ರಾಷ್ಟ್ರೀದ ಸಂಸ್ಕೃತಿ ಸಂರಕ್ಷಣೆಗೆ ಶಿಕ್ಷಕರು ಉಸಿರಿದ್ದಂತೆ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ.
Veteran writer Hanumantha Gowda Gollara, like teachers, has been instrumental in preserving nationa
ಬ್ಯಾಡಗಿ 15 : ಉಸಿರಾಗಿ ಹೋಗಿ ಬರುವ ಗಾಳಿ ಗೆ ದಾರಿ ತಿಳಿದಿರಬೇಕು ಅದು ಒಮ್ಮೆ ದಾರಿ ತಪ್ಪಿದರೆ ಗಾಳಿ ಬೀದಿಯ ಪಾಲು ದೇಶ ಮಣ್ಣಿನ ಪಾಲು ಹಾಗೆಯೇ ನಮ್ಮ ರಾಷ್ಟ್ರೀಯ ಬದುಕಿಗೆ ಸಂಸ್ಕೃತಿ ಸಂರಕ್ಷಣೆಗೆ ಶಿಕ್ಷಕರು ಉಸಿರಿದಂತೆ ಎಂದು ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ್ ಅಭಿಪ್ರಾಯ ಪಟ್ಟರು. ತಾಲೂಕಿನ ಕಲ್ಲೇದವರು ಗ್ರಾಮದ ಕಲ್ಮೇಶ್ವರ ಪ್ರೌಢಶಾಲೆಯಲ್ಲಿ 2002 ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ಸೋಮವಾರ ಏರಿ್ಡಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದವರು. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಾಂಸ್ಕೃತಿಕ ವರ್ಗಾವಣೆಯ ನೇತಾರರು ವಿದ್ಯಾರ್ಥಿಗಳ ಯಶಸ್ಸು ಶಿಕ್ಷಕ ವೃತ್ತಿಯ ಸಾರ್ಥಕತೆ ಪಡೆಯಲು ಕಾರಣ.
ಶಿಷ್ಯಂದಿರು ಗುರು ಸಾಧನೆ ಮಾಡಿರುವುದನ್ನು ಕಂಡಾಗ ಸಂತೃಪ್ತಿ ಉಂಟಾಗುತ್ತದೆ. ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪುಸ್ತಕಗಳಿಗಿಂತ ವಿದ್ಯಾರ್ಥಿಗಳು ನೀಡಿದ ಗೌರವ ಪ್ರಶಸ್ತಿ ಎಲ್ಲರಿಗಿಂತ ಹೆಚ್ಚು. ಗುರುಗಳು ಗೌರವಿಸುವ ಸಮಾಜ ನಾಡು ಬಡವಾಗುತ್ತದೆ ಅತಿ ಕಿರಿಯ ವಯಸ್ಸಿನಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮಲಾಲಾ ಹೇಳಿದ ಒಂದು ಪುಸ್ತಕ. ಒಂದು ಪೆನ್ನು. ಒಂದು ಮಗು ಹಾಗೂ ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ಇಡೀ ಜಗತ್ತನ್ನೇ ಬದಲಾಯಿಸಬಹುದು ಎಂದು ಅವಳ ಈ ಮಾತು ಅರ್ಥಪೂರ್ಣವಾಗಿದೆ ಎಂದು ಹೇಳಿದರು.ನಿವೃತ್ತ ಮುಖ್ಯೋಪಾಧ್ಯಾಯರು ಸಿ ಎನ್ ಬಣಕಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಣದ ಬೇರು ಕಹಿಯಾದರು ಫಲ ಮಾತ್ರ ಸಿಹಿ ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವಿದೆ ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಓದುಗಾರಿಕೆ ಜ್ಞಾನ ಅತ್ಯವಶ್ಯ ಎಂದರು.
ವಿದ್ಯಾರ್ಥಿಗಳ ಪರವಾಗಿ ತುಳಜಾ ತಂಗೊಡರ ಮಾತನಾಡಿ ಶಿಕ್ಷಕರ ಛಡಿಏಟೂ ನಮ್ಮನ್ನು ಮೂರ್ತಿಯನ್ನಾಗಿ ಮಾಡಿದೆ ತಾಯಿ ತಂದೆಯರು ಜೀವ ಕೊಟ್ಟರೆ ಶಿಕ್ಷಕರು ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಕಲಿಸಿದ್ದಾರೆ ಈ ಕಾರ್ಯಕ್ರಮ ನಮ್ಮ ಜೀವನದಲ್ಲಿ ಮರೆಯಲಾಗದ ಅಪರೂಪದ ಈ ಸನ್ನಿವೇಶ ಸಹೋದರ ಸಹೋದರಿಯರ ಸ್ನೇಹ ಸಂಗಮ ಸಂಭ್ರಮ ಅವಿಸ್ಮರಣೀಯ ಎಂದು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಹೊನ್ನಪ್ಪನವರ, ವೀರಣ್ಣ ಬಳ್ಳಾರಿ ,ಕುಮಾರ ಹುಲ್ಮನಿ, ಕುಮಾರ ಚೂರಿ, ಮಂಜು ಬರಡಿ,ಭರಮಪ್ಪ ಹಾವನೂರ,ಹನುಮಂತ ಕೆಂಗೊಂಡ್ರ, ಕೆ ಎಂ ತಂಗೋಡರ ,ಬಿ ಎಸ್ ಗೊರವರ, ಜಗದೀಶ್ ಹೊನ್ನಪ್ಪನವರ,ಮಂಜಯ್ಯ ಪೂಜಾರ, ಬಸವರಾಜ್ ದಾನಪ್ಪನವರ, ಬಸವರಾಜ್ ಮುದುಕಪ್ಪನವರ, ಕಲ್ಲಪ್ಪ ಕದರ ಮಂಡಲಗಿ, ಚಂದ್ರಯ್ಯ ಹಿರೇಮಠ, ಬಸವರಾಜ್ ದಾನಪ್ಪನವರ, ಹಾಗೂ ಅನೇಕ ಗಣ್ಯರು ಮತ್ತು ವಿದ್ಯಾರ್ಥಿಗಳು ಪಾಲಕರು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸವಿತಾ ಮತ್ತು ಸಂಗಡಿಗರು ಪ್ರಾರ್ಥನೆಯನ್ನು ಮಾಡಿದರು. ಸದಾ ಚೂರಿ ಅತಿಥಿಗಳನ್ನು ಸ್ವಾಗತಿಸಿದರು. ನಾಗಲಿಂಗಪ್ಪ ತಳವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹನುಮಂತ ಮೋಟೆಬೆನ್ನೂರು ಹಾಗೂ ಪ್ರತಿಭಾ ಪಾಟೀಲ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ವಂದನಾರೆ್ಣಯನ್ನು ಭೀಮಪ್ಪ ಕದರಮಂಡಲಗಿ ಮಾಡಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 