ವೆನೆಜುವೆಲಾದ ಮೇಲೆ ಅಮೆರಿಕದ ಆಕ್ರಮಣ - ತಕ್ಷಣವೇ ನಿಲ್ಲಿಸಬೇಕೆಂದು ಸಿಪಿಐ(ಎಂ) ಆಗ್ರಹ
US invasion of Venezuela - CPI(M) demands immediate halt
ಗಜೇಂದ್ರಗಡ 04: ವೆನೆಜುವೆಲಾದ ವಿವಿಧ ಸ್ಥಳಗಳ ಮೇಲೆ ಬಾಂಬ್ ದಾಳಿ ನಡೆಸುವ ಮೂಲಕ ಯುಎಸ್ ವೆನೆಜುವೆಲಾದ ಮೇಲೆ ಆಕ್ರಮಣದ ನಿರ್ಲಜ್ಜ ಕೃತ್ಯವನ್ನು ಎಸಗಿದೆ, ಇದನ್ನು ಬಲವಾಗಿ ಖಂಡಿಸುವುದಾಗಿ ಸಿಪಿಐ(ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ತಿಳಿಸಿದರು. ನಗರದ ಕೆ.ಕೆ.ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸವಾದಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಕಳೆದ ಕೆಲವು ವಾರಗಳಿಂದ ಯುಎಸ್ ವೆನೆಜುವೆಲಾದಲ್ಲಿ ಆಳ್ವಿಕೆ ಬದಲಾವಣೆಯನ್ನು ಬಲವಂತವಾಗಿ ತರಲು ಅದರ ಸುತ್ತಲೂತನ್ನ ಮಿಲಿಟರಿ ಮತ್ತು ನೌಕಾ ಪಡೆಗಳನ್ನು ಸಜ್ಜುಗೊಳಿಸಿದೆ.
ಇದು ಡಿಸೆಂಬರ್ 2025 ರ ಮೊದಲ ವಾರದಲ್ಲಿ ಪ್ರಕಟಿಸಲಾದ ಯುಎ ರಾಷ್ಟ್ರೀಯ ಭದ್ರತಾ ರಣನೀತಿ, 2025 ರ ನಿಜವಾದ ಮುಖ. ಪಶ್ಚಿಮ ಗೋಳಾರ್ಧದಲ್ಲಿ ಅಮೆರಿಕದ ಪಡೆಗಳನ್ನು ಕೂಡಹಾಕಿರುವುದು ಮತ್ತುಇಡೀ ಪ್ರದೇಶವನ್ನುತನ್ನ ನಿಯಂತ್ರಣಕೆ ್ಕತರುವ ಆಶಯದ ಬಹಿರಂಗ ಘೋಷಣೆಯು ಮನ್ರೋ ಸಿದ್ಧಾಂತಕ್ಕೆ ಟ್ರಂಪ್ ಉಪಪ್ರಮೇಯ ಎಂದು ಟೀಕಿಸಿದರು. ಮಾಜಿ ಪುರಸಭೆ ಸದಸ್ಯ ಸಿಪಿಐಎಂ ಮುಖಂಡ ಎಂ.ಎಸ್.ಹಡಪದ ಮಾತನಾಡಿ ಯುಎ??? ಆಕ್ರಮಣವನ್ನು ತಕ್ಷಣವೇ ಕೊನೆಗೊಳಿಸಬೇಕು ಮತ್ತು ಕೆರಿಬಿಯನ್ ಸಮುದ್ರದಿಂದ ಅದು ತನ್ನ ಎಲ್ಲಾ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು ಮತ್ತು ಅಮೆರಿಕವು ಸಾರ್ವಭೌಮ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡಲು ಬಿಡಬಾರದು ಎಂದರು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಯುಎ ಆಕ್ರಮಣವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಬೇಕು ಮತ್ತು .ವೆನೆಜುವೆಲಾದ ಮೇಲಿನ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ಯುಎ ಮೇಲೆ ಅಂತರರಾಷ್ಟ್ರೀಯ ಒತ್ತಡವನ್ನು ಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಚಂದ್ರುರಾಠೋಡ, ಅನಿಲ್ ಆರ್, ಈಶ್ವರ ಗುಡ್ಡದ ದೇವಲಾಪೂರ, ಎಮ್‌ಎಸ್ ಹಡಪದ, ರೇಣಪ್ಪಕಲ್ಗುಡಿ, ಚನ್ನಪ್ಪಗೂಗಲೋತ್ತರ, ಪೀರುರಾಠೋಡ, ಬಾಲು ರಾಠೋಡ, ಅಭಿಲಾಷರಾಠೋಡ, ಗುರುಕೀರಣ ಜೀಗೆರಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 