ದೇವಸ್ಥಾನದ ಜಮೀನು ಗ್ರಾಮಸ್ಥರ ಉಪಯೋಗಕ್ಕೆ ಬರಲಿ ; ಗ್ರಾಮಸ್ಥರ ಒತ್ತಾಯ
Villagers demand that temple land be made available for use by villagers
ದೇವಸ್ಥಾನದ ಜಮೀನು ಗ್ರಾಮಸ್ಥರ ಉಪಯೋಗಕ್ಕೆ ಬರಲಿ ; ಗ್ರಾಮಸ್ಥರ ಒತ್ತಾಯ
ಬೆಳಗಾವಿ 14: ದೇವಸ್ಥಾನದ ಪೂಜೆ ನಿರ್ವಹಣೆ ನೈವದ್ಯಕ್ಕೆ ಮೀಸಲಿಟ್ಟಿರುವ ದೇವಸ್ಥಾನದ ಜಮೀನು ಗ್ರಾಮಸ್ಥರ ಉಪಯೋಗಕ್ಕೆ ಬರಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮಣ್ಣಿಕೇರಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದ ಘಟನೆ ಜರುಗಿತು.
ಬೆಳಗಾವಿ ತಾಲೂಕಿನ ಮಣ್ಣಿಕ್ಕೇರಿ ಗ್ರಾಮದಲ್ಲಿರುವ ಬ್ರಹ್ಮದೇವ ದೇವಸ್ಥಾನದ ನಿರ್ವಹಣೆಗೆ ಮತ್ತು ಪೂಜೆಗೆ ಮೀಸಲಿಟ್ಟಿರುವ ಜಮೀನು ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರ ಉಪಯೋಗಕ್ಕೆ ಬರಬೇಕು ಎಂದು ಒತ್ತಾಯಿಸಿ ಶ್ರೀ ಬ್ರಹ್ಮದೇವ ದೇವಸ್ಥಾನ ಟ್ರಸ್ಟ್ ಕಮಿಟಿಯ ಸದಸ್ಯರು ಮಣ್ಣಿಕ್ಕೇರಿ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮಲಗೌಡಾ ಪಾಟೀಲ ಮಾತನಾಡಿ, ಊರಿಗಾಗಿ ಇರುವಂತ ದೇವಸ್ಥಾನದ ಜಮೀನು ದೇವಸ್ಥಾನದ ಅಭಿವೃದ್ಧಿಗಾಗಿ ಊರಿನ ಜನರ ಉಪಯೋಗಕ್ಕೆ ಬರಬೇಕೆಂದು ಗ್ರಾಮಸ್ಥರು ಡಿಸಿ ಅವರಿಗೆ ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಕಾನೂನು ಬದ್ಧವಾಗಿ ಗ್ರಾಮಸ್ಥರ ಉಪಯೋಗಕ್ಕೆ ಬರುವಂತೆ ಮಾಡಿಕೊಂಡಬೇಕೆಂದು ಮನವಿ ಮಾಡಿಕೊಂಡರು. ಈ ಭಾಗದ ಶಾಸಕರ ಮಣ್ಣಿಕ್ಕೇರಿ ಗ್ರಾಮಕ್ಕೆ ತೆರಳಿ ಟ್ರಸ್ಟ್, ಗ್ರಾಮದ ಪಂಚರು ಹಾಗೂ ಗ್ರಾಮಸ್ಥರೇಲ್ಲರೂ ಸೇರಿಕೊಂಡು ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪುಂಡಲೀಕ ಖಜಗೋನಟ್ಟಿ ಮಾತನಾಡಿ, ಬ್ರಹ್ಮದೇವ ದೇವಸ್ಥಾನದ ಬಳಿ ದೇವಸ್ಥಾನದ ಪೂಜೆ ನಿರ್ವಹಣೆ ನೈವದ್ಯಕ್ಕೆ ಮೀಸಲಿಟ್ಟಿರುವ ಜಮೀನುವಿದ್ದರೂ ಯಾವುದೇ ಅಭಿವೃದ್ಧಿಗಾಗಲಿ ಅಥವಾ ಸಮುದಾಯ ಭವನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದರು. ಇಂದಿನ ಪ್ರತಿಭಟನೆಯಲ್ಲಿ ಶ್ರೀ ಬ್ರಹ್ಮದೇವ ದೇವಸ್ಥಾನದ ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಮಣ್ಣಿಕ್ಕೇರಿ ಗ್ರಾಮಸ್ಥರು ಭಾಗವಹಿಸಿದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 