ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ 77 ನೇ ಜಯಂತಿ ಪ್ರಯುಕ್ತ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮ
Unity Day celebration program on the occasion of the 77th birth anniversary of Dr. Siddalinga Mahas
ಆಲಮಟ್ಟಿ 03: ರಾಷ್ಟ್ರೀಯ ಭಾವೈಕ್ಯತಾ ಪ್ರಶಸ್ತಿ ಪುರಸ್ಕೃತರಾದ ಗದುಗಿನ ತೋಂಟದ ಲಿಂ, ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಸಾಮಾಜಿಕ ಹಿತೋಪ್ತಿ ಸೇವಾ ಕಾಯಕಗಳು ಸದಾ ಸ್ಮರಣೀಯವಾಗಿ ಜನಮಾನಸದಲ್ಲಿ ಅಜರಾಮರಾಗಿ ಉಳಿದಿವೆ ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು. ಸ್ಥಳೀಯ ರಾವಬಹದ್ದೂರ ಡಾ.ಫ.ಗು.ಹಳಕಟ್ಟಿ ಪ್ರೌಢಶಾಲೆ ಹಾಗೂ ಮಂಜಪ್ಪ ಹರ್ಡೇಕರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆಶ್ರಯದಲ್ಲಿ ತೋಂಟದ ಡಾ ಸಿದ್ದಲಿಂಗ ಶ್ರೀಗಳವರ 77 ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಭಾವೈಕ್ಯತಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರುಣಾರಸಭರಿತ ಭಾವದ ಹೃದಯಮಯ ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ಸಾಮಾನ್ಯರ ಸ್ವಾಮಿಗಳಾಗಿ ಧಾರ್ಮಿಕ ರಂಗದೊಂದಿಗೆ ಗೈದಿರುವ ಸಮಾಜಮುಖಿ ಸೇವಾ ಮಜಲು ಅನನ್ಯವಾಗಿವೆ. ಕೋಮು ಸೌಹಾರ್ದತೆ ಪ್ರತೀಕವಾಗಿರುವ ಕನ್ನಡಾಂಬೆಯ ಅಪರೂಪದ ಜೀವ ಸಿದ್ದಲಿಂಗ ಶ್ರೀಗಳವರ ಜನ್ಯವೇ ವೈವಿಧ್ಯ.ಕಾಯಕವೇ ನೈವೇದ್ಯವಾಗಿದ್ದು ಸಮಾಜಕ್ಕೆ ಅಮೋಘ ಸಮರ್ಿತವಾಗಿದೆ ಎಂದು ಬಣ್ಣಿಸಿದರು.
ಗಿಡಮರಗಳೆಂದರೆ ಶ್ರೀಗಳವರಿಗೆ ಬಲು ಪ್ರೀತಿ.ಧರ್ಮ ಪ್ರಸಾರ ಕಾಯಕದೊಂದಿಗೆ ಪರಿಸರ ರಕ್ಷಣೆಯಲ್ಲಿ ಅಗಮ್ಯ ಆಸಕ್ತಿ, ಕಾಳಜಿ ಹೊಂದಿದ್ದರು. ಹೀಗಾಗಿ ಇಲ್ಲಿನ ಶಾಲಾ, ಕಾಲೇಜು ಕ್ಯಾಂಪಸ್ ವೈವಿಧ್ಯ ಸಸ್ಯ ಬನದ ಆಶ್ರಯದಲ್ಲಿ ಹಸಿರು ಎಲೆಗಳ ಸುಗಂಧ ರಂಗಿನಲ್ಲಿ ನಳಿಸುತ್ತಿವೆ. ಶ್ರೀಗಳವರ ಆಶಯದಂತೆ ವಿವಿಧ ಜಾತಿಯ ಗಿಡಮರಗಳನ್ನು ಪೋಷಿಸಿ ಬೆಳೆಸಲಾಗಿದೆ. ಸಸ್ಯ ರಾಶಿಯಲ್ಲಿ ಪೂಜ್ಯರ ಚೈತನ್ಯ ದ ಪ್ರತಿಬಿಂಬ ಕಾಣುತ್ತಲ್ಲಿದ್ದೆವೆ. ಗಿಡಮರಗಳನ್ನು ನೆಟ್ಟು ಬೆಳೆಸುವುದು ಸೇರಿದಂತೆ ಹಲ ಹೊಣೆಗಾರಿಕೆ ನಿರ್ವಹಣೆ ಕೆಬಿಜೆಎನ್ ಎಲ್ ಅರಣ್ಯ ಇಲಾಖೆಯ ಸಹಕಾರದಿಂದ ನಡೆಯುತ್ತಿದೆ ಎಂದರು.
