ರಬಕವಿ-ಮಹಿಷವಾಡಗಿ ಸೇತುವೆಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಉಮಾಶ್ರೀ ಆಗ್ರಹ
Umashree demands early completion of Rabakavi-Mahishwadagi bridge work
ರಬಕವಿ-ಬನಹಟ್ಟಿ 19 :ನಾನೇ ಶಾಸಕಿಯಾಗಿದ್ದಾಗ ರಬಕವಿ-ಮಹಿಷವಾಡಗಿ, ಮಹಾಲಿಂಗಪುರ-ಢವಳೇಶ್ವರ, ಮಹಾಲಿಂಗಪುರ-ಮಿರ್ಜಿ ಸೇತುವೆ ನಿರ್ಮಾಣಕಾಮಗಾರಿಗೆ ಚಾಲನೆ ನೀಡಿ ನಾಗಾರ್ಜುನ ಸಂಸ್ಥೆಗೆ ಗುತ್ತಿಗೆ ನೀಡಿದ್ದೆ. ಎರಡು ಸೇತುವೆಗಳು ಕಾಮಗಾರಿ ಪೂರ್ಣಗೊಂಡರೂ ಬದಲಾದ ರಾಜಕೀಯ ಸ್ಥಿತ್ಯಂತರ ಹಾಗೂ ತಾಂತ್ರಿಕ ಕಾರಣಗಳಿಂದ ರಬಕವಿ-ಮಹಿಷವಾಡಗಿ ಸೇತುವೆಕಾಮಗಾರಿಗೆ ಹಿನ್ನೆಲೆಯಾಗಿದೆ. ಸೇತುವೆ ಮತ್ತು ರಸ್ತೆಗಳ ನಿರ್ಮಾಣ ಕೆಲಸ ಅಬಾಧಿತವಾಗಿ ನಡೆಯಬೇಕೆಂದು ಬೆಂಗಳೂರಿನ ಹಿರಿಯ ಅಧಿಕಾರಿಗಳೊಡನೆ ಮಾತನಾಡಿ, ಸಿ.ಎಂ., ಸಚಿವರ ಗಮನಕ್ಕೆ ತಂದು ಎಂ.ಡಿ. ತಾಂತ್ರಿಕ ಪರಿಣಿತರ ಮತ್ತು ಭೂಸ್ವಾಧೀನ ಅಧಿಕಾರಿಗಳ ತಂಡವನ್ನು ಖುದ್ದು ಪರೀಶೀಲನೆಗೆ ಕಳಿಸಿದ್ದೇನು. ಸೇತುವೆ ಮತ್ತುರಸ್ತೆಕಾಮಗಾರಿ ಅಡೆತಡೆಯಿಲ್ಲದೇ ಅಬಾಧಿತವಾಗಿ ನಡೆಯಲು ನಾನು ಸತ್ಯಾಗ್ರಹಿಗಳ ಪರವಾಗಿ ಬೆಂಬಲಿಸುತ್ತೇನೆಂದು ಮಾಜಿ ಸಚಿವೆ, ವಿಧಾನ ಪರಿಷತ್ ಸದಸ್ಯ ಡಾ.ಉಮಾಶ್ರೀ ಹೇಳಿದರು.
ಗುರುವಾರ ಸಂಜೆರಬಕವಿಯ ಶ್ರೀಶಂಕರಲಿಂಗ ಸರ್ಕಲ್ ಬಳಿ ರಬಕವಿ-ಮಹಿಷವಾಡಗಿ ಸೇತುವೆಕಾಮಗಾರಿ ಆರಂಭಿಸುವವರೆಗೆ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಡಾ.ರವಿ ಜಮಖಂಡಿ ಮತ್ತು ಸತ್ಯಾಗ್ರಹಿಗಳ ವೇದಿಕೆಗೆ ಆಗಮಿಸಿ ಮಾತನಾಡಿ ರಾಜಕೀಯ ಇಚ್ಛಾಶಕ್ತಿ ಕೊರತೆಗೆ ಸಾಕಷ್ಟು ಕಾರಣಗಳಿದ್ದು, ಡಾ.ರವಿ ಸತ್ಯಾಗ್ರಹ ನಡೆಸುತ್ತಿದ್ದಂತೆ ಪಟ್ಟಭದ್ರರ ಹುಟ್ಟಡಗಿದೆ ಮತ್ತು ನಮ್ಮೆಲ್ಲರ ವಿಘ್ನದೂರಾಗಿದೆ. ಕಾಮಗಾರಿಯಲ್ಲಾಗುವ ಕೆಲವು ಮಾರ್ಾಡುಗಳನ್ನು ಹೆಚ್ಚುವರಿಅನುದಾನ ನೀಡುವ ಮೂಲಕ ಪೂರೈಸಲು ಸರ್ಕಾರದ ಗಮನ ಸೆಳೆಯುತ್ತೇನೆ. ಕಾಮಗಾರಿತಡೆ ಇಲ್ಲದೇ ನಿರಂತರವಾಗಿ ಸಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆಎಂದರು.
ಜಿಲ್ಲಾಕಾಂಗ್ರೆಸ್‌ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಭದ್ರನ್ನವರ ಮಾತನಾಡಿ ಅವಳಿ ನಗರದಜನತೆರಬಕವಿ-ಮಹಿಷವಾಡಗಿ ಸೇತುವೆ ಮತ್ತುರಸ್ತೆ ನಿರ್ಮಾಣಕಾಮಗಾರಿಗೆ ಆಗ್ರಹಿಸಿ ಸತ್ಯಾಗ್ರಹಿಗಳಿಗೆ ಸಂಪೂರ್ಣ ಬೆಂಬಲಿಸಿದ್ದಾಗಿ ಹೇಳಿದರು. ಈ ಸಂದರ್ಭದಲ್ಲಿ ನೀಲಕಂಠ ಮುತ್ತೂರ, ಧರೆಪ್ಪ ಉಳ್ಳಾಗಡ್ಡಿ, ಬುದ್ದಪ್ಪ ಕುಂದಗೋಳ, ಗಜಾನನತೆಗ್ಗಿ, ಶಿವಾನಂದ ಬಾಗಲಕೋಟಮಠ, ಬಸವರಾಜಗುಡೋಡಗಿ, ರಾಹುಲ ಕಲಾಲ, ಶಿವಾನಂದ ಮಠದ, ಶ್ರೀಶೈಲ ದಲಾಲ, ಯುನೂಸ್ ಚೌಗಲಾ ಮೊದಲಾದವರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 