ಸಮಾಜಕ್ಕೆ ವಿನೋದ ದೊಡ್ಡಣ್ಣವರ ಅವರ ಕೊಡುಗೆ ಅಪಾರ: ಡಾ.ಎಂ.ಎಸ್‌.ಸುಭಾಸ

ಸಮಾಜಕ್ಕೆ  ವಿನೋದ ದೊಡ್ಡಣ್ಣವರ ಅವರ ಕೊಡುಗೆ ಅಪಾರ: ಡಾ.ಎಂ.ಎಸ್‌.ಸುಭಾಸ Vinod Doddannavar's contribution to society is immense: Dr. M.S. Subhas

ಬೆಳಗಾವಿ 29: ಉತ್ತರ ಕರ್ನಾಟಕದಲ್ಲಿ ಅತೀ ವೇಗದಲ್ಲಿ ಮತ್ತು ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರ ಇನ್ನಿತರ ಸಾಮಾಜಿಕ ಕಾರ್ಯಗಳು ಅವರನ್ನು ಉನ್ನತ ಸ್ಥಾನಕೇರಿಸುವುದಲ್ಲದೇ ಸಮಾಜಕ್ಕೆ ಅವರು ನೀಡಿರುವ ಕೊಡುಗೆ ಅಪಾರವಾಗಿದೆ ಎಂದು ವಿಜಯನಗರ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ವಿಶ್ರಾಂತ  ಕುಲಪತಿ ಡಾ. ಎಂ.ಎಸ್‌. ಸುಭಾಸ ಅವರು ಇಂದಿಲ್ಲಿ ಹೇಳಿದರು. 

ಶುಕ್ರವಾರದಂದು ಭರತೇಶ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾದ ಇತ್ತಿಚಿಗೆ ರಾಣೀ ಚೆನ್ನಮ್ಮ ವಿಶ್ವವಿದ್ಯಾಲಯದ  ವತಿಯಿಂದ ಡಾಕ್ಟರೇಟ ಪದವಿ ಪಡೆದ ಡಾ. ವಿನೋದ ದೊಡ್ಡಣ್ಣವರ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿ  ಮಾತನಾಡಿದ ಅವರು, ವಿನೋದ ದೊಡ್ಡಣ್ಣವರ ಅವರು ಕಳೆದ ಹಲವಾರು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಧಾರ್ಮಿಕ ಕ್ಷೇತ್ರ, ಸಾಮಾಜಿಕ ಕೇತ್ರಗಳಲ್ಲಿ ಅಪಾರ ಕಾರ್ಯಗಳನ್ನು  ಕೈಗೊಂಡಿದ್ದಾರೆ.  ಜೀರ್ಣಾವ್ಯಸ್ಥೆಯಲ್ಲಿರುವ ಮಂದಿರಗಳ ಪುನರ್‌ನಿರ್ಮಾಣ, ತಾಳೆಗರಿಗಳ ರಕ್ಷಣೆ , ಶೈಕ್ಷಣೀಕ ಕ್ಷೇತ್ರದಲ್ಲಿ ಬದಲಾವಣೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಆಧುನಿಕರಣ ಮಾಡಿರುವುದು ಅವರ ಸತ್ಕಾರ್ಯಗಳಾಗಿವೆ. ಈ ಕಾರ್ಯವನ್ನು ಗುರುತಿಸಿ  ರಾಣಿ ಚೆನ್ನಮ್ಮ ವಿಶ್ವ ವಿದ್ಯಾವಿದ್ಯಾಲಯ ಅವರಿಗೆ ಡಾಕ್ಟರೆಟ ಪದವಿ ನೀಡಿರುವುದು ಶ್ಲಾಘನೀಯವಾಗಿದೆ. ಎಂದರು.  

ಮುಂಬರುವ ದಿನಗಳಲ್ಲಿ ಶೈಕ್ಷಣೀಕ  ಕ್ಷೇತ್ರ ಅಮೂಲಾಗ್ರ ಬದಲಾವಣೆಯನ್ನು ಕಾಣಲಿದೆ. ವಿದೇಶಿ ವಿಶ್ವ ವಿದ್ಯಾಲಯಗಳು ಭಾರತಕ್ಕೆ ಲಗ್ಗೆ ಹಾಕಲು ಸಿದ್ದವಾಗಿವೆ. ಅವರ ಪಠ್ಯಕ್ರಮ , ಶಿಕ್ಷಣದ ಪದ್ದತಿಯನ್ನು ನಾವು ಸಮರ್ಥವಾಗಿ ಎದುರಿಸಲು  ಸನ್ನದ್ದಾರಾಗಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಸಹ ಹೊಸ ಪದ್ದತಿ ಮತ್ತು ಹೊಸ ಅವಿಷ್ಕಾರಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದು ಅವರು ತಿಳಿಸಿದರು.  

