ಇಬ್ರಾಹಿಂ ಸಾಬ್ ಬಿಸರಳ್ಳಿ, ಹೊನ್ನೂರು ಸಾಬ್ ಬೈರಾಪುರ ರಿಗೆ ಸನ್ಮಾನ
Tributes to Ibrahim Saab Bisaralli and Honnur Saab Bairapur
ಭಾಗ್ಯನಗರ 12 : ಪಟ್ಟಣ ಪಂಚಾಯತ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹೊನ್ನೂರು ಸಾಬ್ ಬೈರಾಪುರ ಹಾಗೂ ವಕೀಲರಾಗಿ 27 ವರ್ಷಗಳನ್ನು ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಸಾಬ್ ಬಿಸರಳ್ಳಿ ಇವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ , ಸತತವಾಗಿ ಮೂರು ಸಲ ಸದಸ್ಯರಾಗಿ ಆಯ್ಕೆಯಾಗಿರುವ ಬೈರಾಪುರ ಪ್ರಸ್ತುತ ಪಟ್ಟಣ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾಗ್ಯನಗರದ ಪಟ್ಟಣ ಪಂಚಾಯತ್ ಹಂಗಾಮಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಹಾಗೂ ವಕೀಲರಾಗಿ 27 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿರುವ ಭಾಗ್ಯನಗರ ಜಾಮಿಯಾ ಮಸೀದಿ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂಸಾಬ್ ಬಿಸರಳ್ಳಿ ಇವರಿಗೆ ಭಾಗ್ಯನಗರದ ಮುಸ್ಲಿಂ ಬಾಂಧವರ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿಉಪಾಧ್ಯಕ್ಷ ಮೌಲಾಹುಸೇನ ಹಣಗಿ, ಮೆಹಬೂಬಸಾಬ ಬಳಿಗಾರ, ರಶೀದ್ಸಾಬ್, ಹಾಜಿ ಕುತ್ಬುದ್ದೀನಸಾಬ್, ಬಾಬಾ ಪಟೇಲ್, ಶರೀಫಸಾಬ ಪಿಂಜಾರ, ಮೆಹಬೂಬ ಹಣಗಿ, ಮರ್ದಾನಸಾಬ ಹಿರೆಮಸೂತಿ, ನೂರಬಾಷಾ , ಕಬೀರಸಾಬ ಬೈರಾಪೂರ, ಅಮೀನ್ ಸಾಬ್ ಸೂಡಿ, ಮಹ್ಮದ್ ಸಾಬ್ ಬೈರಾಪುರ ಹಾಗೂ ಮೆಹಬೂಬಸಾಬ ಕೊತ್ವಾಲ, ಶಾಕೀರ್ ನದಾಪ, ಹಾಜಿ ಅತ್ತಾರ ಸಾಬ್, ಮಹ್ಮದ್ ರಫಿ ಬೈರಾಪೂರ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 