ವಿಬಿ -ಜಿ ರಾಮ ಜೀ ಕಾಮಗಾರಿ ಪರೀಶೀಲಿಸಿದ :ಮಾದೇವಪ್ಪ ಏವೂರ
VB-G Ram Ji inspected the work: Madevappa Aevura
ಲೋಕದರ್ಶನ ವರದಿ
ಇಂಡಿ 29: ತಾಲ್ಲೂಕಿನ ಹಿರೇಬೆವನೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜು ಶಂಕರ ಜಾಧವ ಇವರ ಹೊಲದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ ಭೇಟಿ ನೀಡಿ ಕಾಮಗಾರಿ ಪರೀಶೀಲನೆ ಮಾಡಿದರು.ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಅಜೀವಿಕ ಮಿಷನ್ ಯೋಜನೆಯಡಿ ಹಿರೇಬೆವನೂರ ಗ್ರಾಮ ಪಂಚಾಯತಿಯ ವಿಬಿ ಜಿ ರಾಮ್ ಜಿ ಯೋಜನೆಯ ಕೂಲಿಕಾರರು ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದ್ದರು. ಹಿರೇಬೆವನೂರ ಗ್ರಾಮದ ರಾಜು ಶಂಕರ ಜಾಧವ ಇವರ ಹೊಲದ ಹತ್ತಿರ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯಲ್ಲಿ ಓಒಖ ತೆಗೆದು ಕೆಲಸ ಹಂಚಿಕೆ ಮಾಡಲಾಗಿದೆ. ಸದರಿ ಕಾಮಗಾರಿಯಲ್ಲಿ ಮಹಿಳೆಯರ 17 ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ. ಜುಲೈ-1 ರಿಂದ ನರೇಗಾ ಯೋಜನೆ ಬದಲಾಗಿ ವಿಕಸಿತ ಭಾರತ ವಿಬಿಜಿ ರಾಮ್ ಜಿ ಯೋಜನೆ ಜಾರಿಗೆ ಬಂದಿದ್ದು,
100 ದಿನಗಳ ಬದಲಾಗಿ 125 ಮಾನವ ದಿನಗಳನ್ನು ನೀಡಲಾಗಿದೆ. ಅಲ್ಲದೆ ಒಂದು ದಿನದ ಕೂಲಿ ದರ ರೂ. 382 ಹೆಚ್ಚಾಗಿದ್ದು ಕೂಲಿಕಾರರ ಜೀವನ ನಿರ್ವಹಣೆಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಪ್ರಸ್ತುತ ಮಳೆ ಕೊರತೆಯಿಂದ ಕೃಷಿ ಕೂಲಿ ಕೆಲಸಗಳು ಕಡಿಮೆಯಾಗಿವೆ. ರೈತರು, ಕೃಷಿ ಕೂಲಿ ಕಾರ್ಮಿಕರು ಗ್ರಾಮ ಪಂಚಾಯತಿಗೆ ಕೆಲಸದ ಬೇಡಿಕೆ ಅರ್ಜಿ ಸಲ್ಲಿಸಿದರೆ ತ್ವರಿತವಾಗಿ ಕೆಲಸ ನೀಡಲಾಗುವುದು.ಉದ್ಯೋಗ ಹರಸಿ ಗುಳೆ ಹೋಗದೆ ನಿಮ್ಮೂರಲ್ಲೆ ದುಡಿದು ಆರ್ಥಿಕ ಸಾವಲಂಬಿಗಳಾಗಿ ಎಂದು ಕೂಲಿಕಾರರಿಗೆ ಮಾಹಿತಿ ನೀಡಿದರು.
ನಮಗೆ ಕೃಷಿ ಕೆಲಸ ಕಡಿಮೆಯಿದ್ದು, ಯೋಜನೆಯಡಿ ದುಡಿಯುತ್ತೇವೆ. ಸಮುದಾಯ ಆಧಾರಿತ ಕಾಮಗಾರಿಯಲ್ಲಿ ಕೆಲಸ ನೀಡಿದ್ದರಿಂದ ಕೂಲಿಕಾರರಿಗೆ ತುಂಬ ಅನುಕೂಲವಾಗಿದೆ ಕೂಲಿಕಾರರು ಹೇಳಿದರು. ಈ ಸಮಯದಲ್ಲಿ ತಾಲೂಕಿನ ತಾಂತ್ರಿಕ ಸಂಯೋಜಕರು ಸಾಹಿಲ್ ದನಶೆಟ್ಟಿ, ಐ ಇ ಸಿ ಸಂಯೋಜಕರು ರಾಮಗೌಡ ಸರಬಡಗಿ ರವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ರವಿ ಕರ್ಜಗಿ, ಡಿ ಇ ಒ ಸಂತೋಷ ಹಿರೇಮಠ, ಗ್ರಾಮ ಕಾಯಕ ಮಿತ್ರ ಶ್ರೀಮತಿ ಸುಪ್ರಿಯಾ ಪಾತಾಳಿ, ಬೇರ್ ಪೂಟ್ ಟೆಕ್ನಿಷನ್ ಮದರಸಾಬ ಚೌಧರಿ ,ಗ್ರಾಮ ಪಂಚಾಯಿತಿ ಸಿಬ್ಬಂದಿಗಳು, ಕಾಯಕ ಬಂಧುಗಳು ಮತ್ತು ಕೂಲಿಕಾರರು ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 