ಉರ್ದು ಸಹಪಾಠಿಗಳ ಸ್ನೇಹ ಮಿಲನ ಹಾಗೂ ಗುರು ವಂದನ ಕಾರ್ಯಕ್ರಮ ಯಶಸ್ವಿ
Urdu Classmates' Friendship Meet and Guru Vandana Program a Success
ಉರ್ದು ಸಹಪಾಠಿಗಳ ಸ್ನೇಹ ಮಿಲನ ಹಾಗೂ ಗುರು ವಂದನ ಕಾರ್ಯಕ್ರಮ ಯಶಸ್ವಿ
ಕೊಪ್ಪಳ 15: ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಉರ್ದು ಪ್ರೌಢ ಶಾಲಾ ವಿಭಾಗದ 1980 81ರ ಸಾಲಿನ ಉರ್ದು ಎಸ್ ಎಸ್ ಎಲ್ ಸಿ ಬ್ಯಾಚ್ ಸಹಪಾಠಿಗಳ ಸ್ನೇಹ ಮಿಲನ ಹಾಗೂ ವಿದ್ಯಾಭ್ಯಾಸ ಕಲಿಸಿದ ಗುರುಗಳಿಗೆ ಗುರು ವಂದನಾ ಕಾರ್ಯಕ್ರಮ ನಗರದ ಜಿಲ್ಲಾ ಸರಕಾರಿ ನೌಕರರ ಸಾಂಸ್ಕೃತಿಕ ಭವನದಲ್ಲಿ ರವಿವಾರ ಸಡಗರ ಸಂಭ್ರಮದಿಂದ ಯಶಸ್ವಿಯಾಗಿ ಜರುಗಿತು, ಕಾರ್ಯಕ್ರಮದಲ್ಲಿ ಅಂದಿನ ಗುರುಗಳಾದ ಹಾಲಿ ಮೈಸೂರು ನಿವಾಸಿ ನಿವೃತ್ತ ಗಣಿತ ಶಿಕ್ಷಕ ರಾದ ರಹಮತುಲ್ಲಾ ಷರೀಫ್ ಹಾಗೂ ಹಾಲಿ ಚಿತ್ರದುರ್ಗದ ನಿವಾಸಿ ನೀವೃತ್ತ ವಿಜ್ಞಾನ ಶಿಕ್ಷಕ ಸೈಯದ್ ಸಾದತುಲ್ಲ ರವರಿಗೆ ಗುರು ವಂದನಾ ಹಾಗೂ ವಿಶೇಷ ಸನ್ಮಾನ ವನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದ ಉದ್ಘಾಟನೆಯನ್ನು ಗುರುಗಳಾದ ರಹಮತುಲ್ಲಾ ಶರೀಫ್ ಮತ್ತು ಸೈಯದ್ ಸಾದತುಲ್ಲಾ ರವರುಗಳು ಜಂಟಿಯಾಗಿ ನೆರವೇರಿಸಿದರೂ ನಂತರ ಅವರಿಗೆ ಸಹಪಾಠಿ ಬಳಗದಿಂದ ವಿಶೇಷವಾಗಿ ಗೌರವ ಸನ್ಮಾನ ಮತ್ತು ಗುರುವಂದನ ಜರುಗಿತು.ವಿಶೇಷ ಆಮಂತ್ರಿತ ಅತಿಥಿಗಳಾಗಿ ಸರ್ಕಾರಿ ಉರ್ದು ಪ್ರೌಢಶಾಲೆಯ ಉಪ ಪ್ರಚಾರ್ಯರಾದ ಎಂ. ಎ. ಖೈಯುಮ್ , ಕೊಪ್ಪಳ ದ ಉರ್ದು ಸಾಹಿತಿ ನಿವೃತ್ತ ಪ್ರಾಧ್ಯಾಪಕ ಅನ್ವರ್ ಹುಸೇನ್ ,ವಿಜಯನಗರ ಜಿಲ್ಲೆಯ ಹಿರಿಯ ಸಮಾಜಸೇವಕ ಉರ್ದು ಸಾಹಿತಿ ಶಬ್ಬೀರ್ ಅಹ್ಮದ್, ಕೊಪ್ಪಳದ ಹಿರಿಯ ಸಮಾಜ ಸೇವಕ ಎಂ .