ಕಾಗವಾಡ ಕ್ಷೇತ್ರದಲ್ಲಿ ಎರಡು ಫ್ರೌಢಶಾಲೆ ಉನ್ನತಿಕರಣ

ಕಾಗವಾಡ ಕ್ಷೇತ್ರದಲ್ಲಿ ಎರಡು ಫ್ರೌಢಶಾಲೆ ಉನ್ನತಿಕರಣ Upgradation of two high schools in Kagawad constituency

ಕಾಗವಾಡ ಕ್ಷೇತ್ರದಲ್ಲಿ ಎರಡು ಫ್ರೌಢಶಾಲೆ ಉನ್ನತಿಕರಣ 

ಕಾಗವಾಡ  10;- ಗ್ರಾಮೀಣ ಭಾಗದ ರೈತರ ಮಕ್ಕಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಎರಡು ಶಾಲೆಗಳನ್ನು ಪ್ರಾಥಣಿಕ ಶಾಲೆಗಳನ್ನು ಉನ್ನತಿಕರಿಸಿ ಪ್ರಾಢಶಾಲೆಗಳನ್ನಾಗಿ ಮಾರ​‍್ಾಡಿಸಲಾಗಿದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು. ಅವರು ಇಂದು ಸುದ್ದಿಗಾರೊಂದಿಗೆ ಮಾತನಾಡುವಾಗ ಈ ವಿಷಯ ತಿಳಿಸಿದರು.ಕರ್ನಾಟಕ ಹಾಗೂ ಮಹಾರಾಷ್ಟೊದ ಗಡಿ ಭಾಗವಾಡ ಬೇವನೂರ ಹಾಗೂ ಉಗಾರದ    ಗುಡಿಯಲ್ಲಿ ಎರಡು ಪ್ರೌಢಶಾಲೆಗಳನ್ನು ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರು ಮಂಜೂರುಗೊಳಿಸಿರುದಾಗಿ ತಿಳಿಸಿದರು. ರಾಜ್ಯದಲ್ಲಿ ಒಟ್ಟು 147 ಪ್ರಾಥಮಿಕ ಶಾಲೆಗಳನ್ನು ಉನ್ನತಿಕರಿಸಿ ಪ್ರಾಢಶಾಲೆಗಳನ್ನಾಗಿ ಮಂಜೂರು ಮಾಡಲಾಗಿದೆ. ಅದರಲ್ಲಿ ಕಾಗವಾಡ ವಿಧಾನಸಭಾ ಮತಕ್ಷೇತ್ರದ ಎರಡು ಶಾಲೆಗಳನ್ನು ಬೇವನೂರ, ಮತ್ತು ಉಗಾರದ   ಗುಡಿಯಲ್ಲಿ ಮಂಜೂರಾಗಿವೆ ಎಂದರು. ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶಿಕ್ಷರನ್ನು ನೇಮಕಾತಿಯಾಗಿಲ್ಲ. ಈ ಕುರಿತು ಮಾತನಾಡಿದ ಶಾಸಕ ರಾಜು ಕಾಗೆ ಶಿಕ್ಷಕರ ನೇಮಕಾತಿಯ ಬಗ್ಗೆ ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಶಿಘ್ರವೇ ಶಿಕ್ಷಕರ ನೇಮಕಾತಿಯಾಗಲಿದೆ ಎಂದರು.  

ಕೆರೆ ಭಾವಿ ಭರ್ತಿ;- ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸಿರುವುದರಿಂದ ಮದಭಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಳ್ಳ, ನಾಲಾ ಬಂದರಗಳು ತುಂಬಿ ತುಳುಕುತ್ತಿವೆ. ಇದರಿಂದ ಬಾವಿ, ಕೊಳವೆ ಭಾವಿಗಳಲ್ಲಿ ಅಂತರಜಲಮಟ್ಟ ಹೆಚ್ಚಾಗಿದೆ ಎಂದ ಅವರು ಎರಡನೇ ಹಂತದ ಯೋಜನೆಯನ್ನು ಶೀಘ್ರವೇ ಮುಗಿಸಿ ಖಿಳೇಗಾಂವ ಸೇರಿದಂತೆ 22 ಹಳ್ಳಿಗಳಿಗೆ ನೀರೋದಗಿಸಲಶಾಗಿವುದೆಂದು ರಾಜು ಕಾಗೆ ತಿಳಿಸಿದರು. ಈ ವೇಳೆ ಮುಖಂಡರಾದ ವಿನಾಯಕ ಬಾಗಡಿ, ಘೂಳಪ್ಪ ಜತ್ತಿ, ಶಿವಾನಂದ ಗೊಲಭಾಂವಿ, ಮಲ್ಲಿಕಾರ್ಜುನ ದಳವಾಯಿ, ಬಾಹುಸಾಹೇಬ ಪತ್ತಾರ, ಓಂಪ್ರಾಶ ಡೊಳ್ಳಿ, ರಾಜು ಮದಭಾವಿ, ಸೇರಿದಂತೆ ಅನೇಕರು ಇದ್ದರು. 

 .