ಬಿ.ಸಾಲವಾಡಗಿ ಗ್ರಾಮಸ್ಥರಿಂದ ಗ್ರಾಮ ಪಂಚಾಯತಗೆ ಬೀಗ
Villagers of B.Salvadagi lock the Gram Panchayat
ಬಿ.ಸಾಲವಾಡಗಿ ಗ್ರಾಮಸ್ಥರಿಂದ ಗ್ರಾಮ ಪಂಚಾಯತಗೆ ಬೀಗ
ತಾಳಿಕೋಟಿ 02: ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಬಿ. ಸಾಲವಾಡಗಿ ಗ್ರಾಮ ಪಂಚಾಯತ ವ್ಯವಸ್ಥೆ ಹಾಗೂ ಪಿಡಿಒ ಪ್ರಜಕ್ತಾ ತಟಗಾರ ಅವರ ಕಾರ್ಯವೈಖರಿ ವಿರೋಧಿಸಿ ಗ್ರಾಮಸ್ಥರು ಬೀಗ ಜಡೆದ ಘಟನೆ ನಡೆದಿದೆ.
ಇದರಿಂದ ಕಳೆದ ಆರು ತಿಂಗಳ ಅವಧಿ ಒಳಗೆ ಎರಡನೇ ಬಾರಿ ಈ ಪಂಚಾಯತಿಗೆ ಮತ್ತೇ ಬೀಗ ಜಡೆದಂತಾಗಿದೆ. ಜುಲೈ 30 ರಿಂದ ಇಲ್ಲಿಯವರೆಗೆ ಅಂದರೆ ಕಳೆದ ಮೂರು ದಿನಗಳಿಂದ ಪಂಚಾಯತಗೆ ಬೀಗ ಜಡೆದರೂ ಮೇಲಾಧಿಕಾರಿಗಳು ಈ ಕುರಿತು ಕಾರ್ಯ ಪ್ರವೃತರಾಗಿಲ್ಲ ಎಂದಾದರೆ ಇಲ್ಲಿಯ ವ್ಯವಸ್ಥೆಯ ಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ. ಇದು ಸುವರ್ಣ ಗ್ರಾಮ ಎಂದು ಘೋಷಿತ ಗ್ರಾಮವಾಗಿದೆ, ಒಂದು ಕಾಲದಲ್ಲಿ ಇಡೀ ತಾಲೂಕಿನಲ್ಲಿಯೇ ನಂಬರ್1 ಗ್ರಾಮ ಪಂಚಾಯತಿಯಾಗಿತ್ತು. ಮೊದಲ ಬಾರಿ ಗ್ರಾಮ ಪಂಚಾಯತಗೆ ಬೀಗ ಜಡೆದಾಗ ಮೇಲಾಧಿಕಾರಿಗಳು ಬಂದು ಸಮಸ್ಯೆ ಪರಿಹಾರಕ್ಕಾಗಿ ಪ್ರಯತ್ನಿಸಿದ್ದರೂ ಯಾವುದೇ ರೀತಿಯ ಪ್ರಯೋಜನ ಆಗಿಲ್ಲವೆಂದು ಗ್ರಾಮಸ್ಥರು ಹೇಳುತ್ತಾರೆ. ಪಿಡಿಓ ತಟಗಾರ ಅವರು ಬಂದಾಗಿನಿಂದ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಬಸವ ವಸತಿ ಯೋಜನೆ ಫಲಾನುಭವಿಗಳನ್ನು ಆಯ್ಕೆ ಮಾಡಲು ಗ್ರಾಮ ಸಭೆಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ ಎಂದು ಗ್ರಾಮ ಪಂಚಾಯತ ಸದಸ್ಯರಾದ ವಿಶ್ವನಾಥ ಜಹಗೀರದಾರ ಅವರು ಆರೋಪಿಸುತ್ತಾರೆ. ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸದಸ್ಯರ ಮಾತಿಗೂ ಕವಡೆ ಕಾಸಿನ ಕೆಮ್ಮತ್ತಿಲ್ಲ ಎಂದು ತಿಳಿಸುವ ಅವರು ಬಾಕಿ ಇರುವ ಬಿಲ್ಲುಗಳನ್ನು ಕೊಡದೇ ವಿನಾಕಾರಣ ಸತಾಯಿಸುತ್ತಿದ್ದಾರೆ. ಪಂಚಾಯತ್ ನ ಮುಖ್ಯ ಗೇಟ್ ನಲ್ಲಿಯೇ ಕಾಂಪೌಂಡ್ ಗೋಡೆಯ ಒಂದು ಭಾಗ ಸಂಪೂರ್ಣವಾಗಿ ಒಡೆದು ಹೋಗಿದ್ದು ಇದು ಯಾವ ಸ್ಥಿತಿಯಲ್ಲಾದರೂ ಬಿದ್ದು ಹೋಗುವ ಸಂಭವವಿದೆ ಇದರಿಂದ ಸಾಕಷ್ಟು ಅನಾಹುತವೂ ಆಗಬಹುದು, ಘನತಾಜ್ಯ ವಿಲೇವಾರಿ ವಾಹನ ನಿಂತುಬಿಟ್ಟಿದೆ ಹೀಗೆ ಪಂಚಾಯತಿಯಲ್ಲಿ ಹತ್ತು ಹಲವು ಸಮಸ್ಯೆಗಳಿವೆ ಇದರ ವ್ಯಾಪ್ತಿಗೆ ಬರುವ ಹಲವಾರು ಗ್ರಾಮದ ಜನರು ಈ ಕೆಟ್ಟ ವ್ಯವಸ್ಥೆಗೆ ರೋಸಿ ಹೋಗಿದ್ದಾರೆ ಎಂದು ಅವರು ತಿಳಿಸುತ್ತಾರೆ.
ಮೇಲಾಧಿಕಾರಿಗಳು ಆದಷ್ಟು ಬೇಗ ಪಂಚಾಯಿತಿಗೆ ಭೇಟಿ ಕೊಟ್ಟು ಈ ಕೆಟ್ಟ ವ್ಯವಸ್ಥೆಯನ್ನು ಸರಿಪಡಿಸಬೇಕು ಹಾಗೂ ಇಲ್ಲಿಯ ಪಿಡಿಒ ಅವರನ್ನು ಕೂಡಲೇ ವರ್ಗಾಯಿಸಲು ಕ್ರಮ ವಹಿಸಬೇಕು ಇಲ್ಲದೆ ಹೋದಲ್ಲಿ ನಾವು ಬೀಗ ತೆಗೆಯಲು ಅವಕಾಶ ಮಾಡಿ ಕೊಡುವುದಿಲ್ಲ ಎಂದು ತಿಳಿಸಿರುತ್ತಾರೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಆದಷ್ಟು ಬೇಗ ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವ ಪ್ರಯತ್ನ ಮಾಡಬೇಕು ಇಲ್ಲದೆ ಹೋದಲ್ಲಿ ಇದಕ್ಕಿಂತಲೂ ಉಗ್ರ ವಾದ ಹೋರಾಟವನ್ನು ಮಾಡುತ್ತೇವೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಈ ಸಮಯದಲ್ಲಿ ಯುವ ಮುಖಂಡ ರಾಜುಗೌಡ ಅನಂತರೆಡ್ಡಿ, ನಾಗು ವಡ್ಡರ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 