ಧಾರವಾಡ 03: ಬುಡಕಟ್ಟು ಸಮುದಾಯಗಳಿಗೆ ಮೀಸಲಾದ ಸರಕಾರಿ ಯೋಜನೆಗಳು ತಲುಪಿದಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎಂ.ಆರ್ ಗಂಗಾಧರ ಅಭಿಪ್ರಾಯಪಟ್ಟರು.
ಅವರು ಕರ್ನಾ ಟಕ ರಾಜ್ಯ ಪರಿಶಿಷ್ಟ ಪಂಗಡ ಇಲಾಖೆ, ಕರ್ನಾ ಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಪ್ರಾಯೋಜಿತ ಕರ್ನಾ ಟಕವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಸುವರ್ಣ ಮಹೋತ್ಸವ ಭವನದಲ್ಲಿ ' ಭಾರತದಲ್ಲಿನ ಪರಿಶಿಷ್ಟ ಪಂಗಡ ಸಮುದಾಯಗಳ ಜೀವನೋಪಾಯ' ಎಂಬ ವಿಷಯದ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡುತ್ತ ಮಾತನಾಡಿದರು.
ಪ್ರಮುಖವಾಗಿ ಆದಿವಾಸಿ ಬುಡಕಟ್ಟು ಸಮುದಾಯಗಳು ಅರಣ್ಯದ ಅಂಚಿನಲ್ಲಿ ಮತ್ತು ಅರಣ್ಯದ ಹೊರಗೆ ವಾಸಿಸುತ್ತಿದ್ದು ಅವರಿಗೆ ಇಂದು ಎಲ್ಲ ರೀತಿಯ ಸೌಕರ್ಯ ಮತ್ತು ಸೌಲಭ್ಯಗಳನ್ನು ಒದಗಿಸಬೇಕಾಗಿದೆ ಎಂದರು. ಸರಕಾರವು ಬುಡಕಟ್ಟು ಸಮುದಾಯಗಳಿಗೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದ್ದು ಅವು ನಿಜವಾಗಿಯೋ ಅವರಿಗೆ ತಲುಪುವ ಅವಶ್ಯಕತೆ ಇದೆ ಎಂದ ಅವರು ಇಂದು ಆದಿವಾಸಿ ಸಮುದಾಯಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವರು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯ ಹೊಂದಿದ್ದಾರೆ ಆದರೆ ನಗರಿಕರಣ ಕೈಗಾರಿಕರಣ ಅರಣ್ಯ ಒಕ್ಕಲೆಬಿಸುವಿಕೆಯಿಂದ ಇಂದು ವಲಸೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ವಿವರಿಸಿದರು.
ಧಾರವಾಡ ಜಿಲ್ಲಾ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಮಾತನಾಡಿ ಬುಡಕಟ್ಟು ಆದಿವಾಸಿ ಜನಾಂಗದ ಏಳ್ಗೆಗಾಗಿ ಶ್ರಮಿಸುತ್ತಿರುವ ವೃತ್ತಿಪರ, ಪ್ರಾಧ್ಯಪಕರು, ಸಂಶೋಧಕರು ಮತ್ತು ಯೋಜನೆ ರೂಪಿಸುವವರು ಬುಡಕಟ್ಟು ಸಮುದಾಯಗಳ ಒಳಗೊಳ್ಳುವಿಕಯಿಂದ ನಿಜವಾದ ಸಮಸ್ಯೆಗಳ ಕುರಿತು ಸಂಶೋಧನೆ ನಡೆಸಿ, ಅವರಿಗೆ ಲಭ್ಯವಿರುವ ಸಂಪನ್ಮೂಲಗಳ ಸಹಾಯದಿಂದ ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದ್ದು, ಪುಸ್ತುತ ಜಾಗತಿಕರಣದ ಪ್ರಭಾವದಿಂದ ಬುಡಕಟ್ಟು ಸಮುದಾಯಗಳ ಸಂಸ್ಕೃತಿ, ಅವರ ಪರಂಪರೆ, ಸಂಪ್ರದಾಯ, ಕಲೆ ಮತ್ತು ಅವರ ಆಹಾರ ಪದ್ಧತಿಯನ್ನು ಮುಂದುವರೆದ ಸಮುದಾಯಗಳು ಅವರ ಉಡುಗೆ ತೊಡೆಗೆಗಳನ್ನು ವಾಣಿಜ್ಯಕರಣ ಮಾಡಿಕೊಂಡಿರುವದು ದುರದೃಷ್ಟಕರ ಸಂಗತಿ ಎಂದ ಅವರು ಆದಿವಾಸಿ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕೃತಿ, ಕೌಶಲ್ಯ, ಆಹಾರ ಪದ್ದತಿ, ಔಷಧಿಗಳಿಗೆ ಕಾನೂನು ಬದ್ಧವಾಗಿ ಆದಿವಾಸಿಗಳ ಹಕ್ಕುಗಳಿಗೆ ಒಳಪಡಬೇಕು ಎಂದ ಅವರು ಬುಡಕಟ್ಟು ಆದಿವಾಸಿ ಸಮುದಾಯಗಳಿಗೆ ಭೂಮಿ ಸೇರಿದಂತೆ ಎಲ್ಲ ರೀತಿಯಿಂದ ಸಮಪಾಲು ನಿಡಬೇಕು ಎಂದು ವಿವರಿಸಿದರು.
