ಜನಪದ ಕಲಾವಿದರನ್ನು ಗೌರವದಿಂದ ನೋಡಿ: ಡಾ. ನಾವಲಗಿ
Treat folk artists with respect: Dr. Navalagi
ಜನಪದ ಕಲಾವಿದರನ್ನು ಗೌರವದಿಂದ ನೋಡಿ: ಡಾ. ನಾವಲಗಿ
ಬೆಳಗಾವಿ 24: ಇಂದಿನ ದಿನಗಳಲ್ಲಿ ಜನಪದ ಕಲಾವಿದರನ್ನು ಕೀಳಾಗಿ ನೋಡುತ್ತಿದ್ದಾರೆ. ಇದರಿಂದ ಈ ಕಲೆಯ ಮೌಲ್ಯ ಕಡಿಮೆಯಾಗುತ್ತಲಿದೆ. ಇದರಿಂದ ಜನಪದ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕು. ಅವರನ್ನು ಗೌರವದಿಂದ ಕಾಣಬೇಕು ಎಂದು ಜನಪದ ತಜ್ಞ, ಸಾಹಿತಿ ಗೋಕಾದ ಡಾ. ಸಿ. ಕೆ. ನಾವಲಗಿ ಇಂದಿಲ್ಲಿ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ದಿ. 23 ಮಂಗಳವಾರದಂದು 98 ನೇ ನಾಡಹಬ್ಬ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ‘ಜನದಪ ಕಲಾವಿದರ ಹಾಡು-ಪಾಡು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತ ಅವರು ಮಾತನಾಡುತ್ತಿದ್ದರು.
ಜಾನಪದ ಕಲಾವಿದರಿಗೆ ಕೊಡಬೇಕಾದ ಸ್ಥಾನ ಮಾನ ನೀಡಬೇಕಾದ ಗೌರವವನ್ನು ನೀಡಿದಾಗ ಮಾತ್ರ ನಶಿಸಿ ಹೋಗುತ್ತಿರುವ ಈ ಕಲೆ ಪುನರ್ಜನ್ಮ ಪಡೆಯಬಹುದೆಂದು ಡಾ. ನಾವಲಗಿಯವರು ಹೇಳಿದರು.
ಸಾನಿಧ್ಯವನ್ನು ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮಿಜಿಯವರು ತಮ್ಮ ಆಶಿರ್ವಚನದಲ್ಲಿ ಜಾನಪದ ಕಲಾವಿದರಿಗೆ ಮಠಗಳು, ಸಂಘಸಂಸ್ಥೆಗಳು ಮಹತ್ವ ನೀಡಬೇಕು. ಪ್ರೋತ್ಸಾಹ ನೀಡಬೇಕು, ಸರ್ಕಾರ ಕೂಡ ಈ ಕಲಾವಿದರ ಮೇಲೆ ಬೆಳಕನ್ನು ಚೆಲ್ಲಿ ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವುದರ ಮೂಲಕ ಎಲ್ಲರಿಗೂ ಪರಿಚಯಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಾಹಿತಿ ಡಾ. ಬಸವರಾಜ ಜಗಜಂಪಿಯವರು ಮಾತನಾಡಿ ಜನಪದ ಕಲಾವಿದರು ಪ್ರತಿಭಾವಂತರು. ಈ ನೆಲದ ಮಣ್ಣಿನಿಂದ ಹುಟ್ಟಿದವರು. ನಿರಕ್ಷರಿಗಳು. ಹೆಸರು ಇಲ್ಲದವರು. ಹೆಸರು ಒಲ್ಲದವರು. ಈ ಕಲೆಯನ್ನು ನಶಿಸಿ ಹೋಗದಂತೆ ಕಾಳಜಿಯಿಂದ ನಡೆದುಕೊಳ್ಳಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಗುರುಗೌಡ ಪಾಟೀಲ, ಡಾ. ಉಮೇಶ ಪಾಟೀಲ, ಜಯಶ್ರೀ ಮಾಳಗಿ, ರಾಜು ಪದ್ಮಣ್ಣವರ, ಸಿ. ಎಂ. ನರಸಣ್ಣವರ ಉಪಸ್ಥಿತರಿದ್ದರು. ಪ್ರೊ. ಮಹಾಂತೇಶ ಕಂಠಿ ಸ್ವಾಗತಿಸಿದರು. ಸುಮಾ ಕಿತ್ತೂರ ವಂದಿಸಿದರು. ಅನ್ನಪೂರ್ಣಾ ಹಿರೇಮಠ ನಿರೂಪಿಸಿದರು. ರಾಜೇಶ್ವರಿ ಹಿರೇಮಠರ ‘ಬೆಳ್ಳಿಚುಕ್ಕಿ’ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 