ಕನ್ನಡ ಸಾಹಿತ್ಯಕ್ಕೆ ವಚನಕಾರರ ಕೊಡುಗೆ ಅನನ್ಯ: ಪ್ರೊ. ರೆಬಿನಾಳ

ಲೋಕದರ್ಶನ ವರದಿ

ವಿಜಯಪುರ: ಗುಡಿಯೊಳಗೆ ಬಂಧಿಯಾದ ದೇವರನ್ನು ಜನರ ಮಧ್ಯ ತಂದವರು ಶರಣರು. ಸಮಾಜೊ-ಧಾಮರ್ಿಕ ಆಂದೋಲನ ಮಾಡಿದ ಶರಣರು ಹೊಸ ಸಾಹಿತ್ಯಕ್ಕೆ ನಾಂದಿ ಹಾಡಿದರು. ಅನುಭಾವದ ಸಾಹಿತ್ಯ ನೀಡಿದರು. ದೇವರು-ಧರ್ಮಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದರು. ಕಾಯಕದಲ್ಲಿ ಕೈಲಾಸವನ್ನು ಕಾಣುತ್ತ ಹೆಣ್ಣು-ಗಂಡು ಎಂಬ ಭೇದವನ್ನು ಹೊರಹಾಕಿದರು. ಏಕದೇವೋ ಉಪಾಸನೆಗೆ ಕರೆ ನೀಡಿದ ವಚನಕಾರರು ಕನ್ನಡ ಸಾಹಿತ್ಯಷ್ಟಕ್ಕೆ ಅಲ್ಲ. ವಿಶ್ವ ಸಾಹಿತ್ಯಕ್ಕೆ ಮಹೋನ್ನತ ಕೊಡುಗೆಯನ್ನು ನೀಡಿದರು ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರೊ. ಮಹಾದೇವ ರೆಬಿನಾಳ ಹೇಳಿದರು.

                ಅವರು ಇಲ್ಲಿನ ಮಲ್ಲಿಕಾಜರ್ುನ ನಗರದ ಶಿವಾಲಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಯುವ ಘಟಕದ ಆಶ್ರಯದಲ್ಲಿ ಲಿಂ. ಶಿವಯೋಗೆಪ್ಪ ತೇಲಿ, ಲಿಂ. ಕಲ್ಲವ್ವ ಶಿ. ತೇಲಿ, ಲಿಂ. ಬಸವರಾಜ ಅನಂತಪೂರ ಹಾಗೂ ಲಿಂ. ಸಿದ್ರಾಮಪ್ಪ ಹೊಟಗಿ ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾದ ದತ್ತಿ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯಕ್ಕೆ ವಚನಕಾರರು ಕೊಡುಗೆ ಎಂಬ ವಿಷಯ ಕುರಿತು ಸುದೀರ್ಘ ಉಪನ್ಯಾಸ ನೀಡಿದ ಅವರುದಾಸೋಹ, ಸಹಕಾರ, ಕಾಯಕ ಇವು ಪ್ರಮುಖ ವಿಷಯಗಳಿಗೆ  ಒತ್ತು ನೀಡಿದ ವಚನಕಾರರು. ಆಡು ಭಾಷೆಯಲ್ಲಿಯೇ ವಚನಗಳನ್ನು ರಚಿಸಿದರು. ಅನುಭಾವ ಮಂಟಪದ ಪರಿಕಲ್ಪನೆಯನ್ನು ತಂದರು. ಅದನ್ನು ವಿಶ್ವದ ಮೊದಲ ಪಾಲರ್ಿಮೆಂಟ್ ಎನ್ನಬಹುದು. ನಡೆ-ನುಡಿ ಒಂದಾಗಿದೆ. ಆದರ್ಶಪ್ರಾಯವಾಗಿರುವ ಕಲ್ಯಾಣ ರಾಷ್ಟ್ರದ ನಿಮರ್ಾಣವೇ ಅವರ ಕನಸಾಗಿತ್ತು. ನಾವೆಲ್ಲರೂ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬೇಕಾಗಿದೆ ಎಂದು ಹೇಳಿದರು.

