ಯಮಕನಮರಡಿ 15: ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಸೇವೆ ನೀಡುವ ದಿಸೆಯಲ್ಲಿ ತನ್ನದೆ ಆದ ಸ್ಥಾನ ಉಳಿಸಿಕೊಂಡ ವಿಜಯಾ ಬ್ಯಾಂಕ ಹಲವಾರು ಉತ್ತಮ ಸೇವೆಗಳನ್ನು ನೀಡುವುದರೊಂದಿಗೆ ಹೆಸರುವಾಸಿಯಾಗಿದೆ. ಆದರೆ ಗ್ರಾಮೀಣ ಪ್ರದೇಶದ ಹಲವು ಹಳ್ಳಿಗಳಿಗೆ ಪ್ರಮುಖ ಗ್ರಾಮವಾದ ಉಳ್ಳಾಗಡ್ಡಿ-ಖಾನಾಪೂರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಿಜಯಾ ಬ್ಯಾಂಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಸದುದ್ದೇಶದಿಂದ ಎಟಿಎಮ್, ಸ್ಥಾಪಿಸಿದ್ದು ಈ ಎಟಿಎಮ್, ಗ್ರಾಹಕರ ಸೇವೆಗೆ ಇದ್ದು ಇಲ್ಲದಂತಾಗಿದೆ. ಕಾರಣ ಎರಡನೇಯ ಶನಿವಾರ ಹಾಗೂ ರವಿವಾರ ಬ್ಯಾಂಕ ರಜೆ ದಿನಗಳಂದು ಈ ಶಾಖೆಯ ಎಟಿಎಮ್ ನಲ್ಲಿ ಹಣ ಬೇಕಾಗಿ ಬಂದ ಗ್ರಾಹಕರು ಎಟಿಎಮ್ ನಲ್ಲಿ ಹಣವಿಲ್ಲದೆ ಬಂದ ದಾರಿಗೆ ಸುಂಕವಿಲ್ಲ ಎಂದು ಬರಿಗೈಯಲ್ಲಿ ಮರಳಿ ಹೋಗುವ ಪರಿಸ್ಥಿತಿ ಅನಿವಾರ್ಯವಾಗಿದೆ. ಕಾರಣ ಬ್ಯಾಂಕ ರಜೆ ದಿನಗಳಲ್ಲಿ ಈ ಎಟಿಎಮ್ನಲ್ಲಿ ಹಣವನ್ನು ತೆಗೆಯಬೇಕೆಂದರೆ ಹರಸಾಹಸ ಮಾಡಬೇಕು ಇಲ್ಲಾ ಈ ಎಟಿಎಮ್ ಖಾಲಿಯಾಗಿರುವದರಿಂದ ಗ್ರಾಹಕರ ಸೇವೆಗಾಗಿ ಇರಬೇಕಾದ ಎಟಿಎಮ್ ಕೇವಲ ನಮ್ಮ ಬ್ಯಾಂಕಿನಲ್ಲೂ ಇದೆ ಎಂಬ ಕಾರಣಕ್ಕೆ ಕಾಟಾಚಾರಕ್ಕೆ ಸ್ಥಾಪಿಸಲಾಗಿದೆ ಎಂಬಂತಾಗಿದೆ. ಈ ಸಮಸ್ಯೆ ಹಲವು ದಿನಗಳಿಂದ ಇದ್ದು ಎಟಿಎಮ್ ಘಟಕಕ್ಕೆ ಪ್ರಾರಂಭದಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಆದರೆ ರಾತ್ರಿ ವೇಳೆಯಲ್ಲಿ ಈ ಬ್ಯಾಂಕಿನ ಎಟಿಎಮ್ಗೆ ಭದ್ರತಾ ಸಿಬ್ಬಂದಿ ಇಲ್ಲವಾದರಿಂದ ಮಿತವಾಗಿ ಹಣ ಹಾಕುವ ವಾಡಿಕೆ ಇದೆ.
