ಸಂಸದ ಶೆಟ್ಟರ್ ಮನವಿಗೆ ಕೇಂದ್ರ ವಿಮಾನಯಾನ ಸಚಿವರ ಸ್ಪಂದನೆ ಬೆಳಗಾವಿ-ಮುಂಬೈ ವಿಮಾನಯಾನ ಸೇವೆಗೆ ಗ್ರೀನ್ ಸಿಗ್ನಲ್

ಸಂಸದ ಶೆಟ್ಟರ್ ಮನವಿಗೆ ಕೇಂದ್ರ ವಿಮಾನಯಾನ ಸಚಿವರ ಸ್ಪಂದನೆ   ಬೆಳಗಾವಿ-ಮುಂಬೈ ವಿಮಾನಯಾನ ಸೇವೆಗೆ ಗ್ರೀನ್ ಸಿಗ್ನಲ್ Union Aviation Minister responds to MP Shettar's request Green signal for Belagavi-Mumbai flight


ಬೆಳಗಾವಿ 24  : ಬೆಳಗಾವಿ-ನವಿಮುಂಬೈ ನಡುವೆಇಂಡಿಗೋ ಸಂಸ್ಥೆಯು ನೂತನ ವಿಮಾನಯಾನ ಸೇವೆಯನ್ನು ಪ್ರಾರಂಭ ಮಾಡಲಿದೆಎಂದು ಬೆಳಗಾವಿ ಲೋಕಸಭಾ ಸದಸ್ಯ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಜಗದೀಶ ಶೆಟ್ಟರ ತಿಳಿಸಿದ್ದಾರೆ.  

ಕೆಲವು ತಿಂಗಳ ಹಿಂದೆಯಷ್ಟೆ ಸ್ಟಾರ್‌ಏರ್ ಸಂಸ್ಥೆಯು ಬೆಳಗಾವಿ-ಮುಂಬೈ ನಡುವೆ ವಿಮಾನಯಾನ ಸೇವೆಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗಿತ್ತು. ಈ ಹಿನ್ನಲೆಯಲ್ಲಿ, ಸಂಸದರು ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯು ್ಡಅವರನ್ನು ಬಜೆಟ್‌ಅಧಿವೇಶನ ನಡೆದ ಸಮಯದಲ್ಲಿ ಭೇಟಿ ಮಾಡಿ ವಿನಂತಿಸಿದ್ದು ಇಲ್ಲಿ ಸ್ಮರಣೀಯ. ಅದಲ್ಲದೆ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಸಹ ನವದೆಹಲಿಯಲ್ಲಿ ಸಭೆ ನಡೆಸಿ, ಬೆಳಗಾವಿಯಿಂದ ಮುಂಬೈ, ಚೆನ್ನೈ ಹಾಗೂ ಪುಣೆ ಮಾರ್ಗದಲ್ಲಿ ವಿಮಾನಯಾನ ಸೇವೆಯನ್ನು ಒದಗಿಸಲು ಕೋರಿದ್ದರು.  

ಇದಕ್ಕನುಗುಣವಾಗಿ 29ನೇ ಮಾರ್ಚ್‌ 2026ರಿಂದ ಬೆಳಗಾವಿ-ನವಿ ಮುಂಬೈ ನಡುವೆ ಇಂಡಿಗೋ ವಿಮಾನ ಹಾರಾಟವನ್ನು ಪ್ರಾರಂಭಿಸಲಿದೆ. ಇದು ನವಿ ಮುಂಬೈಯನ್ನು ಬೆಳಿಗ್ಗೆ 10:20ಕ್ಕೆ ಬಿಟ್ಟು ಬೆಳಗಾವಿಯನ್ನು 11:35ಕ್ಕೆ ತಲುಪಿ, ನಂತರ ಬೆಳಗಾವಿಯನ್ನು ಸಂಜೆ 17:35ಕ್ಕೆ ಬಿಟ್ಟು ನವಿಮಂಬೈಯನ್ನು 18.45ಕ್ಕೆ ತಲುಪುವುದು. ವಿಮಾನಯಾನ ಸೇವೆ ಪ್ರಾರಂಭಕ್ಕೆ ಸಹಕರಿಸಿದ ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರಿಗೆ ಮತ್ತು ಇಂಡಿಗೋ ಸಂಸ್ಥೆಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸುವುದಾಗಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.