ಸಿಡ್ನಿ, 10
ಆಸ್ಟ್ರೇಲಿಯದಲ್ಲಿ ಕಳೆದ 45 ದಿನಗಳಿಂದ ಹಬ್ಬಿ,
ವ್ಯಾಪಿಸಿರುವ ಬೃಹತ್ ಕಾಡ್ಗಿಚ್ಚಿಗೆ ಎರಡು ಸಾವಿರಕ್ಕೂ ಹೆಚ್ಚು ಕೋಲಾ ಕರಡಿಗಳು ಆಹುತಿಯಾಗಿವೆ ಎಂದು ಆಸ್ಟ್ರೇಲಿಯಾದ ಪರಿಸರ ತಜ್ಞ ಡೇಲನ್ ಪಫ್ ಹೇಳಿದ್ದಾರೆ.ವಿಶ್ವದಲ್ಲೇ ಕೋಲಾ ಕರಡಿಗಳು ಅಪಾಯದಂಚಿನಲ್ಲಿರುವ ಪ್ರಾಣಿ ಪ್ರಭೇದ ಎಂದು ಘೋಷಿಣೆ ಮಾಡಲಾಗಿದೆ.
ಈಪ್ರದೇಶದಲ್ಲಿ ಸುಮಾರು 8,400 ಕೋಲಾ ಕರಡಿಗಳು ಇದ್ದು, ಆ ಪೈಕಿ ಸುಮಾರು 25 ಶೇಕಡ ಪ್ರಾಣಿಗಳು ಇತ್ತೀಚಿನ ಬೆಂಕಿ ದುರಂತದಲ್ಲಿ ಮೃತಪಟ್ಟಿವೆ ಎಂದು ಅವರು ಮಾಧಮಗಳಿಗೆ ತಿಳಿಸಿದ್ದಾರೆ