33 ವರ್ಷಗಳ ಸೇವೆ ನಂತರ ನಿವೃತ್ತಿ ಹೊಂದಿದ ಪ್ರೊ. ಅನೀಲಕುಮಾರ್ ಪತ್ತಾರ್ಗೆ ಸನ್ಮಾನ

33 ವರ್ಷಗಳ ಸೇವೆ ನಂತರ ನಿವೃತ್ತಿ ಹೊಂದಿದ ಪ್ರೊ. ಅನೀಲಕುಮಾರ್ ಪತ್ತಾರ್ಗೆ ಸನ್ಮಾನ  Tribute to Prof. Anil Kumar Pattar, who retired after 33 years of service

ಲೋಕದರ್ಶನ ವರದಿ 

ಮುಧೋಳ 01 : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಹಾಗೂ ವಿಭಾಗ ಮುಖ್ಯಸ್ಥರಾಗಿದ್ದ ಪ್ರೊ. ಅನೀಲಕುಮಾರ್ ಪತ್ತಾರ್ ಅವರು 33 ವರ್ಷಗಳ ಸುದೀರ್ಘ ಸೇವೆ ಪೂರ್ಣಗೊಳಿಸಿ ಜೂನ್ 30ರಂದು ನಿವೃತ್ತರಾದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಗೌರವ ಸಮಾರಂಭವನ್ನು ಆಯೋಜಿಸಲಾಯಿತು.  

ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಪ್ರಾಂಶುಪಾಲ ಡಾ. ಎಂ. ಆರ್‌. ಜರಕುಂಟೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೊ. ಪತ್ತಾರ್ ಅವರ ಸೇವೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ ಎಂದು ಪ್ರಶಂಸಿಸಿದರು. ಅವರ ನಿಷ್ಠೆ, ಶಿಸ್ತು ಹಾಗೂ ಸಮರ​‍್ಿತ ಸೇವೆ ಸಂಸ್ಥೆಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.  

ಈ ಸಂದರ್ಭದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಅನೀಲಕುಮಾರ್ ಪತ್ತಾರ್ ಅವರನ್ನು ಸನ್ಮಾನಿಸಲಾಯಿತು. ಅವರು ತಮ್ಮ ನಿವೃತ್ತಿ ಭಾಷಣದಲ್ಲಿ ಕಾಲೇಜಿನಲ್ಲಿ ಕಳೆದ ಮೂರು ದಶಕಗಳ ಅನುಭವಗಳನ್ನು ಸ್ಮರಿಸಿ, ವಿದ್ಯಾರ್ಥಿಗಳ ಯಶಸ್ಸೇ ತಮ್ಮ ಜೀವನದ ಅತ್ಯಂತ ದೊಡ್ಡ ಸಾಧನೆ ಎಂದು ಹೇಳಿದರು. ತಮ್ಮ ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕಾಲೇಜು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.  

ಸಮಾರಂಭದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಾವಪೂರ್ಣ ವಿದಾಯ ಹಾಗೂ ಶುಭಾಶಯಗಳೊಂದಿಗೆ ನಿವೃತ್ತಿ ಸಮಾರಂಭ ಮುಕ್ತಾಯವಾಯಿತು.