ಸಮಾರಂಭದಲ್ಲಿ ಎಸ್‌.ಡಿ.ಎಂ.ಶಿಕ್ಷಣ ಸಂಸ್ಥೆಯ ಕುಲಪತಿ ಡಾ. ನಿರಂಜನಕುಮಾರ ಅವರು ಮಾತನಾಡಿ, ಭರತೇಶ ಶಿಕ್ಷಣ ಸಂಸ್ಥೆ ಮತ್ತು ಎಸ್‌.ಡಿ.ಎಂ. ಶಿಕ್ಷಣ ಸಂಸ್ಥೆಗಳು ಯಾವತ್ತಲು ಸಾಮಾಜಿಕ ಧ್ಯೆಯದೊಂದಿಗೆ ಕಾರ್ಯ ನಿರ್ವಹಿಸುತ್ತ ಬಂದಿವೆ.ಇಂದು ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ ಅವರ ಕಾರ್ಯಗಳು ಸಮಾಜಕ್ಕೆ ತಿಳಿಯುವಂತಾಗಿದೆ. ಓರ್ವ ವ್ಯಕ್ತಿ ಪ್ರಾಮಾಣಿಕವಾಗಿ, ನಿಷ್ಠೆ, ಮತ್ತು ಗುರಿ ಮುಟ್ಟುವ ಧ್ಯೆಯದೊಂದಿಗೆ ಕೆಲಸ ಮಾಡಿದರೆ   ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ವಿನೋದ ದೊಡ್ಡನ್ಣವರ ಅವರೇ ಸಾಕ್ಷಿ ಎಂದು ಅವರು ಹೇಳಿದರು.  

ವಿಧಾನ ಪರಿಷತ್ ಸದಸ್ಯ ನಾಗರಾಜ ಯಾದವ, ಮಾಜಿ ಶಾಸಕ ಸಂಜಯ ಪಾಟಿಲ,  ಹಿರಿಯ ನ್ಯಾಯವಾದಿ ಎಂ.ಬಿ.ಜಿರಲಿ,ಡಾ. ರಮೇಶ ದೊಡ್ಡಣ್ಣವರ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ವಿನೋದ ದೊಡ್ಡಣ್ಣವರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅದಲ್ಲದೇ ದೊಡ್ಡಣ್ಣವರ ಕುಟುಂಬದ ವತಿಯಿಂದ 30 ಲಕ್ಷ ರೂಗಳನ್ನು ಭರತೇಶ ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಿ ನೀಡಲಾಯಿತು.  

ವೇದಿಕೆ ಮೇಲೆ ಎಸ್‌.ಡಿ.ಎಂ.ಸಂಸ್ಥೆಯ ಮುಖ್ಯ ನಿರ್ದೇಶಕಿ, ಪದ್ಮಲತಾ ನಿರಂಜನಕುಮಾರ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪೂರೆ ಅವರು ವಹಿಸಿದ್ದರು.  ಖಜಾಂಚಿ ಭೂಷಣ ಮಿರ್ಜಿ ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶಶಾಂಕ ಲೆಂಗಡೆ, ಹೀರಾಚಂದ ಕಲಮನಿ, ಡಾ.ಸಾವಿತ್ರ ದೊಡ್ಡಣ್ಣವರ ಅತಿಥಿಗಳನ್ನು ಪರಿಚಯಿಸಿದರು.  

ಸ್ವಾತಿ ಜೋಗ ನಿರೂಪಿಸಿದರು. ಡಾ. ಪ್ರಶಾಂತ ಕಾಂಬಳೆ ವಂದಿಸಿದರು. ವಿವಿಧ ಸಮಾಜದ ಮುಖಂಡರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ವಿನೋದ ದೊಡ್ಡಣ್ಣವರ ಅವರನ್ನು ಸನ್ಮಾನಿಸಿ ಗೌರವಿಸಿದರು.