ವೀರಭದ್ರ ದೇವಸ್ಥಾನ, ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ
ಮಾಂಜರಿ 10: ಕಾತರ್ಿಕ ದೀಪೋತ್ಸವ ನಮ್ಮ ಮನಸ್ಸಿನ ಅಂತರಂಗದ ಹಾಗೂ ಬಹಿರಂಗದ ಮನಸ್ಸನ್ನು ಸದೃಢಗೊಳಿಸುತ್ತದೆ. ಅಂತರಂಗದ ಆಚಾರವೆಂಬ ಎಣ್ಣೆ, ಜ್ಞಾನವೆಂಬ ಭಕ್ತಿ ಅರಿವು ಎಂಬ ಜ್ಯೋತಿಯ ಹಣತೆ ಉರಿಯುತ್ತಿರಲು, ಒಳಗೂ ಬೆಳಕು ಹೊರಗು ಬೆಳಕು. ಇದು ಕಾತರ್ಿಕ ಮಾಸದ ಹೊನಲು ಎಂದು ಶ್ರೀಶೈಲ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಮತ್ತು ವೀರಭದ್ರ ಸಂಸ್ಥಾನ ಮಠದ ಧಮರ್ಾಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕತ್ತಲು ನಮ್ಮೊಳಗಿದೆ, ದೀಪವು ನಮ್ಮೊಳಗಿದೆ. ದೀಪವನ್ನು ಕತ್ತಲು ಆವರಿಸಿದೆ. ದೀಪವು ಕತ್ತಲನ್ನು ತೊಲಗಿಸಿ ನಮ್ಮೊಳಗಿರುವ ಜ್ಞಾನದ ಜ್ಯೋತಿ ಬೆಳಗೋಣ ಹಣತೆ ಹೆಚ್ಚಿದರೆ ಹೊರಗಿನ ಕತ್ತಲು ದೂರವಾಗುತ್ತದೆ. ಒಳಗಿನ ಹಣತೆ ಹಚ್ಚಿದರೆ ಮಾಯೆ ಎಂಬ ಕತ್ತಲು ದೂರವಾಗುತ್ತದೆ. ಮನೆಗಳಲ್ಲಿರುವ ದೀಪವನ್ನು ಬೆಳಗುವುದರ ಜೊತೆಗೆ ಮನದಲ್ಲಿರುವ ದೀಪಗಳನ್ನು ಬೆಳಗಬೇಕು ಎಂದರು.
ರಾಜಶೇಖರ ಹೆಬ್ಬಾರ, ಮಲ್ಲಯ್ಯಾ ಜಡೆ, ಅಡವಯ್ಯಾ ಅರಳಿಕಟ್ಟಮಠ, ಮಲ್ಲಪ್ಪಾ ಸಿಂದೂರ, ಮಂಜುನಾಥ ದೇವರು, ವಿಶ್ವನಾಥ ದೇವರು, ಮತ್ತಯ್ಯಾ ಮಠದ, ಬಾಳಗೌಡಾ ಪಾಟೀಲ, ಪಾಠಶಾಲೆಯ ಗುರುಗಳು, ವಿದ್ಯಾಥರ್ಿಗಳು ಹಾಗೂ ಭಕ್ತರು ಹಾಜರಿದ್ದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 