ಕಾಂಗ್ರೇಸ್‌ನ ಬಿ ಬಿ ಅಸೂಟಿ ಶಾಂತಣ್ಣ ಮುಳವಾಡ ಅವರಿಗೆ ಸನ್ಮಾನ
Tribute to Congress' B.B. Asuti Shantanna Mulawada
ಗದಗ 10: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘ, ಹುಬ್ಬಳ್ಳಿ ಇದರ 2025-30ನೇ ಸಾಲಿನ ಆಡಳಿತ ಮಂಡಳಿಯ ಚುನಾವಣೆಯು ನ. 09ರ ರವಿವಾರ ದಂದು ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಲ್ಲಿ ಜರುಗಿತು. ಈ ಒಂದು ಐತಿಹಾಸಿಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನೌಕರರ ಸಹಕಾರಿ ಪತ್ತಿನ ಸಂಘದ ಚುನಾವಣೆಯ ಅಭ್ಯರ್ಥಿಗಳಾದ ಆರ್ ಎಚ್ ಜಿಗಳೂರ,ಎ. ಎನ್. ನಾಗೋಜಿ, ಎಫ್ ಎಸ್ ಪವಾಡಶೆಟ್ಟರ, ಎಮ್. ಎಮ್. ಕಟಗೇರಿ, ಎಸ್. ಎಸ್. ಕುಲಕರ್ಣಿ ಎಸ್. ಎಸ್. ಸೋಮನಾಳ, ಜಿ ಡಿ. ಹಡಪದ, ಜೆ ಆರ್ ಆದಿ, ನಾಗಯ್ಯ ಆರ್ ಮಠಪತಿ, ಬಸವರಾಜ ಎಸ್ ಪಾಟೀಲ್, ವ್ಹಿ ಕೆ ಕಮ್ಮಾರ, ಶರಣಪ್ಪ ಕೆಂಚರೆಡ್ಡಿ, ಸಿ ವ್ಹಿ ಬಸವರೆಡ್ಡಿ, ಎಚ್ ಎಸ್ ಬೋಜೆದಾರ, ಎಚ್ ಎಸ್ ಗೋಣೆಮ್ಮನವರ ಎಲ್ ಎಫ್ ಸಾಲ್ಮನಿ, ಸಿ ಎ ಚರಂತಿಮಠ ಉಮೇಶ ಬಾಳಪ್ಪ ಹಾರೋಗೇರಿ, ಎಮ್ ಯು ದೊಡ್ಡವಾಡ ಇವರನ್ನು ಒಳಗೊಂಡ ಸ್ವಾಭಿಮಾನಿ ಬಳಗ ಚುನಾವಣಾ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಆರಿಸಿ ತರುವಲ್ಲಿ ಅವಿರತ ಪರಿಶ್ರಮವಹಿಸಿ ಮುಂದಾಳತ್ವವಹಿಸಿದ ಮುಖಂಡರಾದ ಶಾಂತಣ್ಣ ಮುಳವಾಡ ರವರಿಗೆ ಗದಗ ಶಹರ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರು ಹಾಗೂ ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಬಿ ಬಿ ಅಸೂಟಿ, ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಸದಸ್ಯರು ಹಾಗೂ ಗದಗ ಜಿಲ್ಲಾ ಯೋಜನಾ ಸಮಿತಿಯ ಸದಸ್ಯರಾದ ಜನಾಬ್ ಬರಕತ್ ಅಲಿ ಮುಲ್ಲಾ, ಹಾಗೂ ಕಾಂಗ್ರೇಸ್ ಮುಖಂಡರಾದ ಆಂಜನೇಯ ಕಟಗಿ, ರವರು ಶಾಲು ಹೊದಿಸಿ, ಹಾರ ತೊಡಿಸಿ ಸಿಹಿ ತಿನಿಸುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಆರ್ ಎಸ್ ಕಾಶಿಗೌಡರ, ಗೋಪಾಲ ರಾಯರ, ಬಿ ಎಚ್ ರಾಮೇನಹಳ್ಳಿ ಎಸ್ ಕೆ ಅಯ್ಯನಗೌಡರ,ವಸಂತ ಗೋದಿ, ಗುರುನಾಥ ಗನೋಜಿ,ಎಚ್ ಸಿ ಕೊಪ್ಪಳ, ಎಮ್ ಆಂಜನೇಯ, ಎಮ್ ವೈ, ಮರಿಬಸಣ್ಣವರ, ಎಚ್ ಎಚ್ ಇಳಗೇರ, ಎಫ್ ಎಚ್ ಗೌಡರ, ಎ ಕೆ ಕರ್ನಾಚಿ, ಎಸ್ ಎಫ್ ಸಂಗಣ್ಣವರ, ಶಿವಣ್ಣ ಎಚ್ ಕಟ್ಟಿ, ಎಮ್ ಕೆ ಕುಂಬಾರಗೇರಿ, ಎಸ್ ವೈ ಬೇಪಾರಿ, ಎಸ್ ಕೆ ಬೂದಿಹಾಳ್, ಹಾಗೂ ಮತ್ತು ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 