ವಿಜೃಂಭಣೆ ಶ್ರೀ ಉಚಿಂಗಮ್ಮ ದೇವಿ ಜಾತ್ರೆ ಆಚರಣೆ, ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚನೆ

ವಿಜೃಂಭಣೆ ಶ್ರೀ ಉಚಿಂಗಮ್ಮ ದೇವಿ ಜಾತ್ರೆ ಆಚರಣೆ, ಆಗಮಿಸುವ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡಲು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಸೂಚನೆ  Vijrumbhane Sri Uchingamma Devi Fair celebrated, District Collector Kavita S. Mannikeri instructs t


ವಿಜಯನಗರ 18: ಶ್ರೀ ಉಚ್ಚಂಗಮ್ಮ ದೇವಿ ಭರತ ಹುಣ್ಣಿಮೆ ಜನವರಿ 31 ರಿಂದ ಫೆಬ್ರವರಿ 2 ಮತ್ತು ಯುಗಾದಿ ಜಾತ್ರೆ ಮಾರ್ಚ್‌ 17 ರಿಂದ  22 ರ ವರೆಗೆ ನಡೆಯಲಿದ್ದು ಪ್ರತಿ ದಿನ ವಿಶೇಷ ಪೂಜೆಯೊಂದಿಗೆ ಉತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಉಚ್ಚಂಗಿ ದುರ್ಗಾ ಗ್ರಾಮ ಮತ್ತು ಗುಡ್ಡದ ಮೇಲೆ ಭಕ್ತರಿಗಾಗಿ ಮೂಲಭೂತ ಸೌಕರ್ಯ ಗಳನ್ನ ಕೈಗೊಳ್ಳುವಂತೆ  ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ತಿಳಿಸಿದರು.  

ಅವರು ಉಚ್ಚಂಗಿದುರ್ಗಾ ಯಾತ್ರಿ ನಿವಾಸದಲ್ಲಿ ಶನಿವಾರ ಶ್ರೀ ಉಚ್ಚಂಗಮ್ಮ ದೇವಿ ಭರತ ಹುಣ್ಣಿಮೆ ಮತ್ತು ಯುಗಾದಿ ಜಾತ್ರೆ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರಾ ವೇಳೆ ರಾಜ್ಯ ಹಾಗೂ ಹೊರ ರಾಜ್ಯ ದಿಂದ ಶ್ರೀ ಉಚ್ಚಂಗಮ್ಮ ದೇವಿ ಭರತ ಹುಣ್ಣಿಮೆ ಮತ್ತು ಯುಗಾದಿ ಜಾತ್ರೆಗೆ ಪ್ರತಿದಿನ ಲಕ್ಷಾಂತರ ಭಕ್ತಾಧಿಗಳು ಬರುತ್ತಾರೆ. ಅವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಹಾಗೂ ವಿಜೃಂಭಣೆ ಜಾತ್ರೆ ಆಚರಣೆಗೆ ಅಧಿಕಾರಿಗಳು ಕ್ರಮ ವಹಿಸುವಂತೆ ಸೂಚನೆ ನೀಡಿದರು.  

ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಶೌಚಾಲಯ ವ್ಯವಸ್ಥೆ, ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚಬೇಕು, ವಿದ್ಯುತ್ ಸಂಪರ್ಕ ನಿರಂತರ ವಾಗಿರಬೇಕು, ಜಾತ್ರೆಯು ಶಾಂತ ರೀತಿಯಲ್ಲಿ ಆಚರಿಸಲು ಸೂಕ್ತ ಪೊಲೀಸ್ ಬಂದೋಬಸ್ತ್‌ ವ್ಯವಸ್ಥೆ ಮಾಡಬೇಕು. ಭಕ್ತಾದಿಗಳಿಗೆ ಹೊಸಪೇಟೆ ಮತ್ತು ದಾವಣಗೆರೆ ಯಿಂದ ವಿಶೇಷ ಬಸ್ ಸೌಲಭ್ಯ ವನ್ನು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಜಾತ್ರೆ ಅವಧಿಯಲ್ಲಿ ಹೆಚ್ಚಿನ ತಾಪಮಾನ ವಿರುವುದರಿಂದ ಸಾಂಕ್ರಾಮಿಕ ರೋಗ ಹರಡದಂತೆ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಕ್ರಮವಹಿಸಬೇಕು. ಗ್ರಾಮದಲ್ಲಿ ಮತ್ತು ಗುಡ್ಡದ ಮೇಲೆ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ವೈದ್ಯರು ಮತ್ತು ಸಿಬ್ಬಂದಿಗಳನ್ನು ನಿಯೋಜಿಸಬೇಕು. ಜೊತೆಗೆ ಸಾಕಷ್ಟು ಓಷಧ ಗಳನ್ನು ದಾಸ್ತಾನು ಇಡಬೇಕು,   ಮತ್ತು ಅಗ್ನಿ ಅವಘಡ ಸಂಭವಿಸದಂತೆ ಅಗ್ನಿಶಾಮಕ ಸಿಬ್ಬಂದಿ ಕ್ರಮವಹಿಸಬೇಕು ಎಂದರು.  

 ಅರಿಷಿಣ ಹೊಂಡದ ಸುತ್ತ ಮುತ್ತಲೂ ಬ್ಯಾರಿಕೇಡ್ ಅಳವಡಿಸಬೇಕು ಮತ್ತು ಗ್ರಾಮದಿಂದ ಗುಡ್ಡಕ್ಕೆ ಹೋಗುವ ದಾರಿಯಲ್ಲಿ ಭಕ್ತಾದಿಗಳು ಹೆಚ್ಚು ಬರುವ ಕಾರಣ ಅಗತ್ಯ ವಿರುವ ಕಡೆ ಬ್ಯಾರಿಕೇಡ್ ಅಳ ವಡಿಸಬೇಕು, ಗ್ರಾಮದಿಂದ ಗುಡ್ಡದ ಮೇಲೆ ಹೋಗುವ ಭಕ್ತಾದಿಗಳಿಗೆ ಮೆಟ್ಟಿಲುಗಳ ಮೇಲೆ 5 ರಿಂದ 6 ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದರು.  

 ದೇವದಾಸಿ ಪದ್ಧತಿ ರದ್ದಾಗಿರುವ ಕಾರಣ  ಜಾತ್ರೆ ಆಚರಣೆ ಮೊದಲು ಗ್ರಾಮ ಮತ್ತು ಸುತ್ತಮುತ್ತಲೂ ದೇವದಾಸ ಪದ್ಧತಿ ರದ್ದಾಗಿರುವ ಬಗ್ಗೆ ಮತ್ತು ಪದ್ಧತಿ ಆಚರಿಸಿದಲ್ಲಿ  ಕಾನೂನು ರೀತ್ಯಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅರಿವು ಮೂಡಿಸಬೇಕು ಮತ್ತು ಬ್ಯಾನರ್ ಅಳವಡಿಸುವಂತೆ ತಿಳಿಸಿದರು.  

 ಸಭೆಯಲ್ಲಿ ಉಪವಿಭಾಗಾಧಿಕಾರಿ ಸುರೇಶ್ ಕುಮಾರ್, ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಸವಿತಾ, ತಹಶೀಲ್ದಾರ್ ಗೀರೀಶ್,  ಡಿವೈಎಸ್ಪಿ ್ಠದಿ್ಯಿಷ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.