ಭಾರತಕ್ಕೆ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್ಗಳ ಮಾರಾಟಕ್ಕೆ ಅಮೆರಿಕ ಸಮ್ಮತಿ



ವಾಷಿಂಗ್ಟನ್, ಏ.3-ಭಾರತಕ್ಕೆ 2.4 ಶತಕೋಟಿ ಡಾಲರ್ ಮೌಲ್ಯದ 24 ಬಹು ಪಾತ್ರದ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕ್ಯಾಪ್ಟ್ರ್ ಗಳ ನ್ನು ಮಾರಾಟ ಮಾಡಲು ಅಮೆರಿಕ ಸಮ್ಮತಿ ನೀಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ವೈರಿಗಳ ಜಲಅಂತರ ಗಾಮಿ (ಸಬ್ಮರೀನ್) ಧ್ವಂಸ ಮಾಡುವ ಅಗಾಧ ಸಾಮಥ್ರ್ಯದ ಈ ಯುದ್ದ ಹೆಲಿಕಾಪ್ಟರ್ಗಳಿಗಾಗಿ ಭಾರತವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಪ್ರಯತ್ನಿಸಿತ್ತು. 

ಸಬ್ಮರೀನ್ಗಳನ್ನು ಬೇಟೆಯಾಡಲು ಮತ್ತು ಸಮರನೌಕೆಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಿರುವ ರೋಮಿಯೋ ಸೀಹಾಕ್ ಹೆಲಿಕಾಪ್ಟರ್ಗಳನ್ನು ಸಮುದ್ರದಲ್ಲಿ ಶೋಧ ಮತ್ತು ರಕ್ಷಣಾ ಕಾಯರ್ಾಚರಣೆಗಳಿಗೆ ಬಳಸಬಹುದಾಗಿದೆ.

ಲಾಕ್ಹೀಡ್ ಮಾಟರ್ಿನ್ ಸಂಸ್ಥೆ ತಯಾರಿಸಿರುವ ಬಹು ಪಾತ್ರ ನಿರ್ವಹಿಸುವ ಈ ಹೆಲಿಕ್ಯಾಪ್ಟ್ರ್ ಗಳ ನ್ನು ಭಾರತದ ಹಳೆಯ ಬ್ರಿಟೀಷ್ ತಯಾರಿಕೆಯ ಸೀಕಿಂಗ್ ಹೆಲಿಕ್ಯಾಪ್ಟ್ರ್ ಗಳ ನ್ನು ಮೂಲೆಗುಂಪು ಮಾಡಲಿದೆ.

-ಭಾರತಕ್ಕೆ 2.4 ಶತಕೋಟಿ ಡಾಲರ್ ಮೌಲ್ಯದ 24 ಬಹು ಪಾತ್ರದ ಎಂಎಚ್-60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್ಗಳನ್ನು ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿಸಿದ್ದಾರೆ.

ಇದರಿಂದ ಭಾರತೀಯ ವಾಯುಪಡೆ ಮತ್ತು ನೌಕಾದಳದ ಸಾಮಥ್ರ್ಯ ಮತ್ತಷ್ಟು ಹೆಚ್ಚಾಗಲಿದೆ.