ಮಡಂಗಾವ್ ನಗರದ ನಿವೃತ್ತ ಪ್ರಾಚಾರ್ಯ ಪರಮೇಶ್ವರ ಭಟ್ ದಂಪತಿಗಳಿಗೆ ಸನ್ಮಾನ
Tribute to Parameshwara Bhatt, retired principal of Madangaon city
ಕುಮುಟಾ 03 : ಗೋವಾ ಹವ್ಯಕ ವಲಯದ ಉತ್ಸಾಹದ ವಲಯೋತ್ಸವ ಹವ್ಯಕ ಮಹಾಮಂಡಲದ ಕುಮಟಾ ಮಂಡಲಾಂತರ್ಗತ ಗೋವಾ ವಲಯದ ವಲಯೋತ್ಸವ ಮಡಂಗಾವ್ ನಗರದ ಸಿದ್ಧ ದತ್ತ ಮಂದಿರದಲ್ಲಿ ಉತ್ಸಾಹ ಸಡಗರಗಳಿಂದ ಜರುಗಿತು. ಆರಂಭದಲ್ಲಿ ಸುಮಂಗಲಿಯರಿಂದ ಕುಂಕುಮಾರ್ಚನೆ, ವೈದಿಕರಿಂದ ಮಂತ್ರ ಪಠನೆ ಹಾಗೂ ಸಾಮೂಹಿಕ ಗುರು ಪಾದುಕಾ ಸ್ತೋತ್ರ ಪಠನೆ ನಡೆಯಿತು. ಅನಂತರ ನಡೆದ ಸಭಾ ಕಾರ್ಯಕ್ರಮ ಶಂಖನಾದ ಹಾಗೂ ಗುರು ವಂದನೆ ಯೊಂದಿಗೆ ಆರಂಭವಾಯಿತು. ಸಂಗೀತಾ ಕೃಷ್ಣಮೂರ್ತಿ ಪ್ರಾರ್ಥನಾ ಗೀತೆ ಹಾಡಿದರು. ವಲಯದ ಅಧ್ಯಕ್ಷ ಮಹಾಬಲ ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯದರ್ಶಿ ಶ್ರೀಪಾದ ರಾವ್ ವರದಿಯನ್ನು ಮಂಡಿಸಿದರು.ಕಾಮಾಕ್ಷಿ ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಚಾರ್ಯ ಪರಮೇಶ್ವರ ಭಟ್ ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯದ ಉಪಾಧ್ಯಕ್ಷ ಈಶ್ವರ ಹೆಗಡೆ ಅಭಿನಂದನಾ ಭಾಷಣ ಮಾಡಿದರು. ಪರಮೇಶ್ವರ ಭಟ್ ತಮ್ಮ ಜೀವನಾನುಭವವನ್ನು ಹಂಚಿಕೊಂಡರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಳೆದ ತಿಂಗಳು ನಡೆದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದ ಐದು ಜನರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.ಆನಂತರ ಮಾತನಾಡಿದ ಕುಮಟಾ ಹವ್ಯಕ ಮಂಡಲದ ಮಾತೃ ಪ್ರಧಾನೆ ಶ್ರೀಮತಿ ಲಲಿತಾ ಹೆಗಡೆ ಹೆಚ್ಚಿನ ಸಂಖ್ಯೆಯಲ್ಲಿ ಗುರು ಪಾದುಕಾ ಸ್ತೋತ್ರವನ್ನು ಪಠಿಸಲು ಕರೆ ನೀಡಿದರು.
ಕುಮಟಾ ಮಂಡಲದ ಅಧ್ಯಕ್ಷ ಎಸ್ ವಿ ಹೆಗಡೆ ಭದ್ರನ್ ಅವರು ಮಾತನಾಡಿ ‘ಗೋವಾ ಹವ್ಯಕ ವಲಯ ಸಂಸ್ಥಾನದವರ ಮಾರ್ಗದರ್ಶನದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು. ಹವ್ಯಕ ಮಹಾಮಂಡಲದ ಉತ್ತರ ಕನ್ನಡ ಪ್ರಾಂತ ಉಪಾಧ್ಯಕ್ಷ ಜಿ ಎಸ್ ಹೆಗಡೆ ತಮ್ಮ ಭಾಷಣದಲ್ಲಿ ‘ ಶ್ರೀಗಳ ಕನಸಾದ ವಿಷ್ಣು ಗುಪ್ತ ವಿಶ್ವ ವಿದ್ಯಾಲಯದ ಯಶಸ್ಸಿಗೆ ಶ್ರಮಿಸೋಣ’ ಎಂದು ಕರೆ ನೀಡಿದರು. ಗುರಿಕಾರ ಗೀರೀಶ ಹೆಗಡೆ ವಂದಿಸಿದರು. ಗಂಗೂಬಾಯಿ ಭಟ್ಟ ಹಾಗೂ ರೇಖಾ ಹೆಗಡೆ ಅವರು ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 