ಟು ವ್ಹಿಲರ ಮೆಕ್ಯಾನಿಕಲ್ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೊತ್ಸವ
Two Wheeler Mechanical Welfare Development Association's Anniversary Celebration
ಜಮಖಂಡಿ 12: ಮನುಷ್ಯನ ಆರೋಗ್ಯ ತಪ್ಪಿದಾಗ ಹೇಗೆ ವೈದ್ಯರು ಸರಿ ಪಡಿಸುತ್ತಾರೋ ಹಾಗೆ ಮೆಕ್ಯಾನಿಕ್‌ಗಳು ವಾಹನಗಳನ್ನು ಸರಿಪಡಿಸಿ, ಸುವ್ಯವಸ್ಥೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು ಹೇಳಿದರು.
ನಗರದ ಬಸವಭವನದಲ್ಲಿ ನಡೆದ ಟು ವ್ಹಿಲರ ಮೆಕ್ಯಾನಿಕಲ್ ಕ್ಷೇಮಾಭಿವೃದ್ಧಿ ಸಂಘದ ನಾಲ್ಕನೇ ವಾರ್ಷಿಕೊತ್ಸವದ ಸಾನಿಧ್ಯ ವಹಿಸಿ ಮಾತನಾಡಿದ ಅವರು. ಪ್ರತಿಯೊಬ್ಬರು ವಾಹನ ಹೊಂದಿದ್ದಾರೆ ಆದ್ದರಿಂದ ಮೆಕ್ಯಾನಿಕ್‌ಗಳು ಅವಶ್ಯವಾಗಿಬೇಕು, ಸಮಾಜಕ್ಕೆ ನಿಮ್ಮ ಸೇವೆ ಅತ್ಯಂತ ಉಪಯುಕ್ತವಾಗಿದೆ. ಎಲ್ಲರೂ ಒಗ್ಗಟ್ಟಾಗಿ ಸಂಘ ಸ್ಥಾಪಿಸಿಕೊಂಡಿರುವದು ಒಂದು ಸಾಧನೆ ಇದ್ದಂತೆ ಯಾವುದೇ ಕೆಲಸವನ್ನಾಗಲಿ ಶ್ರದ್ಧೆಯಿಂದ ಮಾಡಬೇಕು, ಮಾಡುವ ಕೆಲಸದಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ನಿಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸಬೇಕು ಎಂದರು.
ಕಾರ್ಮಿಕ ಇಲಾಖೆಯ ಅಧಿಕಾರಿ ರಮೇಶ ವಂಗಿ ಮಾತನಾಡಿ. ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಶೇ.92 ರಷ್ಟಿದೆ. ಅತಿ ಹೆಚ್ಚಿನ ಕಾರ್ಮಿಕರು ಇರುವದನ್ನು ಗಮನಿಸಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸೌಲಭ್ಯ ಪಡೆದು ಕೊಳ್ಳಲು ಇಲಾಖೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು, ವಿಮಾಯೋಜನೆ, ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಆರ್ಥಿಕ ಸಹಾಯ, ಸಹಜ ಮರಣವಾದಲ್ಲಿ 25 ಸಾವಿರದ ಆರ್ಧಿಕ ನೆರವು, ಅಪಘಾತದಲ್ಲಿ ಮರಣವಾದರೆ 5 ಲಕ್ಷದ ಆರ್ಥಿಕ ಸಹಾಯ, ಗಂಭೀರಗಾಯ ಗೊಂಡವರಿಗೆ 2 ಲಕ್ಷರೂ ಗಳ ಪರಿಹಾರ ಹಾಗೂ ಚಿಕಿತ್ಸೆಗಾಗಿ 50 ಸಾವಿರದಿಂದ 1 ಲಕ್ಷರೂಗಳ ವರೆಗೆ ಇಲಾಖೆಯಿಂದ ಆರ್ಥಿಕ ಸಹಾಯ ಪಡೆದುಕೊಳ್ಳ ಬಹುದಾಗಿದೆ. ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆಯ ಬಹುದಾಗಿದೆ ಎಂದರು.
ಆರ್.ಪಿ.ಪಳಕೆ ಪ್ರಾರ್ಥಿಸಿದರು, ಸಂಘದ ಅಧ್ಯಕ್ಷ ಮೆಹಬೂಬ ಜನವಾಡ ಪ್ರಾಸ್ತಾವಿಕ ಮಾತನಾಡಿದರು, ಆರ್‌ಟಿಓ ಇಲಾಖೆಯ ಇನ್ಸಪೆಕ್ಟರ್ ಭಾಗ್ಯಶ್ರೀ ಕಟ್ಟಿಮನಿ, ಬೆಂಗಳೂರಿನ ನಾಗೇಶ ಅವರು ಮಾತನಾಡಿದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆಣ್ಣವರ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಅನ್ವರ ಮೋಮಿನ, ನಗರಸಭೆ ಸದಸ್ಯ ದಿಲಾವರ ಶಿರೋಳ, ಹುಬ್ಬಳ್ಳಿಯ ಮಂಜುನಾಥ ಕೊಟೇಶ್ವರ, ಉಪಾಧ್ಯಕ್ಷ ಬಸವರಾಜ ತೇಲಿ, ವೇದಿಕೆಯಲ್ಲಿದ್ದರು. ಸಂಘದ ಪದಾಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 