ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

Unopposed election of Chairman, Vice-Chairman of Agricultural Farmers' Co-operative Society

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

ದೇವರಹಿಪ್ಪರಗಿ 25:  ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಂತಪ್ಪ ಈರಸಂಗಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ  ಬುರಾನಸಾಬ ಅಮೀನಸಾಬ ಮಸಳಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ದತ್ತಾತ್ರೇಯ ನಾಯ್ಕೋಡಿ ತಿಳಿಸಿದರು.ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ಶನಿವಾರದಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಂತಪ್ಪ ಈರಸಂಗಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುರಾನಸಾಬ ಅಮೀನಸಾಬ ಮಸಳಿ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಮತ್ತೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ದತ್ತಾತ್ರೇಯ ನಾಯ್ಕೋಡಿ ಅವಿರೋಧ ಆಯ್ಕೆ ಎಂದು ಘೋಷಣೆ ಮಾಡಿದರು. ನಂತರ ಬೆಂಬಲಿಗರಿಂದ ಸಿಹಿ ಹಂಚಿ, ಸನ್ಮಾನಿಸಿ ಅಭಿನಂದಿಸಿದರು.ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷರಾದ ರಿಯಾಜ್ ಯಲಗಾರ,ಪ.ಪಂ ಸದಸ್ಯರುಗಳಾದ ಕಾಸುಗೌಡ ಬಿರಾದಾರ ಜಲಕತ್ತಿ, ಕಾಸು ಜಮಾದಾರ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚನ್ನವೀರ​‍್ಪ ಕುದರಿ ಸೇರಿದಂತೆ ಹಲವಾರು ಮುಖಂಡರು ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸದಸ್ಯರುಗಳಾದ ಹಣಮಂತ್ರಾಯ ಜೋಗೂರ, ಬಸವರಾಜ ತಾಳಿಕೋಟಿ, ಮೋದಿನಸಾಬ ಯಲಗಾರ, ರಾಜೇಂದ್ರ ಭಾವಿಮನಿ, ಶೃತಿ ಕೋಟಿನ್, ಪ್ರಭಾವತಿ ಮಠಪತಿ, ಸಂತೋಷ ದೇಸಾಯಿ,ಯಲ್ಲಪ್ಪ ನಾಟಿಕಾರ,ಸೋಮು ಜಾಧವ, ನೀಲಮ್ಮ ಜಂಬಗಿ ಹಾಗೂ ಪಟ್ಟಣದ ಪ್ರಮುಖರುಗಳಾದ ಮಲ್ಲನಗೌಡ ಬಿರಾದಾರ, ಬಸವರಾಜ ದೇವಣಗಾಂವ,ಅಜೀಜ ಯಲಿಗಾರ,ಈರ​‍್ಪ ಒಂಟೆತ್ತಿನ, ಕುಮಾರ ಜೋಗೂರ, ಅಶೋಕ ಕೊಟಿನ್, ಸಿದ್ದಪ್ಪ ವಡ್ಡರ, ಸಿದ್ದಪ್ಪ ಕೊಟಿನ್, ವೀರೇಶ ಕುದುರಿ, ಸುಭಾಷ ಜಾಧವ,ಇಬ್ರಾಹಿಂ ಮಸಳಿ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶರಣಗೌಡ ಅಂಗಡಿ ಸೇರಿದಂತೆ ಹಲವಾರು ಜನ ಮುಖಂಡರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.