರ್್, ಉಗಾರದ ದಿ. ಉಗಾರ ಶುಗರ್ ವಕ್ಸರ್್, ಕೆಂಪವಾಡದ ಅಥಣಿ ಶುಗರ್ ವಕ್ಸರ್್, ಹಲ್ಯಾಳದ ಕೃಷ್ಣಾ ಶುಗರ್ ವಕ್ಸರ್್ಗಳಲ್ಲಿ ಕಾಣಬಹುದು. 

ಪ್ರಾಣಿದಯಾ ಸಮೀತಿ ಮುಂದೆ ಬರಬೇಕು:

ಕಬ್ಬು ಸಾಗಾಟ ಮಾಡುವ ಎತ್ತುಗಳಿಗೆ ಸಾಮಥ್ರ್ಯಕ್ಕಿಂತ ಹೆಚ್ಚಿನ ಕಬ್ಬಿನ ಭಾರವನ್ನು ಹಾಕಿ ಕಾಖರ್ಾನೆಗಳಿಗೆ ಮುಟ್ಟಿಸಲು ಪ್ರಯತ್ನಿಸುತ್ತಿರುವ ಮಹಾರಾಷ್ಟ್ರದ ಎತ್ತಿನಗಾಡಿ ಮಾಲಿಕ ಒಂದು ರೀತಿ ಹಿಂಸೆ ನೀಡುತ್ತಾರೆ. ಅವುಗಳಿಗೆ ಗಾಯವಾದರೆ, ಕಾಯಿಲೆ ಬಂದರೆ ಉಪಚರಿಸದೆ ಮತ್ತಷ್ಟು ಹಿಂಸೆ ನೀಡುತ್ತಾರೆ. ಇಂತಹ ರೈತರನ್ನು ಗುರುತಿಸಿ ಪ್ರಾಣಿದಯಾ ಸಂಘದ ಸದಸ್ಯರು ರೈತನಿಗೆ ತಿಳಿಹೇಳಿ ಎತ್ತುಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸಾಧ್ಯವಿದೆ.

ರೈತ ಹಿತರಕ್ಷಣಾ ಸಮೀತಿ ಆಧ್ಯಕ್ಷ ರವೀಂದ್ರ ಗಾಣಿಗೇರ.

ಈಗಾಗಲೇ ಕಾಗವಾಡ, ಉಗಾರ, ಕೆಂಪವಾಡ, ಹಲ್ಯಾಳ ಈ ಸಕ್ಕರೆ ಕಾಖರ್ಾನೆಗಳಲ್ಲಿ ಮಹಾರಾಷ್ಟ್ರದಿಂದ ಕಬ್ಬು ಕಟಾವಣಿಗಾಗಿ ಆಗಮಿಸಿದ ರೈತ ಕುಟುಂಬಗಳ ಸುಮಾರು 1 ಸಾವಿರ ಎತ್ತಿನಗಾಡಿಗಳು ಕಬ್ಬು ಸಾಗಾಟ ಮಾಡುತ್ತಿವೆ. ಈ ಎತ್ತುಗಳಿಗೆ ಪ್ರಾಣಿದಯಾ ಸಂಘ ಭೇಟಿನೀಡಿ ರೈತನಿಗೆ ಮಾಹಿತಿ ನೀಡಿ ಆಗುತ್ತಿರುವ ತೊಂದರೆಗಳು ತಪ್ಪಿಸಿದರೆ ಸಂಘದ ಒಂದು ಮಹಾನ ಸೇವೆಯಾಗಲಿದೆ ಎಂದು ಅನೇಕ ಹಿರಿಯ ರೈತರು ಅಭಿಪ್ರಾಯ ಪಟ್ಟಿದ್ದಾರೆ.