ಶಿರೋಳ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುರೇಶ ಪಾಟೀಲರಿಗೆ ಸನ್ಮಾನ
Tribute to Suresh Patil, who retired after serving at the Shirola factory
ಲೋಕದರ್ಶನ ವರದಿ
ಕಾಗವಾಡ 20 : ತಾಲೂಕಿನ ಮಂಗಾವತಿ ಗ್ರಾಮದ ಸುಪುತ್ರರಾದ ಸುರೇಶ ಜಗ್ಗೌಡ ಪಾಟೀಲ ಇವರು ಮಹಾರಾಷ್ಟ್ರದ ಶಿರೋಳ ತಾಲೂಕಿನ ಶಿರೋಳ ಪಟ್ಟಣದ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಳೆದ 15 ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಇತ್ತಿಚಿಗೆ ನಿವೃತ್ತರಾಗಿದ್ದು, ಅವರನ್ನು ಶಿರಗುಪ್ಪಿಯ ಹೆಸರಾಂತ ದಂತ ವೈದ್ಯರು, ಅಮೋಲ್ ಜನಕಲ್ಯಾಣ ಪ್ರತಿಷ್ಠಾನ ಸ್ಥಾಪಿಸಿ, ಜನರಿಗೆ ಸಾಮಾಜಿಕ ಸೇವೆ ನೀಡುತ್ತಿರುವ ಡಾಕ್ಟರ್ ಅಮೋಲ್ ಸರಡೆ ಅವರು ಸನ್ಮಾನಿಸಿ, ಅವರ ನಿವೃತ್ತ ಜೀವನಕ್ಕೆ ಶುಭ ಕೋರಿದ್ದಾರೆ.
ಈ ವೇಳೆ ಡಾ. ಅಮೋಲ್ ಸರಡೆ ಮಾತನಾಡಿ, ಮಂಗಾವತಿ ಗ್ರಾಮದ ಸುಪುತ್ರರು, ಹಿತೈಷಿಗಳು, ಆತ್ಮೀಯರಾದ ಸುರೇಶ ಪಾಟೀಲ ಅವರು ಶಿರೋಳ್‌ನ ದತ್ತ ಸಹಕಾರಿ ಸಕ್ಕರೆ ಕಾರ್ಖಾನೆಯ ಸಕ್ಕರೆ ವಿಭಾಗದಲ್ಲಿ ಸುಮಾರು 15 ವರ್ಷಗಳ ವರೆಗೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸಿ, ನಿವೃತ್ತರಾದ ಪ್ರಯುಕ್ತ ನಮ್ಮ ಶಿರಗುಪ್ಪಿಯ ಅಮೋಲ ಜನಕಲ್ಯಾಣ ಪ್ರತಿಷ್ಠಾನದ ವತಿಯಿಂದ ಅವರನ್ನು ಹೃದಯ ಪೂರ್ವಕವಾಗಿ ಸನ್ಮಾನಿಸಿದ್ದೇವೆ. ದೇವರು ಅವರಿಗೆ ಆಯುರಾರೋಗ್ಯ ಭಾಗ್ಯ ಕರುಣಿಸಲಿ, ಅವರ ನಿವೃತ್ತಿ ಜೀವನ ಸುಖಕರವಾಗಲಿ ಎಂದು ಹಾರೈಸುತ್ತೇವೆ ಎಂದರು.
ಇನ್ನೂ ಸನ್ಮಾನ ಸ್ವೀಕರಿಸಿದ ಸುರೇಶ್ ಪಾಟೀಲ್ ಮಾತನಾಡಿ, ನನ್ನನ್ನು ಸನ್ಮಾನಿಸಿ, ಶುಭಾಶಯ ಕೋರಿದ ಡಾಕ್ಟರ್ ಅಮೋಲ್ ಸರಡೆ ಅವರಿಗೂ ಅಮೋಲ್ ಜನಕಲ್ಯಾಣ ಪ್ರತಿಷ್ಠಾನದ ಎಲ್ಲ ಪದಾಧಿಕಾರಿಗಳಿಗೂ ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು. ಈ ವೇಳೆ ಮುಖಂಡರಾದ ಶೇಖರ ಪಾಟೀಲ, ಲಕ್ಷ್ಮಣ ಗುಂಜಾಳೆ, ಕಾಡಗೊಂಡ ಪಾಟೀಲ, ರಾಜಗೊಂಡ ಪಾಟೀಲ, ದೀಲೀಪ ಪಾಟೀಲ, ದಾದಗೊಂಡ ಪಾಟೀಲ ಸತೀಶ ಬೆಕ್ಕೇರಿ, ಅನೀಲ ಸುಂಠೆ, ನಂದು ಪಾಟೀಲ, ಸಿದಗೊಂಡ ಪಾಟೀಲ, ಅನೀಲ ಘಟಗೆ, ಗೀರೀಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 