ನೀರನ್ನು ಅವಶ್ಯಕತೆ ಇದ್ದಷ್ಟು ಬಳಕೆ ಮಾಡಿ: ಹಂಜಿ

Use as much water as you need: Hanji

ನೀರನ್ನು ಅವಶ್ಯಕತೆ ಇದ್ದಷ್ಟು ಬಳಕೆ ಮಾಡಿ: ಹಂಜಿ  

ಯರಗಟ್ಟಿ 31: ನಮಗೆ ಪ್ರಕೃತಿ ನೀಡುವ ಗಾಳಿ, ಬೆಳಕು, ನೀರನ್ನು ನಾವು ಅವಶ್ಯಕತೆ ಇದ್ದಷ್ಟು ಬಳಕೆ ಮಾಡಿ, ಸುರಕ್ಷಿತವಾಗಿ ಮುಂದಿನ ಪೀಳಿಗೆಗೆ ನೀಡಬೇಕು ಎಂದು ದೈಹಿಕ ಶಿಕ್ಷಕ ಎಸ್‌.ಎಂ.ಹಂಜಿ ಹೇಳಿದರು. 

ಸಮೀಪದ ತಲ್ಲೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಬುದವಾರ ಇಕೋ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನೆಗೊಂದು ಗಿಡ, ಉರಿಗೊಂದು ವನ ನೆಡಬೇಕು ಎಂದು ಹೇಳಿದರು. 

ವಿದ್ಯಾರ್ಥಿಗಳ ಪರಿಸರದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಅಶ್ವಿನಿ ನಾಯ್ಕರ, ದ್ವಿತೀಯ ತನುಶ್ರೀ ಮರಿಗೌಡರ, ತೃತೀಯ ಅನುಷ್ಕಾ ಕಾಜಗಾರ ಪಡೆದು ಕೊಂಡರು. ಅವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದಕ್ಕೂ ಮುಂಚೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪರಿಸರ ಜಾಗೃತಿ ಜಾಥಾ ಜರುಗಿತು. 

ಮುಖ್ಯ ಶಿಕ್ಷಕ ಡಿ.ಡಿ.ಭೋವಿ, ಎಸ್‌.ಎಂ.ಮಾಳೈನವರ, ಎಸ್‌.ಎಫ್‌.ಮುರಗನ್ನವರ, ಎಂ.ಎ.ಬಸರಿಮರದ, ವಿಜಯಲಕ್ಷ್ಮೀ ಕಳಸನ್ನವರ, ಆರ್‌.ಎಚ್‌.ಅತ್ತಾರ, ಅಶ್ವಿನಿ ಹಿರೇಮಠ, ಪ್ರೀತಿ ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.