ಬೋಧನಾ ಕೌಶಲ್ಯವನ್ನು ಅರ್ಥೈಸಿ ಜ್ಞಾನವಂತರಾಗಿ ರೂಪಿಸಿ ಪಾಲಕರಿಗೆ ಮತ್ತು ಸಮಾಜಕ್ಕೆ ಕೊಡುಗೆ ನೀಡಿ
Understand teaching skills, shape them into knowledgeable individuals, and contribute to parents an
ಬೋಧನಾ ಕೌಶಲ್ಯವನ್ನು ಅರ್ಥೈಸಿ ಜ್ಞಾನವಂತರಾಗಿ ರೂಪಿಸಿ ಪಾಲಕರಿಗೆ ಮತ್ತು ಸಮಾಜಕ್ಕೆ ಕೊಡುಗೆ ನೀಡಿ
ಹಾವೇರಿ 14: ನಗರದ ಗೌರಿಮಠದ ಶ್ರೀ ಮಲ್ಲಿಕಾರ್ಜುನ ಆಂಗ್ಲ-ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಬಳಗಕ್ಕೆ ನುರಿತ ಅನುಭವಿ ಶಿಕ್ಷಕರಿಂದ ವಿಶೇಷ ಕಲಿಕಾ ಪ್ರೋತ್ಸಾಹ ಕಾರ್ಯಕ್ರಮ ಅತ್ಯಂತ ಯಶಸ್ವಿ ಯಾಗಿ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಪೂಜ್ಯ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಅಪಾರವಾದ ವಿಶೇಷ ಅನುಭವ ಹೊಂದಿದ ಶಿಕ್ಷಕರ ಬೋಧನಾ ಕೌಶಲ್ಯವನ್ನು ಮಕ್ಕಳು ಸರಿಯಾಗಿ ಅರ್ಥೈಸಿಕೊಂಡು ಹೆಚ್ಚಿನ ಅಂಕ ಪಡೆದುಕೊಳ್ಳುವುದರ ಜೊತೆಗೆ ಜ್ಞಾನವಂತರಾಗಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಶಾಲೆಗೆ, ಪಾಲಕರಿಗೆ ಮತ್ತು ಸಮಾಜಕ್ಕೆ ತಮ್ಮದೆ ಆದ ಕೊಡುಗೆ ನೀಡಬೇಕು ಎಂದರು.
ಶಿಕ್ಷಕರಾದ ಗೋವಿಂದರಾಯ ಎಚ್.ಕೆ ಅವರು ಸಮಾಜ ವಿಜ್ಞಾನ, ಪಿ. ಬಿ. ಮುದ್ದಿ ಹಾಗೂ ಎಂ. ಜಿ ಹಿರೇಮಠ ಅವರು ವಿಜ್ಞಾನ ಹಾಗೂ ಗಣಿತ ಹಾಗೂವಾಸುದೇವ ಅವರು ಇಂಗ್ಲಿಷ ಮತ್ತು ಶಿವಾನಂದ ಹಂಜಿ ಶಿಕ್ಷಕರು ಕನ್ನಡ ವಿಷಯ ಹೀಗೆ ಎಲ್ಲ ಶಿಕ್ಷಕರು ಅತ್ಯಂತ ಅರ್ಥಪೂರ್ಣವಾಗಿ, ವಿಮರ್ಶಾತ್ಮಕವಾಗಿ ಬೋಧನೆ ಮಾಡಿದರು. ಶ್ರೀಗಳು ಎಲ್ಲ ಶಿಕ್ಷಕರಿಗೆ ಗೌರವಿಸಿದರು. ಈ ವಿಶೇಷ ಕಾರ್ಯಕ್ರಮ ದಿಂದ ಮಕ್ಕಳು ಹರ್ಷಗೊಂಡರು. ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಗಂಗಯ್ಯ ಕುಲಕರ್ಣಿ ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯರಾದ ಶಂಕರ ಅಕ್ಕ ಸಾಲಿ ಅವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಸರಸ್ವತಿ ಹಿರೇಮಠ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 