ಕೊಪ್ಪಳ ಪ್ರಾಧಿಕಾರದ ನೂತನ ಅಧ್ಯಕ್ಷ ಶ್ರೀನಿವಾಸ ಗುಪ್ತಾರರಿಗೆ ಸನ್ಮಾನ
Tribute to the new Chairman of Koppal Authority Srinivasa Guptar
ಕೊಪ್ಪಳ ಪ್ರಾಧಿಕಾರದ ನೂತನ ಅಧ್ಯಕ್ಷ ಶ್ರೀನಿವಾಸ ಗುಪ್ತಾರರಿಗೆ ಸನ್ಮಾನ
ಭಾಗ್ಯನಗರ 03: ದಿನಾಂಕ 03-01-2025 ಶುಕ್ರವಾರ ರಂದು ಬೆಳಿಗ್ಗೆ 11-00ಕ್ಕೆ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ, ಭಾಗ್ಯನಗರ ಜಿ. ಕೊಪ್ಪಳ ಸಂಸ್ಥೆಯ ನಿರ್ದೆಶಕರಾದ ಶ್ರೀನಿವಾಸ ಗುಪ್ತಾರವರು ಕೊಪ್ಪಳ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರಿಗೆ ನಮ್ಮ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಈ ಸನ್ಮಾನ ಸಮಾರಂಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವಸದಸ್ಯರು ಭಾಗವಹಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಅವರು ಸನ್ಮಾನಿತರಾದ ಶ್ರೀನಿವಾಸ ಗುಪ್ತಾ ಅವರ ಬಗ್ಗೆ ಪ್ರಾಸ್ತಾವಿಕತೆಯನ್ನು ನೆರವೇರಿಸಿ ಸಂಸ್ಥೆಗೆ ಕೊಡಮಾಡಿದ ಸಹಾಯ ಹಸ್ತದ ಬಗ್ಗೆ ಪುನರುಚ್ಛರಿಸಿದರು. ಹಾಗೆ ಸನ್ಮಾನಿತರ ಪರಿಚಯವನ್ನು ನಿರ್ದೆಶಕರಾದ ಹೆಚ್.ಕೆ ನಿರಂಜನ ಸಂಕ್ಷಿಪ್ತವಾಗಿ ಅವರ ಸಾಧನೆಯ ಪಕ್ಷಿನೋಟವನ್ನು ನೆರವೇರಿಸಿದರು. ನಂತರ ಸನ್ಮಾನಿತಗೊಂಡ ಶ್ರೀನಿವಾಸ ಗುಪ್ತಾ ಅವರು ಸಂಸ್ಥೆಯ ಶ್ರೇಯೊಭಿವೃದ್ಧಿಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ, ಉಪಾಧ್ಯಕ್ಷರಾದ ಉಮಾಕಾಂತಸಾ ಕಠಾರೆ, ಕಾರ್ಯದರ್ಶಿಗಳಾದ ಸತೀಷ ಮೇಘರಾಜ, ಖಜಾಂಚಿಗಳಾದ ಉಮೇಶ ಕಬ್ಬೇರ, ನಿರ್ದೇಶಕರಾದ ಪೆದ್ದಸುಬ್ಬಯ್ಯ, ಜವಾಹರಲಾಲಸಾ ಅಂಟಾಳಮರದ, ಲಕ್ಷ್ಮಣಸಾ ನಾರಾಯಣಸಾ ನಿರಂಜನ, ಹನುಂತಸಾ ನಿರಂಜನ, ಸುರೇಶ ಪೆದ್ದಿ, ಕೃಷ್ಣ ಕಬೇರ, ಮಾರುತಿ ಮೆಘರಾಜ ಉಪಸ್ಥಿತರಿದ್ದರು, ಕೊನೆಗೆ ವಂದನಾರೆ್ಣಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 