ಮಾಕನೂರು ಮಠದಲ್ಲಿ ನ. 10ರಂದು ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ

ಮಾಕನೂರು ಮಠದಲ್ಲಿ ನ. 10ರಂದು ವೇದಾಂತ ಪರಿಷತ್ ಹಾಗೂ ಸಾಮೂಹಿಕ ವಿವಾಹ   Vedanta Parishad and mass marriage on Nov. 10 at Makanur Math

 

ರಾಣಿಬೆನ್ನೂರು 06: ತಾಲೂಕಿನ ಸುಕ್ಷೇತ್ರ ಮಾಕನೂರು  ಸಿದ್ಧಾರೂಢ ಮಠದಲ್ಲಿ ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಡಾಽ ಶಿವಾನಂದ ಭಾರತಿ ಸ್ವಾಮೀಜಿಗಳ ಜಯಂತಿ ಅಂಗವಾಗಿ 7ನೇಯ ವೇದಾಂತ ಪರಿಷತ್ತು, ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮವು ನ.9 ಮತ್ತು 10 ರಂದು ಎರಡು ದಿನಗಳ ಕಾಲ ಶ್ರೀ ಮಠದ ಪೀಠಾಧಿಪತಿ ಗುರು ನಾಗರಾಜಾನಂದ ಮಹಾಸ್ವಾಮೀಜಿಗಳವರ ಸದಿಚ್ಚೆಯ ಮೇರೆಗೆ ನಡೆಯಲಿವೆ.  ನ.9 ರಂದು ರವಿವಾರ ಸಂಜೆ 6.30 ರಿಂದ ನ. 10 ಸೋಮವಾರ ಬೆಳಗ್ಗೆ 6.30 ವರೆಗೆ ಚಿಕ್ಕಕಬ್ಬಾರ ಶ್ರೀ ಮಾರುತಿ ಭಜನಾ ಮಂಡಳಿ ಮತ್ತು ಮಾಕನೂರ ಸರ್ವ ಭಜನಾ ಮಂಡಳಿಯವರಿಂದ ಸವಾಲ್ ಜವಾಬ್ ಭಜನಾ ಕಾರ್ಯಕ್ರಮ ನಡೆಯಲಿದೆ.   ನ. 10 ರಂದು ಸೋಮವಾರ ಬ್ರಾಹ್ಮಿಮಹೂರ್ತದಲ್ಲಿ ಶಿವ ಮಹಿಮ್ನ ಪಾರಾಯಣದೊಂದಿಗೆ ಪ್ರಾರಂಭಗೊಂಡು ಬೆಳಗ್ಗೆ 4 ಗಂಟೆಯಿಂದ 7 ಗಂಟೆಯವರೆಗೆ ಶ್ರೀ ಸಿದ್ಧಾರೂಢರ ಅಮೃತ ಶಿಲಾ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜಾ ಕಾರ್ಯಕ್ರಮಗಳು ಜರುಗುವವು.

ಅಂದು ಬೆಳಗ್ಗೆ 8 ಗಂಟೆಗೆ ಪ್ರಣವ ಧ್ವಜಾರೋಹಣ. ನಂತರ ಸ್ಥಳೀಯ ಮೂರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿ ಗೀತೆ ಹಾಗು ಸಂಗೀತ ಕಾರ್ಯಕ್ರಮ ನಡೆಯಲಿದೆ.   ನಂತರ ಬೆಳಗ್ಗೆ 9.30 ಗಂಟೆಯಿಂದ ನರಜನ್ಮದಿಂದ ಇಹದೊಳು ಮಿಗಿಲುಂಟೆ ಕುರಿತು ವೇದಾಂತ ಪರಿಷತ್ ಪ್ರವಚನ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವವು ಚಳಗೇರಿಯ ವೇ. ಚನ್ನಯ್ಯ ಶಾಸ್ತ್ರಿಗಳು ನಡೆಸಿಕೊಡಲಿದ್ದಾರೆ.  ವೇದಾಂತ ಪರಿಷತ್ ಧರ್ಮಸಭೆಯ ದಿವ್ಯಸಾನಿಧ್ಯವನ್ನು ಇಂಚಲದ ಶಿವಯೋಗಿಶ್ವರ ಸಾಧು ಸಂಸ್ಥಾನ ಮಠದ ಡಾಽ ಶಿವಾನಂದ ಭಾರತಿ ಸ್ವಾಮೀಜಿಗಳು ವಹಿಸುವರು. ನೇತೃತ್ವವನ್ನು ಶ್ರೀ ಮಠದ ಪೀಠಾಧಿಪತಿ ಗುರು ನಾಗರಾಜಾನಂದ ಮಹಾಸ್ವಾಮೀಜಿ ವಹಿಸುವರು. ಸಾನಿಧ್ಯವನ್ನು ದಾವಣಗೇರಿಯ ಜಡಿಸಿದ್ಧೇಶ್ವರ ಮಠದ ಶಿವಾನಂದ ಶ್ರೀಗಳು, ದಾವಣಗೇರಿ ತಾಲೂಕ ಹದಡಿಯ ಚಂದ್ರಗಿರಿ ಮಠದ ಮುರಳಿಧರ ಶ್ರೀಗಳು ಮತ್ತು ವೀರಭದ್ರ ಶ್ರೀಗಳು ವಹಿಸುವರು. ವಿಶೇಷ ಅಹ್ವಾನಿತರಾಗಿ ವಿಧಾನಸಭಾ ಉಪಾಧ್ಯಕ್ಷ ರುದ್ರ​‍್ಪ ಲಮಾಣಿ, ಶಾಸಕ ಪ್ರಕಾಶ ಕೋಳಿವಾಡ, ಮಾಜಿ ಶಾಸಕ ಅರೂಣಕುಮಾರ ಪೂಜಾರ, ದಾನಿ ಡಾಽ ಮಹಾಂತೇಶ ಉಚ್ಚಣ್ಣನವರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಬಿಜೆಪಿ ನಾಯಕ ಜೆಟ್ಟೆಪ್ಪ ಕರೆಗೌಡ್ರ, ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ, ಸಮಾಜ ಸೇವಕ ಪರಶುರಾಮ ಕಲಿವಾಳ, ಗ್ರಾಪಂ ಅಧ್ಯಕ್ಷ ದೇವೇಂದ್ರ​‍್ಪ ಯಲಜಿ, ಉಪಾಧ್ಯಕ್ಷೆ ದುರುಗವ್ವ ಬಡಣ್ಣನವರ, ರೈತ ಮುಖಂಡ ಈರಣ್ಣ ಹಲಗೇರಿ, ಸಿಪಿಐ ಸಿದ್ದೇಶ ಎಂ.ಡಿ, ಪಿಎಸ್‌ಐ ಪ್ರವೀಣ ವಾಲಿಕಾರ ಮತ್ತು ಗ್ರಾಪಂ ಸದಸ್ಯರು ಆಗಮಿಸುವರು ಎಂದು ಶ್ರೀಮಠದ ಕಾರ್ಯದರ್ಶಿ ಮಂಜುನಾಥ ಕುಂಬಳೂರ ತಿಳಿಸಿದ್ದಾರೆ.