ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

Unopposed election of President, Vice President of Devahipparagi Patta Cooperative Society

ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ದೇವರಹಿಪ್ಪರಗಿ 27: ಪಟ್ಟಣದ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಜೀವ್ ಗುತ್ತೇದಾರ ಹಾಗೂ ಉಪಾಧ್ಯಕ್ಷರಾಗಿ ಹಸನಸಾಬ ವಡ್ಡೋಡಗಿ ಅವಿರೋಧ ಆಯ್ಕೆಯಾದರು.ಪಟ್ಟಣದ ದೇವರಹಿಪ್ಪರಗಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಸೋಮವಾರ ದಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀವ್ ದೇವೇಂದ್ರ​‍್ಪ  ಗುತ್ತೇದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಸನಸಾಬ ಬೃ. ವಡ್ಡೋಡಗಿ ನಾಮಪತ್ರ ಸಲ್ಲಿಸಿದ್ದರು.  

ನಂತರ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಗಳಾದ ಶ್ರೀಮತಿ ಲೀಲಾವತಿಗೌಡ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.ನಂತರ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಚುನಾವಣಾ ಮಾರ್ಗದರ್ಶಕರಾಗಿ ಸ್ಥಳೀಯ ಬ್ಯಾಂಕಿನ ವ್ಯವಸ್ಥಾಪಕರಾದ ಮಹಾದೇವಪ್ಪ ಹಿರೇಕುರುಬರ ಹಾಗೂ ಸೋಮನಗೌಡ ಪಾಟೀಲ ಸೇವೆ ಸಲ್ಲಿಸಿದ್ದು, ಅವರಿಗೆ ಆಡಳಿತ ಮಂಡಳಿ ಧನ್ಯವಾದಗಳನ್ನು ಅರ​‍್ಿಸಿದರು.ನಂತರ ಅಧ್ಯಕ್ಷ,ಉಪಾಧ್ಯಕ್ಷರಿಗೆ ಸಿಹಿ ಹಂಚಿ, ಸನ್ಮಾನಿಸಿ ಅಭಿನಂದಿಸಲಾಯಿತು. 

ಅಧ್ಯಕ್ಷ ರಾಜೀವ್ ಗುತ್ತೇದಾರ ಅವರು ಸುದ್ದಿಗಾರರ ಜೊತೆ ಮಾತನಾಡಿ, ‘ಎಲ್ಲರೂ ಒಂದಾಗಿ ಸಂಘದ ಒಳಿತಾಗಿ ಕೆಲಸ ನಿರ್ವಹಿಸುತ್ತೆವೆ. ಆಡಳಿತ ಮಂಡಳಿಯ ಸದಸ್ಯರ  ವಿಶ್ವಾಸ ಹಾಗೂ ಸಹಕಾರ ತೆಗೆದುಕೊಂಡು ಬರುವಂಥ ದಿನಗಳಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತೇವೆ’ ಎಂದು ತಿಳಿಸಿದರು. 

ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರುಗಳಾದ ಸಿದ್ದಪ್ಪ ದಸ್ಮಾ (ಅಡಕಿ), ಲಕ್ಷ್ಮಣ  ಸುಗತೇಕರ, ಡಾ.ರಾಮರಾವ ಆರ್‌.ನಾಯಕ, ಅಶೋಕ ಮಶಾನವರ, ಗುರುಬಾಳ ಯರಗಲ್, ಸುಧೀರ ಇಳಗೇರ, ಸಿದ್ದಪ್ಪ ಮಸಬಿನಾಳ,ಕೇಸು ರಾಠೋಡ, ಕಾಶಿಬಾಯಿ ಕಕ್ಕಳಮೇಲಿ, ಕಸ್ತೂರಿಬಾಯಿ ಮೂಲಿಮನಿ, ಮಡಿವಾಳಪ್ಪ ವಾಲಿಕಾರ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಬ್ಯಾಂಕ್‌ನ ಷೇರುದಾರರು, ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.ಸನ್ಮಾನ ಸಮಾರಂಭದಲ್ಲಿ ಸರೋಜಿನಿ ಎಸ್‌. ಪಾಟೀಲ ಸ್ವಾಗತಿಸಿ, ನಿರೂಪಿಸಿದರು ಶ್ರೀಧರ ನಾಡಗೌಡ ವಂದಿಸಿದರು.