ಜೆ.ಸಿ.ಐ ಮಹಿಳಾ ಘಟಕದ ಅಧ್ಯಕ್ಷರಾಗಿ ವೈಶಾಲಿ ಮುರುಳಿ ಅವಿರೋಧವಾಗಿ ಅಯ್ಕೆ
Vaishali Muruli was elected unopposed as the President of JCI Women's Unit
ಜೆ.ಸಿ.ಐ ಮಹಿಳಾ ಘಟಕದ ಅಧ್ಯಕ್ಷರಾಗಿ ವೈಶಾಲಿ ಮುರುಳಿ ಅವಿರೋಧವಾಗಿ ಅಯ್ಕೆ
ಕೊಟ್ಟೂರು 30: ಕೊಟ್ಟೂರು ತಾಲ್ಲೂಕು ಘಟಕ ಜೆಸಿಐ ಕೊಟ್ಟೂರು ಕಾಟನ್ ನ ನೂತನ ಅಧ್ಯಕ್ಷರಾಗಿ ಡಾ: ಬಸವಾನಂದ ಎಂ.ಬಿ. ಹಾಗೂ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ವೈಶಾಲಿ ಮುರುಳಿ ಮನಸಾಲಿ ಅವಿರೋಧವಾಗಿ ಅಯ್ಕೆಯಾಗಿದ್ದು ಪಧಾಧಿಕಾರಿಗಳ ಪಟ್ಟಿಯನ್ನು ಪತ್ರಿಕೆಗೆ ಒದಗಿಸಿ ಮಾತನಾಡಿದ ವೈಶಾಲಿ ಮುರುಳಿ ನಮ್ಮ ಅವಧಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಯೋಜನೆ ರೂಪಿಸಿದ್ದು, ನಮ್ಮ ಈಗಿನ ಅಧ್ಯಕ್ಷರು , ಸೇರಿದಂತೆ ನಿಕಟಪೂರ್ವ ಅಧ್ಯಕ್ಷರಾದ ನಂದೀಶ್ ಯುವ ಉತ್ಸಾಹಿ ತರುಣರಿದ್ದು ಅವರ ಅವಧಿಯಲ್ಲಿನ ಕಾರ್ಯಕ್ರಮಗಳ ಅನುಭವ ತೆಗೆದುಕೊಂಡು ಮುನ್ನೆಡೆಯುವುದಾಗಿ ತಿಳಿಸುತ್ತಾ, ನೂತನ ಪಧಾಧಿಕಾರಿಗಳ ಪಟ್ಟಿ ಈ ರೀತಿ ಇದ್ದು, ಅಧ್ಯಕ್ಷರಾಗಿ ಬಸವಾನಂದ ಎಂ.ಬಿ. , ಪ್ರವೀಣ್ ಕಾರ್ಯದರ್ಶಿ, ಮೂರು ಉಪಾಧ್ಯಕ್ಷ ಸ್ಥಾನಗಳು ಇದ್ದು, ಶಿಕ್ಷಕರಾದ ರೇಣುಕಾಚಾರಿ , ಸಂದೀಪ್ ಬಣಕಾರ್, ಡಾಕ್ಟರ್ ಮುರುಳಿ ಮನಸಾಲಿ ಹಾಗೂ ಪಿ.ಆರ್. ಮಾರ್ಕೆಂಟಿಂಗ್ ವಿಭಾಗಕ್ಕೆ ಸಂತೋಷ ಅಟವಾಳ್ಗಿ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಸುರೇಶ್ ಅಯ್ಕೆಯಾಗಿದ್ದಾರೆ.
ಇದೇ ಸಂಧರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಮುಖಂಡರು ಹಾಗೂ ಭರಣಿ ಹೋಟಲ್ ಮಾಲೀಕರಾದ ಸಿ.ಎ. ಮೋಹನ್, ತುರುಕಾಣಿ, ಪ್ರಕಾಶ್ ಮಾರ್ಬಲ್ ಮಾಲೀಕರಾದ ಚೋಪ್ರ, ರಾಜೇಶ್ ಕರ್ವಾ, ಪಾಟೀಲ್ ಡ್ರೆಸ್ಸಸ್ ಮಾಲೀಕರಾದ ಲಾಲಿಯಾ, ವಕೀಲರು ಹಾಗೂ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಪಿ.ಪ್ರಭುದೇವ,ಭಾವಸಾರ ಕ್ಷತ್ರೀಯಾ ಸಮಾಜದ ಅಧ್ಯಕ್ಷರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಅನೇಕ ಮುಖಂಡರು ಅಭಿನಂದನೆ ಸಲ್ಲಿಸಿದ್ದು, ನೂತನ ಪಧಾಧಿಕಾರಿಗಳ ಅವಧಿಯಲ್ಲಿ ಕೊಟ್ಟೂರಿನಲ್ಲಿ ಅನೇಕ ಸಮಾಜಮುಖಿ ಕೆಲಸಗಳು ನೆಡೆಯಲಿಯೆಂದು ಶುಭ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 