ಶುದ್ಧ ಆಮ್ಲಜನಕದ ಪ್ರಮಾಣ ಎಸ್.ವಿ.ವಿ ಸಂಸ್ಥೆಯ ಶಾಲಾಂಗಳದಲ್ಲಿದೆ. ಹಸಿರು ಐಸಿರಿಯಿಂದ ಕಂಗೊಳಿಸುತ್ತಿರುವ ವನ ಸಿದ್ದಲಿಂಗ ಶ್ರೀಗಳವರ ಪ್ರೇರಣೆಯಿಂದ ನಳಿಸುತ್ತಿದೆ.ಈಗ ಬೃಹದಾಕಾರದ ಗಿಡಮರಗಳು ಆಕರ್ಷಣೆಯ ಕೇಂದ್ರವಾಗಿದೆ. ಸಿದ್ದಲಿಂಗ ಮಹಾಸ್ವಾಮಿಗಳು ನಡೆದುಕೊಂಡು ಬಂದ ರೀತಿ,ನೀತಿ,ಕಾಯಕ ತೃಣಗಳು ಸಾಮಾನ್ಯರನ್ನು ಮುಟ್ಟಿವೆ. ಶಿಕ್ಷಣಕ್ಕೆ ನೀಡಿದ ಪ್ರಾಮುಖ್ಯತೆ ಮರೆಯಲಾಗದು. ಪೂಜ್ಯರ ಕಾಯಕ ಕಾವ್ಯ ಮೀಮಾಂಸೆಯಲ್ಲಿ ಮಿಂದಿವೆ.ಕಾವಿಧಾರಿಯ ವೈಶಿಷ್ಟ್ಯ ವ್ಯಕ್ತಿತ್ವ ಚಿತ್ರಣ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಪೂಜ್ಯರ ಕಾಯಕ ನಯನಗಳು ಪರಿಶುದ್ಧವಾಗಿವೆ. ವೈಚಾರಿಕ ಚರಿತ್ರೆ ಚಾರಿತ್ರಿಕವಾಗಿವೆ ಎಂದು ಜಿ.ಎಂ.ಕೋಟ್ಯಾಳ ನುಡಿದರು.
ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ಮಾತನಾಡಿ, ಸರಳ, ಸಹಜ ಮೊಗಭಾವದ ತೋಂಟದ ಸಿದ್ದಲಿಂಗ ಶ್ರೀಗಳವರ ಹಿತನುಡಿಗಳು ನಿರರ್ಗಳತೆಯಲ್ಲಿ ತೇಲಿವೆ. ಅವು ಜನತೆಯ ಮನದಲ್ಲಿ ಶಾಶ್ವತವಾಗಿ ನೆಲೆಸಿವೆ. ತೇಜಸ್ ಚಹರೆ ಸಕಲರ ಪ್ರೀತಿಗೆ ಪಾತ್ರವಾಗಿದೆ. ಜನಪದ ಆಡುಭಾಷೆ ಕೇಳುವುದೇ ಒಂದು ಸೌಭಾಗ್ಯ. ಅರ್ಥಪೂರ್ಣ ಆಡುನುಡಿಗಳು, ಪದಪುಂಜಗಳು ಸಮಾಜದ ಮನ ಸೆಳೆದಿವೆ. ಉದಾತ್ತ ಜೀವನ ಯಶೋಗಾಥೆ ಜನಮನಕ್ಕೆ ಅಮೂಲ್ಯ ಸಂದೇಶಗಳನ್ನು ಸಾರಿವೆ ಎಂದರುಶ್ರೇಷ್ಠ ದಾರ್ಶನಿಕರಲ್ಲೊಬ್ಬರಾಗಿರಿರುವ ತೋಂಟದ ಸಿದ್ದಲಿಂಗ ಶ್ರೀಗಳವರ ಸದಾಚಾರ ಜೀವನ ನಮಗೆಲ್ಲ ಪ್ರೇರಣಾದಾಯಕವಾಗಿದೆ. ಮಾನವೀಯತೆಯ ಮೌಲ್ಯ ,ಸಮತಾಭಾವ ಕಾರುಣ್ಯಮಯವಾಗಿವೆ. ಕುಲ,ಜಾತಿ ಪಂಥಗಳನ್ನು ಮೀರಿ ಸರ್ವರನ್ನು ಅಂತಃಕರಣದಿಂದ ಕಂಡ ದಿವ್ಯ ಜೀವಾತ್ಮರು. ಕಲ್ಯಾಣ ಬಯಸುವ ಭಕ್ತೋದ್ಧಾರಕ ಮಹಾನುಭಾವರು.
ಶ್ರೀಗಳವರ ಕಾಯಕ ತತ್ವಗಳು ಆದರ್ಶ ಉತ್ಕಟೆಯಲ್ಲಿ ಸಂದಿವೆ ಎಂದರು. ರಾಜ್ಯ ಸರಕಾರಿ ನೌಕರರ ಸಂಘ ಆಲಮಟ್ಟಿ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ವಿಶ್ರಾಂತ ಮುಖ್ಯ ಶಿಕ್ಷಕ ಎಂ.ಎಸ್.ಬಿರಾದಾರ, ಗ್ರಾಪಂ ಮಾಜಿ ಅಧ್ಯಕ್ಷ ಮಂಜುನಾಥ ಹಿರೇಮಠ , ಶಿಕ್ಷಣ ಸಂಯೋಜಕ ಯು.ವಾಯ್.ಬಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಬಿ.ಹುರಕಡ್ಲಿ, ಮುಖ್ಯ ಶಿಕ್ಷಕ ಎಸ್.ಆಯ್.ಗಿಡ್ಡಪ್ಪಗೋಳ, ಬಸಯ್ಯ ಶಿವಯೋಗಿಮಠ, ಮುಖ್ಯ ಶಿಕ್ಷಕಿ ಕವಿತಾ ಮರಡಿ, ಕಮಲಾಕ್ಷಿ ಹಿರೇಮಠ ವೇದಿಕೆಯಲ್ಲಿದ್ದರು.ಸರೋಜಾ ಕಬ್ಬೂರ, ಮಂಜುಳಾ ಸಂಗಾಪೂರ, ಕಾಂತನಾ ಕುಂದರಗಿ, ಅನು ಪಟೇಲ, ವಿದ್ಯಾ ಹಿರೇಮಠ, ಪೂಜಾ ಮಹೇಂದ್ರಕರ, ರಾಮಕೃಷ್ಣ ಉದಂಡಿ, ಇಬ್ರಾಹಿಂ ಹುನಗುಂದ,ಬಾಬು ಕೂಡಗಿ, ಶೇಖು ರಾಠೋಡ ಇತರರಿದ್ದರು.ಕಾರ್ಯಕ್ರಮಕ್ಕೂ ಮುನ್ನ ಸಿದ್ದಲಿಂಗ ಶ್ರೀಗಳವರ ಹಾಗೂ ಡಾ.ಫ.ಗು.ಹಳಕಟ್ಟಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 