ವಿಜಯಪುರ: ಓದುವುಕೆ ಚಿಂತನೆಗಳನ್ನು ವಿಸ್ತರಿಸುವ ಸಾಧನ

ವಿಜಯಪುರ: ಓದುವುಕೆ ಚಿಂತನೆಗಳನ್ನು ವಿಸ್ತರಿಸುವ ಸಾಧನ

ಲೋಕದರ್ಶನ ವರದಿ

ವಿಜಯಪುರ 27: ಸಮುದಾಯಗಳ ಮೂಲಕ ಮತ್ತು ವೈಯಕ್ತಿಕವಾಗಿ ಕನಕದಾಸರನ್ನು ಓದುವ ಮೂಲಕ ಅವರನ್ನು ಜೀವಂತವಾಗಿಡುವ ಮತ್ತು ನಮ್ಮ ಚಿಂತನೆಗಳನ್ನು ವಿಸ್ತರಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಬೇಕಿರುವುದು ಇಂದಿನ ತುತರ್ಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿದರ್ೇಶಕಿ ಕೆ.ಎಂ.ಜಾನಕಿ ಅಭಿಪ್ರಾಯಪಟ್ಟರು.

ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಕನರ್ಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸರನ್ನು ನಾನೇಕೆ ಓದಬೇಕು ಎಂಬ ವಿಷಯದ ಕುರಿತ ಮೂರು ದಿನದ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳ ಶಾಲಾ ಶಿಕ್ಷಕ-ಶಿಕ್ಷಕಿಯರು, ವಿವಿಧ ಮಹಾವಿದ್ಯಾಲಯಗಳಿಂದ ಆಗಮಿಸಿದ್ದ ವಿದ್ಯಾಥರ್ಿನಿಯರು, ಮಹಿಳಾ ವಿವಿಯ ವಿವಿಧ ನಿಖಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾಥರ್ಿನಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. 

ಕಾರ್ಯಕ್ರಮ ಸಂಯೋಜಕ ಡಾ.ಜಿ.ಎನ್.ಕಿರಣ ಸ್ವಾಗತಿಸಿದರು. ಸಂಶೋಧನಾ ವಿದ್ಯಾಥರ್ಿನಿ ಗೀತಾ ಎಚ್.ಎನ್. ಪರಿಚಯಿಸಿದರು. ಮಹಿಳಾ ಅಧ್ಯಯನ ವಿಭಾಗದ ಪೋಸ್ಟ್ ಡಾಕ್ಟರಲ್ ಫೆಲೋ ಡಾ.ಸುರೇಖಾ ರಾಠೋಡ ನಿರೂಪಿಸಿದರು. ವಿದ್ಯಾಥರ್ಿನಿ ಭಾಗ್ಯಶ್ರೀ ವಂದಿಸಿದರು.