ನೇತಾಜಿ ಸುಭಾಸ ಚಂದ್ರ ಭೋಸ್ ಅವರ ಭಾವಚಿತ್ರಕ್ಕೆ ನಮನ
Tribute to the portrait of Netaji Subhas Chandra Bose
ಹಾವೇರಿ 23 : ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ(ರಿ)ವತಿಯಿಂದ ನೇತಾಜಿ ಸುಭಾಷ ಚಂದ್ರ ಭೋಸ್ ಅವರ ಜಯಂತಿಯನ್ನು ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ನೇತಾಜಿ ಸುಭಾಸ ಚಂದ್ರ ಭೋಸ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರು ಮಾತನಾಡಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಿಟ್ಟ ವೀರನಾಗಿ ಕೆಚ್ಚೆದೆಯ ಹೋರಾಟ ಮಾಡುತ್ತಾ ಭಾರತ ಮಾತೆಯನ್ನು ಬ್ರಿಟಿಷರಿಂದ ಮುಕ್ತ ಮಾಡಲು ನಿರಂತರವಾಗಿ ಸುಭಾಷ್ ಚಂದ್ರ ಭೋಸ್ ಅವರು ಹೋರಾಟ ಮಾಡಿದ್ದಾರೆ.ಭಾರತೀಯ ರಾಷ್ಟ್ರೀಯ ಸೇನೆಯ ಮೂಲಕ ಯುವಕರನ್ನು ಭಾರತ ಮಾತೆಯ ಸೇವೆ ಮಾಡಲು ಪ್ರೇರೆಪಿಸಿದರು.
ರಾಷ್ಟ್ರ ನಿರ್ಮಾಣ ಮಾಡುವ ಇವರ ಪ್ರಯತ್ನ ಎಲ್ಲರನ್ನು ಬೆರಗುಗೊಳಿಸುವಂತದಾಗಿದೆ.ವಿದ್ಯಾರ್ಥಿಗಳು ಹಾಗೂ ಯುವಕರು ಸುಭಾಷ ಚಂದ್ರ ಭೋಸ್ ಅವರ ಜೀವನ ಪುಸ್ತಕಗಳನ್ನು ಓದುವ ಮೂಲಕ ದೇಶಪ್ರೇಮ ಬೆಳಿಸಿಕೊಳ್ಳಬೇಕು.ಭೋಸ್ ಅವರ ದೇಶಪ್ರೇಮ ಎಲ್ಲರಿಗೂ ಮಾದರಿಯಾಗಿದ್ದು,ಅವರ ಜೀವನದ ಹೋರಾಟ ನಮಗೆ ಸ್ಪೂರ್ತಿಯಾಗಲಿ ಎಂದು ಉಡಡಪ್ಪ ಮಾಳಗಿ ಹೇಳಿದರು.
ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ,ಮಖಬೂಲ್ ಎಂ.ಕೆ.ಶೆಟ್ಟಿ ವಿಭೂತಿ, ಮಾಲತೇಶ ಯಲ್ಲಾಪುರ,ಸುಭಾಸ ಚವ್ಹಾಣ,ಗದಿಗೆಪ್ಪಗೌಡ ನೆಲೂಗಲ್,ಮೃತ್ಯಂಜಯ್ಯ ಮುಷ್ಠಿ,ಮರಿಯಪ್ಪ ನಡುವಿನಮನಿ,ಜಗದೀಶ ಹರಿಜನ,ರವಿ ದಂಡಿನ ಸೇರಿದಂತೆ ವಿವಿಧ ಸಂಘಟನೆಯ ಮುಖಂಡರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 