ಎ. ಮಾಜಿದ ಸಿದ್ದೀಕಿ ,ಕಾನೂನು ಮಾಪನ ಇಲಾಖೆಯ ನೀರೀಕ್ಷಕ ಎಂ. ಬದಿಯುದ್ದೀನ್ ಅಹಮದ್ ನವೀದ. ,ಉರ್ದು ಕವಿ ಎಂ, ವಿಚಾರತ್ ಅಲಿ, ಉದ್ಯಮಿ ಗಳಾದ ರಿಯಾಜುದ್ದೀನ್ ಅಹಮದ್ ಖಲ್ಲೆದಾರ್, ಜಾಕಿರ್ ಹುಸೇನ್ ಕುಷ್ಟಗಿ, ಸೇರಿದಂತೆ ಮೈಸೂರಿನ ಡಾ, ನಯಿಮುಲ್ಲಾ ಶರೀಫ್, ಕಮಲಾಪುರದ ಪಿಯು ಕಾಲೇಜಿನ ಉಪನ್ಯಾಸಕ ನಿಸಾರ್ ಅಹಮದ್, ಮತ್ತು ಕಲಬುರ್ಗಿಯ ಜೆಸ್ಕಾಂ ಇಲಾಖೆಯ ಕಂಟ್ರೋಲರ್ ಆಪ್ ಅಕೌಂಟ್ಸ್ ಅಧಿಕಾರಿ ಎಸ್, ಸಲೀಂ ಪಟೇಲ್ ,ಅನೇಕರು ಮತ್ತು ಭಾಗ್ಯನಗರದ ದೈಹಿಕ ಶಿಕ್ಷಕ ಶರಣಪ್ಪ ಮಣ್ಣೂರ್ ಪಾಲ್ಗೊಂಡಿದ್ದರು, ಅಲ್ಲದೆ19 80 81ರ ಸಾಲಿನ ಉರ್ದು ಸಹಪಾಠಿಗಳಾದ ಈಗಿನ ಕರ್ನಾಟಕ ಕುಡಿಯುವ ನೀರು ಸರಬರಾಜು ಇಲಾಖೆಯ ಮುಖ್ಯ ಅಭಿಯಂತರಾದ ಏಜಾಜ ಹುಸೇನ್, ಉದ್ಯಮಿ ಮೈಸೂರಿನ ಸಮಾಜ ಸೇವಕರಾದ ಎಂ. ತಾಹಿರ್ ಅಲಿ ,ಐ,ಟಿ,ಐ ,ಕಾಲೇಜು, ಮೈಸೂರಿನ ನಿವೃತ್ತ ಪ್ರಾಚಾರ್ಯರಾದ ರಫೀಕ್ ಅಹಮದ್ ಬಿಜಾಪುರ್, ವಿಜಯಪುರದ ನಿವೃತ್ತ ಉಪನ್ಯಾಸಕಿ ರುಕ್ಸಾನಾ ಪರ್ವಿನ್ ಮನಿಯಾರ್ , ಕಲಬುರ್ಗಿಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಜೈಬು ನ್ನಿಸಾ ಬೇಗಂ ಪಟೇಲ್, ನಿವೃತ್ತ ಶಿಕ್ಷಕರಾದ ಶಮೀಮುನ್ನಿಸಾ ಬೇಗಂ ಹನಗುಂದ್, ಸೈಯದ್ ಗೌಸ್ ಪಾಷಾ ಖಾಜಿ, ಜೀನತ್ ಬೇಗಮ್ ,ಸಿ ಆರ ಪಿ ಎಫ್ ನಿವೃತ್ತ ನೀರೀಕ್ಷಕ ಸೈಯದ್ ಸಲೀಮುದ್ದೀನ್, ಇರಕಲ್ಗಡ ಪ್ರೌಢಶಾಲೆಯ ಸಹಶಿಕ್ಷಕಿ ಸಲ್ಮಾ ಜಹಾನ್ ,ಸಾರಿಗೆ ಸಂಸ್ಥೆಯ ನಿವೃತ್ತ ನೌಕರ ಅಬ್ದುಲ್ ರಜಾಕ್ ಸೌದಾಗರ್, ಕೊಪ್ಪಳದ ಖಲೀಲ ಅಹ್ಮದ್ ,ಬೆಂಗಳೂರಿನ ಅಫೀಫಾ ಕೀಲ್ಲೇದಾರ್ , ಕೊಪ್ಪಳದ ಬದ್ರುನ್ನಿಸಾ ಬೇಗಠ, ನಫೀಸ್ ಫಾತಿಮಾ, ಸಿಂಧನೂರಿನ ಖಮರ್ ಸುಲ್ತಾನ , ,ಷಮ್ಸ್ ಬೇಗಂ , ಗಂಗಾವತಿಯ ಮುನವರ್ ಹುಸೇನ್, ಕೊಪ್ಪಳದ ಸಲ್ಮಾ ಸುಲ್ತಾನ ಸಿದ್ದಿಕೀ ಅಲ್ಲದೆ ಕಾರ್ಯಕ್ರಮದ ಸಂಘಟಕ ಸಹಪಾಠಿ ಹಾಗೂ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ಮತ್ತಿತರರು ಪಾಲ್ಗೊಂಡಿದ್ದರು. ನಂತರ ಸ್ನೇಹ ಮಿಲನ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಕನ್ನಡ ಮತ್ತು ಉರ್ದು ಕವಿಗಳಿಂದ ಕವನ ವಾಚನ ಮತ್ತು ಮನೋರಂಜನೆ ಕಾರ್ಯಕ್ರಮ ದಲ್ಲಿ ತಾಹೇರ್ ಅಲಿ ಕನ್ನಡ ಭಾಷೆಯಲ್ಲಿ ಕವನ ವಾಚನಮಾಡಿದರೆ ಅನ್ವರ್ ಹುಸೇನ್ ಬದಿಯುದ್ದಿನ್ ಅಹಮದ್ ನವೀಧ ಮತ್ತು ವಿಜಾರತ ಅಲಿ ಹಾಗೂ ಅತಿಕ ಅಹಮದ್ ಉರ್ದು ಭಾಷೆಯಲ್ಲಿ ಕವನ ವಾಚನ ಮಾಡಿ ದರೂ ಮನೋರಂಜನ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ಆಫ್ರಿನ್ ಫಾತಿಮಾ ಮತ್ತು ಮೊಹಮ್ಮದ್ ಉಮರ್ ಪ್ರಾರ್ಥನೆ ಗೀತೆ ನೆರವೇರಿಸಿದರೆ ಸಹಪಾಠಿ ಸೈಯದ ಗೌಸ್ ಪಾಷಾ ಖಾಜಿ ಸ್ವಾಗತಿಸಿದರು ಶಮೀಮುನ್ನಿಸಾ ಬೇಗಂ ಹುನಗುಂದ್ ರವರು ಗುರು ವಂದನ ಕಾರ್ಯ ನಡೆಸಿಕೊಟ್ಟರು, ಜೈಬುನ್ನಿಸಾ ಬೇಗಂ ಪಟೇಲ್ ಮತ್ತು ರುಕಸಾನಾ ಪರ್ವೀನ್ ಮನಿಯಾರ್ ರವರುಗಳು ಗುರುಗಳ ಪರಿಚಯ ಭಾಷಣ ಮಾಡಿದರು, ಎಂ ತಾಹೇರ ಅಲಿ ಪ್ರಸ್ತಾವಿಕವಾಗಿ ಮಾತನಾಡಿದರೆ, ಎಂ ಸಾಧಿಕ್ ಅಲಿ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಕೊನೆಯಲ್ಲಿ ಸಲ್ಮಾ ಜಹಾ ರವರು ವಂದಿಸಿದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 