ವೈಚಾರಿಕತೆಯ ಮೂಲ ನೆಲೆಯೇ ವಚನಗಳು - ಎಸ್‌. ಎಂ. ಜಯಶ್ರೀ

ವೈಚಾರಿಕತೆಯ ಮೂಲ ನೆಲೆಯೇ ವಚನಗಳು - ಎಸ್‌. ಎಂ. ಜಯಶ್ರೀ Verses are the foundation of rationality - S. M. Jayashree

ವೈಚಾರಿಕತೆಯ ಮೂಲ ನೆಲೆಯೇ ವಚನಗಳು - ಎಸ್‌. ಎಂ. ಜಯಶ್ರೀ 

ಬಳ್ಳಾರಿ 02: ಅಕ್ಷರಸ್ಥ ಮತ್ತು ವಿದ್ಯಾವಂತಇಬ್ಬರೂ ಬೇರೆ. ಇವರಲ್ಲಿ ಬುದ್ದಿವಂತನು ಬದುಕನ್ನುಕಟ್ಟಿಕೊಂಡರೆ, ವಿವೇಕಶಾಲಿ ಬದುಕಿನಜೊತೆ ಬಾಂಧವ್ಯವನ್ನು ಬೆಳಸಿಕೊಳ್ಳುತ್ತಾನೆ. ಅಕ್ಷರ ವಿದ್ಯೆಗಿಂತ ವೈಚಾರಿಕತೆಯು ವ್ಯಕ್ತಿಯ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುತ್ತದೆ.ಶರಣರ ವಿಚಾರಗಳೆಲ್ಲ ವೈಚಾರಿಕತೆಯ ನಿಧಿಯಾಗಿವೆಯೆಂದು ವಿಶ್ರಾಂತ ಶಿಕ್ಷಕಿಯರಾದ ಎಸ್‌.ಎಂ.ಜಯಶ್ರೀಯವರು ಅಭಿಪ್ರಾಯಪಟ್ಟರು.ಶರಣ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾಘಟಕವುಕಪ್ಪಗಲ್ಲಿನ ಶಾರದಾಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 317ನೇ ಮಹಾಮನೆ ಲಿಂ.ಸಂಗನಕಲ್ಲುದೊಡ್ಡ ಶರಣಪ್ಪ ಹಂಪಮ್ಮದತ್ತಿಕಾರ್ಯಕ್ರಮದಲ್ಲಿ "ಶರಣರ ವಚನಗಳಲ್ಲಿ ವೈಚಾರಿಕತೆ"ಯಕುರಿತು ಮಾತನಾಡುತ್ತಾ, ಶರಣರ ವಚನಗಳು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಉಜ್ವಲಗೊಳಿಸುವ ಪುರುಷ ಮಣಿಗಳು.ನುಡಿ, ನಡೆ, ಆಚಾರ, ವಿಚಾರಗಳೊಂದಿಗೆ ನೈತಿಕ, ಧಾರ್ಮಿಕ, ಆಧ್ಯಾತ್ಮಿಕ ವಿಕಾಸವನ್ನು ವ್ಯಕ್ತಿಯಲ್ಲಿಉಂಟುಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುನೀತಾ, ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಕೆ.ಪರಮೇಶ್ವರ​‍್ಪ ನವರು, ಕೇವಲ ಜ್ಞಾನ, ಬುದ್ದಿವಂತಿಕೆಗಳು ವ್ಯಕ್ತಿಯಧ್ಯೇಯ ಸಾಧನೆಗೆ ನೆರವಾಗಲಾರವು, ವೈಚಾರಿಕತೆ ಮಾತ್ರ ಮುನ್ನಡೆಸಬಲ್ಲದೆಂದರು. ಕಾರ್ಯಕ್ರಮದಲ್ಲಿ ಸುನೀತಾ ಶಿಕ್ಷಣ ಸಂಸ್ಥೆಯ ಖಜಾಂಚಿಗಳಾದ ಕೆ.ಎಸ್‌.ನೀಲಗಂಗಮ್ಮ ಉಪಸ್ಥಿತರಿದ್ದರು. ಶಾಲೆಯ ಪ್ರಾಂಶುಪಾಲರಾದ ಟಿ. ನೇತ್ರ ಪ್ರಸನ್ನರವರುಅಧ್ಯಕ್ಷತೆ ವಹಿಸಿದ್ದರು.10ನೇ ತರಗತಿ ವಿದ್ಯಾರ್ಥಿನಿಯರಾದಗೌರಿತ್ರಿವೇಣಿ ವಚನ ಪ್ರಾರ್ಥನೆ ಮಾಡಿದರು.ಸುಕನ್ಯ .ಕೆ ಸ್ವಾಗತಕೋರಿದರು.ದತ್ತಿ ದಾಸೋಹಿಗಳಾದ ಎಸ್‌. ಚನ್ನನಗೌಡ, ಮಹಾದೇವಿ ದಂಪತಿಗಳು ವೇದಿಕೆಯಗಣ್ಯರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು, ಪರಿಷತ್ತಿನಅಧ್ಯಕ್ಷರಾದ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ದತ್ತಿಧಾತೃ, ದಾಸೋಹಿಗಳನ್ನು ಪರಿಚಯಿಸಿದರು. ಬಿ.ಎಂ.ಅಮೃತಕಾರ್ಯಕ್ರಮನಿರೂಪಿಸಿದರು.ಶಾಲಾ ಶಿಕ್ಷಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮ ಮಂಗಲವಾಯಿತು.