ಕನ್ನಡಿಗರ ಹೃದಯದಲ್ಲಿ ನೆಲೆ ಮಾಡಿಕೊಂಡಿರುವ ವೀರ ಸಂಗೊಳ್ಳಿ ರಾಯಣ್ಣ
Veera Sangolli Rayanna, who has settled in the hearts of Kannadigas
ತಾಂಬಾ 24: ಹುಲಿ ಬೇಟೆ ಆಡಿ ಜಗತ್ ಪ್ರಸಿದ್ದನಾದ ಭರಮಣ್ಣ ರೋಗಣ್ಣವರ ಮತ್ತು ಕೆಂಚೆಮ್ಮ ದಂಪತಿಗಳ ಮಗನಾಗಿ ಆಗಷ್ಟ 15-1796 ರಂದು ಜನಿಸಿದವನು ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ. ಕಿತ್ತೂರು ಚನ್ನಮ್ಮನವರ ಬಲಗೈ ಭಂಟನಾಗಿ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿ ಕಾಡಿ ಆಂಗ್ಲ ಸಿಂಹಾಸನವನ್ನೇ ನಡುಗಿಸಿ, ಬರಗಾಗಲದಲ್ಲಿ ತೆರಿಗೆ ಹೇರಿ ಕಿತ್ತೂರಿನ ಬಡ ರೈತರ ದವಸ ಧಾನ್ಯಗಳನ್ನು ಕಸಿದುಕೊಂಡು ಹೋಗುತ್ತಿದ್ದ ಧಾರವಾಡದ ಕಲೆಕ್ಟರ್ ಥ್ಯಾಕರೆಯನ್ನು ಚಂಡಾಡಿ ಇಂದಿಗೂ ಭಾರತೀಯರ ಅದರಲ್ಲೂ ಕನ್ನಡಿಗರ ಹೃದಯದಲ್ಲಿ ನೇಲೆ ಮಾಡಿಕೊಂಡಿರುವ ವೀರ ಸಂಗೊಳ್ಳಿ ರಾಯಣ್ಣ.
ಕಿತ್ತೂರು ರಾಣಿ ಚನ್ನಮ್ಮನವರನ್ನು ಬ್ರಿಟೀಷರು ಸೆರೆ ಹಿಡಿದು ಬಂಧನದಲ್ಲಿಟ್ಟಾಗ ತಾಯಿಯಿಂದ ಬೇರ್ಪಟಟ ಹುಲಿಮರಿಯಂತಾಗಿದ್ದ. ತನ್ನ ತಾಯಿಯನ್ನು ಜೈಲಿಗಟ್ಟಿದ ಬ್ರಿಟೀಷರಿಂದ ಕಿತ್ತೂರನ್ನು ಮುಕ್ತಗೊಳಿಸುವ ಸಲುವಾಗಿ ಸೈನ್ಯವನ್ನು ಸಂಘಟಿಸಿದ ಮಹಾನ್ ಸಾಹಸಿ. ಇಂತಹ ರಾಯಣ್ಣನು ತನ್ನ ಸ್ವಂತ ಮಾವನಿಂದಲೇ ಸೆರೆ ಹಿಡಿಯಲ್ಪಟ್ಟನು. ರಾಯಣ್ಣನ ಜತೆಗೆ ಇನ್ನೂ ಅನೇಕರನ್ನು ಬಂಧಿಸಿದ ಬ್ರಿಟೀಷರು ವಿಚಾರಣೆಯ ನಾಟಕ ಮಾಡಿ ರಾಯಣ್ಣನೂ ಸೇರಿದಂತೆ ಏಳು ಜನರಿಗೆ ಮರಣದಂಡನೆಯನ್ನು ಮತ್ತು 6 ಜನರಿಗೆ ಗಡಿಪಾರು ಶಿಕ್ಷೆಯನ್ನು ವಿಧಿಸಿದರು. ರಾಯಣ್ಣನಿಗೆ ನಂದಗಡದಲ್ಲಿ ಸಾರ್ವಜನಿಕರ ಮದ್ಯದಲ್ಲಿಯೇ 1831 ಜ. 26 ರಂದು ಗಲ್ಲಿಗೇರಿಸಲಾಯಿತು.
ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನಡೆದ ಅಂತ್ಯಕ್ರಿಯೆಲ್ಲಿ ಆತನ ಜೀವದ ಗೆಳೆಯ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಶದಲ್ಲಿ ಬಂದು ಭಾಗವಹಿಸಿದ್ದ. ನಂತರ ಅದೇ ಸ್ಥಳದಲ್ಲಿ ಒಂದು ಆಲದ ಮರವನ್ನು ನೆಟ್ಟಿದ್ದನು. ಅದು ಬೆಳೆದು ನಿಂತಾಗ ಜನರು ತಂಡೋಪ ತಂಡವಾಗಿ ಅಲ್ಲಿಗೆ ಹೋಗ ತೊಡಗಿದರು. ಹೀಗೆ ಅದೊಂದು ಪ್ರೇರಣಾ ಸ್ಥಳವಾಯಿತು. ಇದರಿಂದ ಗಾಬರಿಯಾದ ಬ್ರಿಟೀಷರು ಅಲ್ಲಿಗೆ ಯಾರೂ ಬರದಂತೆ ಕಾನೂನು ಮಾಡಿದರು, ಕಾವಲಿಟ್ರು, ಆದರೂ ಜನ ಬಿಡಲಿಲ್ಲ ಬ್ರಿಟೀಷರ ವಿರುದ್ಧ ಅಸಮಾಧಾನ ಹೊರಗೆ ಹಾಕತೊಡಗಿದರು. ಇದರಿಂದ ಹೆದರಿದ ಬ್ರಿಟೀಷರು ಒಂದು ಬಾರಿ ಆ ಮರವನ್ನೇ ಕಡಿದು ಹಾಕಿದರು.
ಅದು ವೀರ ಪುರುಷನ ಸ್ಮರಣಾರ್ಥವಾಗಿದ್ದರಿಂದ ಅದು ಪುನಃ ಚಿಗುರೊಡೆದು ಸಂಗೊಳ್ಳಿ ರಾಯಣ್ಣನ ಕಥೆ ಹೇಳುತ್ತಿದೆ. ಇಂದಿಗೂ ಆ ಮರ ನಂದಗಡದಲ್ಲಿ ಪ್ರೇರಣೆಯ ಸಂಕೇತವಾಗಿದೆ. ಈ ಪ್ರೇರಣೆ ಇಂದು ರಾಜ್ಯಾದ್ಯಂತ ಮನೆ ಮನೆಗಳಿಗೆ ಪ್ರವೇಶ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಇದೇ 2026ರ ಜ. 26 ರಂದು ನಾಡಿನ ಪ್ರತಿ ಮನೆಗಳಲ್ಲಿ ಮನೆಯ ಮಕ್ಕಳಿಗೆ ರಾಯಣ್ಣನ ಜೀವನ ಚರಿತ್ರೆಯನ್ನು ಹೇಳಿ ಆತನ ಹೆಸರಿನಲ್ಲಿ ಅಂದು ಇಡೀ ದಿನ ದೇವರ ಜಗುಲಿಯ ಮೇಲೆ ಪ್ರತ್ಯೇಕವಾಗಿ ಒಂದು ದೀಪವನ್ನು ಹಚ್ಚಿ ವಿಶೇಷವಾಗಿ ಆಚರಿಸಬೇಕು. ಹೀಗೆ ಮಾಡುವುದರಿಂದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣನಿಗೆ ಗೌರವ ನೀಡಿದಂತಾಗುತ್ತದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 