ಬುಡಕಟ್ಟು ಸಮುದಾಯಗಳ ಚಿಂತಕ ಡಾ. ಕೇದಾರನಾಥ ತಂಬೂರಿಮಠ ಮಾತನಾಡಿ ಬಹುಶಿಸ್ತಿಯ ಸಂಶೋಧನೆಗಳ ಮೂಲಕತ ಆದಿವಾಸಿ ಬುಡಕಟ್ಟು ಜನಾಂಗಗಳು ಕುರಿತು ಇನ್ನಷ್ಟು ಅಧ್ಯನಗಳು ನಡೆಯಬೇಕು ಬುಡಕಟ್ಟು ಸಮುದಾಯಗಳ ಕುರಿತು ಚಚರ್ೆಗಳು ನಡೆಯುವುದರಿಂದ ಅವರ ನಿಜವಾದ ಸಮಸ್ಯಗಳು ಅರ್ಥವಾಗುವುದರ ಜೊತೆಗೆ ಯೋಜನೆಗಳನ್ನು ರೂಪಿಸುವಲ್ಲಿ ಸಹಾಯಕವಾಗಲಿದೆ ಎಂದರು.
ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ಧೆ ಶಕರಾದ ಪ್ರೊ. ಟಿ.ಟಿ.ಬಸವನಗೌಡ ಮಾತನಾಡಿ ಸರಕಾರ ಮತ್ತು ಸಮುದಾಯಗಳ ಕೊಂಡಿಯಾಗಿ ಇಂದು ಬುಡಕಟ್ಟು ಸಂಶೋಧನಾ ಸಂಸ್ಥೆಯು ಅವರ ಸಮಾಜಿಕ ಆರ್ಥಿ ಕ, ಸಂಸ್ಕೃತಿ ಕುರಿತಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು.
ವಿಚಾರ ಸಂಕಿಣದಲ್ಲಿ ಕರ್ನಾ ಟಕದ ಪರಿಶಿಷ್ಟ ಪಂಗಡ ಮೀಸಲಾತಿ, ಕರ್ನಾ ಟಕದಲ್ಲಿ ಪರಿಶಿಷ್ಟ ಪಂಗಡಗಳ ಬುಡಕಟ್ಟು ಸಮುದಾಯಗಳ ಜೀವನೋಪಾಯ, ಗೋವಾ ರಾಜ್ಯದಲ್ಲಿನ ಬುಡಕಟ್ಟು ಸಮುದಾಯದ ಶಿಕ್ಷಣ ಮಟ್ಟ, ಬುಡಕಟ್ಟು ಸಮುದಾಯಗಳ ಜೀವನೋಪಾಯ ಮತ್ತು ಡಾ. ಅಂಬೇಡ್ಕರ್ ಅವರ ಚಿಂತನೆಗಳು ಎಂಬ ವಿಷಯದ ಕುರಿತು ತಾಂತ್ರಿಕ ಗೋಷ್ಠಿಗಳು ನಡೆದವು. ಅನೇಕ ಆದಿವಾಸಿ ಬುಡಕಟ್ಟು ಜನಾಂಗದ ಸಮುದಾಯದವರು ಭಾಗವಹಿಸಿದ್ದರು.
ಕವಿವಿಯ ಅಂಬೇಡ್ಕರ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಸುಭಾಚಂದ್ರ ನಾಟೀಕಾರ, ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇ ಶಕ ಪ್ರೊ. ಟಿ.ಟಿ.ಬಸವನಗೌಡ, ಡಾ. ಕೇದಾರಿನಾಥ ತಂಬೂರಿಮಠ, ಡಾ. ಶಿವರುದ್ರ ಕಲ್ಲೋಳಕರ, ಡಾ. ಬಿ.ಶಿವಪ್ಪ, ಡಾ. ಶೀಲಾಧರ ಮುಗಳಿ, ಗೋವಾದ ಸಂಶೋಧಕ ಡಾ .ಅರವಿಂದ ಹಲಾಂಕರ್, ಡಾ. ಸದಾನಂದ ಸುಗಂಧಿ, ಸೇರಿದಂತೆ ವಿದ್ಯಾರ್ಥಿ ಗಳು ಸಂಶೋಧಕರು, ಪ್ರಾಧ್ಯಾಪಕರು ಭಾಗವಹಿಸಿದ್ದರು.