ಉತ್ತರ ಕರ್ನಾಟಕದ ಕವನಕ್ಕೆ ಉತ್ತರ ಕನ್ನಡದ ಗಾಯನ
Uttara Kannada vocals for North Karnataka poetry
ಉತ್ತರ ಕರ್ನಾಟಕದ ಕವನಕ್ಕೆ ಉತ್ತರ ಕನ್ನಡದ ಗಾಯನ
ರನ್ನ ಬೆಳಗಲಿ 20: ಶಿಕ್ಷಕ ಸಾಹಿತಿಗಳು,ಎಮ್ಮಾರ್ಕೆ ಕಾವ್ಯನಾಮಾಂಕಿತರಾದ ಮಹಾಂತೇಶ ಆರ್.ಕುಂಬಾರ ಅವರು ರನ್ನನ ಸಾಹಿತ್ಯಾರಾಧಕರೂ, ರನ್ನ ಜನಿಸಿದ ಮಣ್ಣಿನ ಘಮಲು ಘ್ರಾಣಿಸಿದವರಾಗಿ ತಮ್ಮನ್ನು ತಾವು ರನ್ನನ ಸಾಹಿತ್ಯೋಪಾಸನೆಗೆ ತೊಡಗಿಸಿಕೊಂಡಿದ್ದು, ಪ್ರಸ್ತುತ 22,23 ಮತ್ತು 24ರ ಫೆಬ್ರುವರಿ 2025ರಂದು ರನ್ನ ಬೆಳಗಲಿ-ಮುಧೋಳದಲ್ಲಿ ನಡೆಯಲಿರುವ *ರನ್ನ ವೈಭವ* ದ ನಿಮಿತ್ತ ಅದೇ *ರನ್ನ ವೈಭವ* ಶೀರ್ಷಿಕೆಯಡಿ ಕವನವನ್ನು ಬರೆದಿದ್ದು,ಈ ಕವನವು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೂಜಳ್ಳಿಯ ಶಿಕ್ಷಕರಾದ ಅರುಣ ಭಟ್ ಅವರ ಗಾಯನದಲ್ಲಿ ಮೂಡಿ ಬಂದು ರನ್ನ ವೈಭವಕ್ಕೆ ಮೆರುಗನ್ನು ತಂದಿದೆ. ಉತ್ತರ ಕರ್ನಾಟಕದ ಕವನ ಮತ್ತು ಉತ್ತರ ಕನ್ನಡದ ಗಾಯನ ಇವೆರಡರ ಸಮ್ಮಿಲನವನ್ನು ಎಲ್ಲ ಕನ್ನಡ ಮನಸುಗಳು, ಸಾಹಿತ್ಯಾಸಕ್ತರು ಮೆಚ್ಚಿ ಒ(ಅ)ಪ್ಪಿಕೊಂಡಿರುತ್ತಾರೆ.ಇದಲ್ಲದೆ ಎಮ್ಮಾರ್ಕೆಯವರು ರನ್ನನ ಜೀವನ,ಸಾಹಿತ್ಯ ಮತ್ತು ಗದಾಯುದ್ಧದ ಗತವೈಭವ ಸಾರುವ ಹಲವು ಕವನಗಳು,*ರನ್ನನ್ ಪದ* ಎಂಬ ತಲೆಬರಹದಡಿ ಚೌಪದಿಗಳನ್ನು ಬರೆದಿರುತ್ತಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 