ಪಿಕಾರ್ಡ ಬ್ಯಾಂಕ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಅವರಿಗೆ ಸನ್ಮಾನ ಗೌರವ

Tribute to Sahebagowda Utnala, Vice President, Picarda Bank

ಪಿಕಾರ್ಡ ಬ್ಯಾಂಕ ಉಪಾದ್ಯಕ್ಷ ಸಾಹೇಬಗೌಡ ಉತ್ನಾಳ ಅವರಿಗೆ ಸನ್ಮಾನ ಗೌರವ 

ಸಿಂದಗಿ,27 ; ಬಹುದಿನಗಳಿಂದ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಹಿನ್ನಲೆಯಲ್ಲಿ ಇಂದು ಪಿಕಾರ್ಡ ಬ್ಯಾಂಕನ ಉಪಾದ್ಯಕ್ಷರಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಅವರಿಗೆ ಇನ್ನೂ ಹೆಚ್ಚಿನ ಹುದ್ದೆಗಳು ಲಭಿಸಲಿ ಎಂದು ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿ ಸದಸ್ಯ ನಿವೃತ್ತ ಕೃಷಿ ಅಧಿಕಾರಿ ವ್ಹಿ.ಬಿ.ಕುರುಡೆ ಹೇಳಿದರು. 

     ಬಾಗೇವಾಡಿಯ ಪಿಕಾರ್ಡ ಬ್ಯಾಂಕ ಉಪಾದ್ಯಕ್ಷರಾಗಿ ಹಿನ್ನಲೆಯಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. 

       ಸನ್ಮಾನ ಸ್ವೀಕರಿಸಿದ ಪಿಕಾರ್ಡ ಬ್ಯಾಂಕ ಉಪಾದ್ಯಕ್ಷರಾದ ಬೈರೊಡಗಿಯ ಸಾಹೇಬಗೌಡ ಉತ್ನಾಳ ಮಾತನಾಡಿ, ಹಲವಾರು ವರ್ಷಗಳಿಂದ ಶಾಸಕ ರಾಜುಗೌಡ ಪಾಟೀಲ ಅವರ ಕಟ್ಟಾಭಿಮಾನಿಯಾಗಿ ಕಾರ್ಯನಿರ್ವಹಿಸಿದ ಹಿನ್ನಲೆಯಲ್ಲಿ ಪಿಎಲ್‌ಡಿ ಬ್ಯಾಂಕಿನ ಉಪಾದ್ಯಕ್ಷರಾಗಿ ಆಯ್ಕೆ ಮಾಡಿದ ನನಗೆ ಇನ್ನೂ ತಾಲೂಕಿನಲ್ಲಿ ಸಕ್ರೀಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟಿದ್ದ ಶಾಸಕರಿಗೆ ಹಾಗೂ ನನ್ನ ಅಭಿಮಾನಿಗಳಿಗೆ ಅಭಿನಂದನೆಗಳು ಸಲ್ಲಿಸಿದರು. 

      ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಅಧಿಕಾರ ಎನ್ನುವುದು ಮುಳ್ಳಿನ ಹಾಸಿಗೆ ಇದ್ದಂತೆ ಬಟ್ಟೆ ಮುಳ್ಳಿನ ಮೇಲೆ ಬಿದ್ದರು ಹರಿಯುತ್ತದೆ ಬಟ್ಟೆಯ ಮೇಲೆ ಮುಳ್ಳು ಬಿದ್ದರು ಕೂಡಾ ಹರಿಯುತ್ತದೆ ಅದಕ್ಕೆ ಅಧಿಕಾರ ವಿದ್ದಾಗ ಪರೋಕಾರಿ ಕಾರ್ಯ ಮಾಡಿದ್ದಾಗ ಮಾತ್ರ ಹುದ್ದೆ ಅಲಂಕರಿಸಿದ್ದಕ್ಕೂ ಸಾರ್ಥಕವಾಗುತ್ತದೆ ಕಾರಣ ನಿಮ್ಮ ಆಯ್ಕೆ ಸಹಕರಿಸಿದ ಶಾಸಕರಿಗೆ ಚ್ಯೂತಿ ಬಾರದಂತೆ ನಡೆದುಕೊಳ್ಳಿ ಎಂದು ಸಲಹೆ ನೀಡಿದರು. 

       ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ಉದ್ದಿಮೆದಾರ ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಶಂಕರಗೌಡ ಬಿರಾದಾರ, ಶಿವು ಉತ್ನಾಳ, ಸೇರಿದಂತೆ ಹಲವರು ಇದ್ದರು.