                ಶರಣಗೌಡ ಪಾಟೀಲ ಅವರು ಬಸವಣ್ಣ - ಸಮಾನತೆ ಎಂಬ ವಿಷಯ ಕುರಿತು  ಮಾತನಾಡಿ, ಅಕ್ಕ ನಾಗಮ್ಮನಿಂದ ಸಂಸ್ಕಾರ ಪಡೆದವರು ವಚನ ಸಾಹಿತ್ಯವನ್ನು ಪಸರಿಸಿದವರು. ಲಿಂಗ ತಾರತಮ್ಯವನ್ನು ತೊಡೆದುಹಾಕಿದವರು ಶರಣರು. ಬಡವ ಬಲ್ಲಿದರೆಲ್ಲರು ಸಮಾನರೆಂದು ಹೇಳಿದರು. ಸಮಾಜದ ಕೆಳವರ್ಗದವರಿಗೆ ಧ್ವನಿಯಾಗಿ ಅವರು ಕಣ್ಣೀರು ಒರೆಸಿದರು. ಮೇಲು-ಕೀಳು ಉಚ್ಚ ನೀಚ ಭೇದವನ್ನು ಅಳಿಸಿ ಸರ್ವರನ್ನು ಸಮಾನಗೊಳಿಸಿದರು. ಹೆಣ್ಣು ಗಂಡು ಒಂದೇ ಭಾವ ಬಿತ್ತಿದರು. ಬಸವಾದಿ ಶರಣರು ಕಾಯಕದ ಭೇದವನ್ನು ಹೊಡೆದು ಹಾಕಿದರು ಎಂದು ಹೇಳಿದರು.

                ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರೊ. ಎಸ್.ಎಸ್. ಬಸರಕೋಡ ಪ್ರಾಸ್ತಾವಿಕವಾಗಿ ಮಾತನಾಡಿ, ಸುತ್ತೂರು ಶ್ರೀಗಳಿಂದ ಸ್ಥಾಪಿತಗೊಂಡ ಶರಣ ಸಾಹಿತ್ಯ ಪರಿಷತ್ತು ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಅಂದಿನ ಶರಣ ಚಿಂತನೆಗಳನ್ನು ಮನ ಮನೆಗಳಿಗೆ ಮುಟ್ಟಿಸುವುದೇ ಪರಿಷತ್ತಿನ ಧ್ಯೇಯವಾಗಿದೆ. ಶಾಲಾ ಕಾಲೇಜುಗಳು ಮಠ, ಮಂದಿರ, ಹಳ್ಳಿ ಗ್ರಾಮಗಳಲ್ಲಿ ದತ್ತಿ ಉಪನ್ಯಾಸ ಹಮ್ಮಿಕೊಂಡು ವೈಚಾರಿಕ ಚಿಂತನಾ ಬಿತ್ತುತ್ತ ವ್ಯಸನಮುಕ್ತ ಸಾಮಾನತೆಯ ಸಮಾಜ ಕಟ್ಟುವ ಉದ್ದೇಶದಿಂದ ಪರಿಷತ್ತು ಕಾರ್ಯ ಮಾಡುತ್ತಿದೆ ಎಂದರು.

                ಎಚ್.ಎಸ್. ಜಂಗಮಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ವಿಠ್ಠಲ ತೇಲಿ, ಮಹೇಶ ಅನಂತಪೂರ, ಹೊನ್ನಪ್ಪ ಹೊಟಗಿ, .ಗು. ಯಾದವಾಡ, ಬಿ.ಎಸ್. ಸಜ್ಜನ, ರಾಜೇಂದ್ರಕುಮಾರ ಬಿರಾದಾರ, ಡಿ.ಎಸ್. ಪಾಟೀಲ. ಬಿ.ಎಂ. ಪಾಟೀಲ, ಸಿದ್ದಲಿಂಗ ಹದಿಮೂರ ಮುಂತಾದವರು ಉಪಸ್ಥಿತರಿದ್ದರು.

   ಡಾ. ವಿ.ಡಿ. ಐಹೊಳ್ಳಿ ಸ್ವಾಗತಿಸಿದರು. ಅಮರೇಶ ಸಾಲಕ್ಕಿ ನಿರೂಪಿಸಿದರು. ಆರ್.ಜಿ. ಮೇಡೆಗಾರ ವಂದಿಸಿದರು.