ಗ್ರಾಹಕರ ಸೇವೆಗೆ ಹಲವು ವಿಧಗಳಲ್ಲಿ ಸವ್ಹಿಸ್ ಚಾರ್ಜ ಮಾಡುವ ಬ್ಯಾಂಕ ಗ್ರಾಹಕರಿಗೆ 24 ಗಂಟೆಗಳ ನಿರಂತರ ಸೇವೆಗಾಗಿ ನೀಡುವ ಉದ್ದೇಶದಿಂದ ಸ್ಥಾಪಿಸಿರುವ ಎಟಿಎಮ್ ರಜೆದಿನಗಳಲ್ಲಿಯೂ ಗ್ರಾಮೀಣ ಗ್ರಾಹಕರ ಸೇವೆಗೆ ಲಭ್ಯವಾಗಬೇಕಾಗಿದೆ. ಈ ಬಗ್ಗೆ ಗ್ರಾಹಕರೇ ಮೇಲಾಧಿಕಾರಿಗಳನ್ನು ಸಂಪಕರ್ಿಸಬೇಕಾದ ಅನಿವಾರ್ಯತೆ ಇದೆ ಎನ್ನುತ್ತಾರೆ ಗ್ರಾಮೀಣ ವಲಯದ ಗ್ರಾಹಕರು.
ಸ್ಥಳಿಯ ಶಾಖಾ ಪ್ರಬಂಧಕರು ಈ ಎಟಿಎಮ್ನಲ್ಲಿ ಅಗತ್ಯವಿರುವ ದಿನಗಳಲ್ಲಿ ಹಣ ಹಾಕುವ ವ್ಯವಸ್ಥೆಯನ್ನೆ ಮರೆತಂತಿದ್ದು ಈ ಎಟಿಎಮ್ ಬಗ್ಗೆ ಹಲವಾರು ಗ್ರಾಹಕರು ಸಮಸ್ಯೆಯನ್ನು ತಿಳಿಸಿದ್ದರು ಇತ್ತ ಯಾರು ಗಮನ ಹರಿಸುತ್ತಿಲ್ಲ ಎನ್ನುತ್ತಾರೆ ಗ್ರಾಹಕರು
ಎಟಿಎಮ್ ಸ್ಥಾಪಿಸಿದ್ದರು ಅದಕ್ಕೆ ತಗಲುವ ಬಾಡಿಗೆ ವಿದ್ಯುತ್, ಎಸಿ ಸೌಲಭ್ಯದ ಚಾರ್ಜಗಳು ಈ ಎಟಿಎಮ್ ಸೇವೆಗೆ ದುಬಾರಿಯಾದಂತಿವೆ.
ಉತ್ತಮ ಸೇವೆಗಾಗಿ ಹೆಸರುವಾಸಿಯಾದ ವಿಜಯಾ ಬ್ಯಾಂಕ ಸಣ್ಣ ಪುಟ್ಟ ಸಮಸ್ಯೆಗಳನ್ನು ಸರಿ ಪಡಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಮೇಲಾಧಿಕಾರಿಗಳು ಗಮನ ಹರಿಸಬೇಕೆಂದು ಬ್ಯಾಂಕಿನ ಗ್ರಾಹಕರು ಆಗ್ರಹಿಸಿದ್ದಾರೆ.
***** ಗ್ರಾಮೀಣ ಪ್ರದೇಶದಲ್ಲಿ ತನ್ನದೆ ಆದ ಉತ್ತಮ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿದ್ದ ವಿಜಯಾ *******
ಬ್ಯಾಂಕನ ಗ್ರಾಹಕರಿಗೆ 24 ಗಂಟೆಗಳ ಕಾಲ ಸೇವೆ ನೀಡಬೇಕು ಆದರೆ ರಜೆದಿನಗಳಲ್ಲಿ ಎಟಿಎಮ್ ನಲ್ಲಿ ಹಣ ಸಿಗದೆ ಹಲವಾರು ಗ್ರಾಹಕರು ಪರಿತಪಿಸುವಂತಾಗಿದೆ. ಈ ಬಗ್ಗೆ ಬ್ಯಾಂಕಿನ ಮೇಲಾಧೀಕಾರಿಗಳು ಗಮನ ಹರಿಸಬೇಕಾಗಿದೆ.
**** ರಾಜು ಸ ಅವಟೆ, [ಪಿಕೆಪಿಎಸ್ ನಿದರ್ೆಶಕರು, ಉಳ್ಳಾಗಡ್ಡಿ-ಖಾನಾಪೂರ]
ವಿಜಯಾ ಬ್ಯಾಂಕಿನ ಎಟಿಎಮ್ ನೋಡಿದಾಗೊಮ್ಮೆ ಖಾಲಿಯಾಗಿರುತ್ತದೆ. ಎಟಿಎಮ್ ಇದ್ದು-ಇಲ್ಲದಂತಾಗಿದೆ.
[ಬ್ಯಾಂಕ ಗ್ರಾಹಕರು]